ಧಾರವಾಡ: ಸದ್ಯ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಿದ್ದು, 2023ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಸಲೀಂ ಅಹ್ಮದ ಇಂದಿಲ್ಲಿ ಹೇಳಿದರು.
ಫಲಿತಾಂಶ ಪ್ರಕಟವಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಲೀಂ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ, ವಿಚಾರ ಧಾರೆ, ನಾಯಕತ್ವಕ್ಕೆ ಗೆಲುವಾಗಿದೆ ಎಂದರು.
ಹಾನಗಲ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಗೆಲುವು ಆಗಿದೆ. ಈಗ ಇಲ್ಲಿಯೂ ಗೆಲುವು ಆಗಿದೆ. ಇದು 2023ರ ಚುನಾವಣೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.
ಗ್ರಾಮ ಸ್ವರಾಜ್ಯವನ್ನು ದುರ್ಬಲ ಮಾಡಿರುವ ಬಿಜೆಪಿ ಸರ್ಕಾರ ಗ್ರಾ.ಪಂ. ಗಳಿಗೆ ಸರಿಯಾಗಿ ಅನುದಾನ ನೀಡುತ್ತಿರಲಿಲ್ಲ. ಪಂಚಾಯತ್ ರಾಜ್ಯ ಕನಸು ರಾಜೀವ ಗಾಂಧಿಯವರದಾಗಿದ್ದು, ಅದಕ್ಕೆ ಶಕ್ತಿ ನೀಡುವ ಕೆಲಸ ಈ ಸರ್ಕಾರ ಮಾಡಿರಲಿಲ್ಲ. ಸರ್ಕಾರದ ಈ ವೈಫಲ್ಯಗಳನ್ನು ಜನರಿಗೆ ಹೇಳಿದ್ದೇವು. ಅದರಿಂದ ಜನ ನಮಗೆ ಬೆಂಬಲ ನೀಡಿದ್ದಾರೆ. ಇದು ಕಾರ್ಯಕರ್ತರ ಮತ್ತು ಪಕ್ಷದ ನಾಯಕರ ಗೆಲುವು ಎಂದರು.
ಕಳೆದ ಮೂರು ವರ್ಷ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ. ರೈತರ ರಕ್ಷಣೆಗೆ ಸರ್ಕಾರ ಬರಲಿಲ್ಲ. ಕೃಷಿ ಕಾಯಿದೆಯನ್ನು ಸಹ ಮುಂದಿಟ್ಟುಕೊಂಡು ನಾವು ಚುನಾವಣೆಗೆ ಹೋಗಿದ್ದೇವು. ಸದ್ಯ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಿದೆ
2023ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿ ದರು. ಯುವಕರಿಗೆ ಉದ್ಯೋಗ ಸಹ ನೀಡಿಲ್ಲ. ಅವಕಾಶ ಕೊಟ್ಟರೆ ಸ್ವರ್ಗ ತೋರಿಸು ತ್ತೇವೆ ಎಂದಿದ್ದರು. ಆದರೆ ಕೊರೊನಾದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನರಿಗೆ ನರಕ ತೋರಿಸಿದೆ. ನರೇಂದ್ರ ಮೋದಿಗೆ ಅಹಂ ಬ್ರಹ್ಮಾಸ್ಮಿ ಅನ್ನೋದು ಸೇರುತ್ತದೆ. ಅವರು ನಾನೇ ಅಂತಾ ಅಂಹಕಾರದಿಂದ ಹೊರಟಿದ್ದಾರೆ. ಅವರ ಅಹಂಕಾರಕ್ಕೆ ೭೦೦ ರೈತರ ಸಾವು ಆಗಿದೆ. ಈ ಸರ್ಕಾರವನ್ನು ನಾವು ಬೆತ್ತಲೆ ಮಾಡುವ ಕೆಲಸ ಮಾಡುತ್ತೇವೆ ಎಂದರು.