ವಿದ್ಯಾಗಿರಿಯಲ್ಲಿ ಮತ್ತೆರಡು ವಂಚನೆ ದೂರು ದಾಖಲು
ಧಾರವಾಡ: ಕೋಟ್ಯಾಂತರ ರೂಪಾಯಿಗಳನ್ನು ಕಬಳಿಸಿರುವ ಇಲ್ಲಿನ ಕೆ ಐ ಎ ಡಿಬಿಯ ಹಗರಣಗಳ ಸರಣಿ ಈಗ ಮುಂದುವರೆದಿದೆ.
ಈಗಾಗಲೇ 20 ಕೋಟಿ ಹಗರಣದ ತನಿಖೆ ಸಿಐಡಿಯಲ್ಲಿ ಚಾಲ್ತಿಯಲ್ಲಿರುವಾಗಲೇ ಮತ್ತೆರಡು ಪ್ರತ್ಯೇಕ ಪ್ರಕರಣಗಳು ಇಲ್ಲಿನ ವಿದ್ಯಾಗಿರಿ ಠಾಣೆಯಲ್ಲಿ ದಾಖಲಾಗಿವೆ.
ಒಂದರಲ್ಲಿ ಭೂ ಮಾಲೀಕರ ಹೆಸರಿನಲ್ಲಿ ವಂಚನೆ ಮಾಡಿದ್ದರೆ, ಇನ್ನೊಂದರಲ್ಲಿ ಕೆಐಎಡಿಬಿಯ ಅಧಿಕಾರಿಗಳು ಶಾಮೀಲಾಗಿ ರೈತ ಕರೆಪ್ಪ ಪೂಜಾರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಕೆ ಎಲ್ ಆರ್ ವಿಭಾಗದ ನವೀನಕುಮಾರ್ ತಳವಾರ, ಗ್ರೇಡ್ – ಉಪ ತಹಸೀಲ್ದಾರ್ ಪ್ರವೀಣ ಪೂಜಾರ, ಎ ತ್ರಿ ವಿ.ಡಿ.ಸಜ್ಜನ, ಶಂಕರ ತಳವಾರ, ಮಹಾದೇವಪ್ಪ ಶಿಂಪಿ, ಹೇಮಚಂದ್ರ ಚಿಂತಾಮಣಿ, ಮುದ್ದಿ ವಿರುದ್ಧ ದೂರು ದಾಖಲು ಆಗಿದೆ. ಅದೇ ರೀತಿ ಕೆಐಎಡಿ ಏಜೆಂಟ್‌ಗಳಾದ ಮೆಹಬೂಬ ಅಶ್ಫಾಕ್ ದುಂಡಸಿ, ರವಿ ಕುರಬೆಟ್ಟ, ರೈತನ ಸಂಬಂಧಿಗಳಾದ ತುಕಾರಾಂ ಬೀರಪ್ಪ ಪೂಜಾರ, ಕರಿಯಪ್ಪ ಭೀಮಪ್ಪ ಪೂಜಾರ, ರಾಮಪ್ಪ ಭೀಮಪ್ಪ ಪೂಜಾರ, ಫಕೀರಪ್ಪ ಭೀಮಪ್ಪ ಪೂಜಾರ ವಿರುದ್ಧ ದೂರು ದಾಖಲಾಗಿದೆ.
ಈಗಾಗಲೇ 20 ಕೋಟಿ ರೂಪಾಯಿ ಗಳ ಹಗರಣದಲ್ಲಿ ಕೆಐಎಡಿಬಿಯ ನಿವೃತ್ತ ವಿ.ಡಿ. ಸಜ್ಜನ, ಮ್ಯಾನೇಜರ್ ಶಂಕರ ತಳವಾರ, ಏಜೆಂಟ್ ಮೆಹಬೂಬ್ ಅಲಿಯಾಸ್ ಅಶ್ಪಾಕ್ ದುಂಡಸಿಯನ್ನು ಸಿಐಡಿ ಬಂಧಿಸಿ ಕಾರಾಗೃಹಕ್ಕೆ ಕಳಿಸಿದ್ದಾರೆ. ಇದುವರೆಗೆ ಪ್ರಕರಣದಲ್ಲಿ ಮೂವರನ್ನು ಮಾತ್ರ ಬಂಧಿಸಲಾಗಿದ್ದು, ಇತರ ಬಂಧನ ಯಾವಾಗ ಎಂಬ ಪ್ರಶ್ನೆ ಎನ್ನುವಂತಾಗಿದ್ದು, ಒಟ್ಟಿನಲ್ಲಿ ಕೆಐಎಡಿಬಿಯಲ್ಲಿ ಬಗೆದಷ್ಟು ಹಗರಣಗಳು ಬಯಲಾಗುತ್ತಿವೆ.