ಹುಬ್ಬಳ್ಳಿ: ವಿದ್ಯಾನಗರ ಪ್ರದೇಶದಲ್ಲಿ ಬರುವ ಮಹಾನಗರಪಾಲಿಕೆಯ 48ನೇ ವಾರ್ಡಿನ ಸದಸ್ಯ ಕಿಶನ್ ಬೆಳಗಾವಿ ತಮ್ಮ ಜನ್ಮದಿನವನ್ನು ದಿ.28ರಂದು ಪೌರ ಕಾರ್ಮಿಕರೊಂದಿಗೆ ಆಚರಿಸಿಕೊಂಡರು.
ಯಾವುದೇ ಆಡಂಬರದ ಕಾರ್ಯಕ್ರಮ ಏರ್ಪಡಿಸದೇ ವಾರ್ಡ್ ಸ್ವಚ್ಛತಾ ಕಾರ್ಯ ಮಾಡುವ ಅಕ್ಷರಶಃ ಕೋವಿಡ್ ಸೇನಾನಿಗಳಾಗಿರುವ ಪೌರ ಕಾರ್ಮಿಕರಿಗೆ ಸಿಹಿ ಹಂಚಿ ಅವರೊಂದಿಗೆ ಕೇಕ್ ಕತ್ತರಿಸಿ ವಿನೂತನವಾಗಿ ಆಚರಿಸಿ ಇತರರಿಗೆ ಮಾದರಿಯಾದರು.
ಕಳೆದ ಸಪ್ಟಂಬರ್‌ನಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಕಿಶನ್ ಪಕ್ಷೇತರ ರಾಗಿ ಕಣಕ್ಕಿಳಿದು ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿ ಸುಮಾರು 140 ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ್ದ ಸದ್ದಿಲ್ಲದ ಕೆಲಸಗಳು ಅವರನ್ನು ಕೈ ಹಿಡಿದಿದ್ದವು.