ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಂದು ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿಂದು ಯುಜಿಡಿ ಕಾಮಗಾರಿ ಅವ್ಯವಸ್ಥೆ, ಜೆಟ್ಟಿಂಗ್ ಮಷೀನ್ ಕಾರ್ಯ ವೈಖರಿ, ಅಲ್ಲದೇ ಸದಸ್ಯರ ಪ್ರಶ್ನೆಗಳಿಗೆ ಆಂಗ್ಲ ಭಾಷೆಯಲ್ಲಿ ಉತ್ತರ ಮುಂತಾದವುಗಳು ಪಕ್ಷಾತೀತವಾಗಿ ಪ್ರತಿಧ್ವನಿಸಿದವು.
ಸಭೆಯು ಮೇಯರ್ ವೀಣಾ ಭರದ್ವಾಡ ಅಧ್ಯಕ್ಷತೆಯಲ್ಲಿ ತಡವಾಗಿ ಆರಂಭವಾದ ಸಭೆಯಲ್ಲಿ .ಪಾಲಿಕೆಯ ವ್ಯಾಪ್ತಿಯಲ್ಲಿ ಜೆಟ್ಟಿಂಗ್ ಮಷಿನ್ ಕಾರ್ಯವೈಖರಿ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಯುಜಿಡಿ ಕಾಮಗಾರಿಯ ಬಗ್ಗೆ ದೂರು ನೀಡಿದರೂ ಕೂಡ ಯಾವುದೇ ರೀತಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳಿಗೆ ಹೀಗೆ ಆದರೇ ಜನಸಾಮಾನ್ಯರ ಪಾಡು ಏನು ಎಂದು ಪ್ರಶ್ನಿಸಿದರು.
ಉಣಕಲ್ ಕೆರೆ ಒಳಚರಂಡಿ ಸಮಸ್ಯೆಗೆ 15 ಕೋಟಿ ವೆಚ್ಚವಾಗಿರುವದಕ್ಕೆ ಆಡಳಿತಾರೂಢ ಪಕ್ಷದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ
ರಾಜಣ್ಣ ಕೊರವಿ, ಉಣಕಲ್ ಕೆರೆ ಒಳಚರಂಡಿ ನೀರು ಸೇರಬಾರದು ಎಂದು 15 ಕೋಟಿ ಖರ್ಚು ಮಾಡಲಾಗಿದೆ. ಎಂಟು ವರ್ಷ 15ಕೋಟಿ ಖರ್ಚು ಆಯ್ತು. ಆದರೂ ನೀರು ಬರುವುದು ಬಂದಾಗಿಲ್ಲ. ನಿಜಕ್ಕೂ ಖೇದವೆನಿಸುತ್ತದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆ ಹಸ್ತಾಂತರ ವಿಷಯದಲ್ಲಿ ಸ್ಪಷ್ಟತೆ ಇಲ್ಲದೇ ಗೊಂದಲ ಸೃಷ್ಟಿಯಾಗಿದೆ ಎಂದು ವಿಪಕ್ಷ ಸದಸ್ಯರು ಆಕ್ಷೇಪಿಸಿದರು.
ವಿಪಕ್ಷ ನಾಯಕಿ ಸುವರ್ಣಾ ಕಲಕುಂಟ್ಲ ಅವರು ಕೇಳಿದ ಪ್ರಶ್ನೆಗೆ ಉತ್ತರವನ್ನು ಅಧಿಕಾರಿಗಳು ಇಂಗ್ಲಿಷಿನಲ್ಲಿ ನೀಡಿರುವುದಕ್ಕೆ ಸಹ ಪಕ್ಷ ಬೇಧವಿಲ್ಲದೇ ಖಂಡಿಸಿದರು.
ಪಾಲಿಕೆ ಹಿರಿಯ ಸದಸ್ಯ ತಿಪ್ಪಣ್ಣ ಮಜ್ಜಗಿ, ಆಯುಕ್ತರು ಇಂಗ್ಲಿಷ್ ನಲ್ಲಿ ಯಾಕೆ ಕೊಟ್ಟಿದ್ದಾರೆ ಎಂದು ಉತ್ತರ ಹೇಳಿ. ಅಧಿಕಾರಿಗಳು ಕ್ಷಮೆ ಕೇಳಬೇಕು. ಆಡಳಿತದಲ್ಲಿ ಅವಶ್ಯಕ ಸಂಧರ್ಭದಲ್ಲಿ ಮಾತ್ರ ಇಂಗ್ಲಿಷ್ ಮಾತ್ರ ಬಳಸಿಕೊಳ್ಳಬೇಕು. ಈ ವಿಷಯ ಕೈ ಬಿಡಿ. ಹಣಕಾಸು ಸಾಯಿ ಸಮಿತಿಯಲ್ಲಿ ಚರ್ಚಿಸಿ ಬಳಿಕ ಸರ್ಕಾರ ಕಳಹಿಸಬೇಕು. ಪಾಲಿಕೆ ಆದಾಯ ಬರುವ ನಿಟ್ಟಿನಲ್ಲಿ ನಾವು ಬದ್ಧರಾಗಿರಬೇಕು. ಇದನ್ನು ಕೈ ಬಿಟ್ಟು ಹಣಕಾಸು ಸಮಿತಿ, ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕು. ಬಳಿಕ ಸರ್ಕಾರಕ್ಕೆ ನೀಡಲಾಗಿದೆ. ಪಾರದರ್ಶಕ ಕಾಯ್ದೆ ಏನು ಹೇಳುತ್ತದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದರಿಂದ ಸ್ಥಳೀಯ ಸಂಸ್ಥೆ ಗಳ ಮೇಲೆ ಸರ್ಕಾರ ಪ್ರಾಬಲ್ಯ ಹೇರಿದಂತೆ ಆಗುತ್ತದೆ ಎಂದರು.
ಕಾಂಗ್ರೆಸ್ ಸದಸ್ಯ ಸಂದೀಲ ಕುಮಾರ, ಪಾಲಿಕೆ ಕಟ್ಟಡ ಸರಿ ಇಲ್ಲ ಎಂದು ವರದಿ ನೀಡಿದ್ದರೂ ಸಹ ಇದನ್ನು ಯಾಕೆ ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದರು. ಲೀಸ್ ಮುಗಿದಿದ್ದರೂ ಗುತ್ತಿಗೆ ಸಂಸ್ಥೆಗೆ ಯಾಕೆ ಮುಂದುವರಿಸಲಾಗಿದೆ ಎಂಬ ಎಂಐಎಂನ ನಜೀರ ಹೊನ್ಯಾಳ ಪ್ರಶ್ನೆಗೆ ಶೂನ್ಯ ಅವಧಿಯಲ್ಲಿ ಅವಕಾಶ ನೀಡುವುದಾಗಿ ಮೇಯರ್ ಹೇಳಿದರು.