ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದಲ್ಲಿ ಯುವಕನೊಬ್ಬ ಮೂರ್ಛೆ ರೋಗದಿಂದ ಕುಸಿದು ಬಿದ್ದ ವೇಳೆಯಲ್ಲಿ ಪೊಲೀಸರು ಆತನಿಗೆ ಕೀಲಿಕೈ ಕೊಟ್ಟು, ಕೈ ಉಜ್ಜಿ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕುಂದಾಪುರ ಮೂಲದ ನಾಗರಾಜ ಮೂರ್ಛೆ ರೋಗದಿಂದ ಬಿದ್ದಿದ್ದ ಯುವಕನಾಗಿದ್ದಾನೆ. ಬೆಳಿಗ್ಗೆಯಿಂದ ಏನೂ ತಿನ್ನದ ಕಾರಣ ಹೀಗೆ ಆಗಿದೆ ಎಂದು ಯುವಕ ತಿಳಿಸಿದ್ದಾರೆ.
ಹುಬ್ಬಳ್ಳಿ ಪೊಲೀಸರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.