ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿ ರೋಟರಿ ಶಾಲೆ ವಿದ್ಯಾರ್ಥಿಗೆ ಕೋವಿಡ್!; ಸೋಮವಾರದವರೆಗೆ ಶಾಲೆಗೆ ರಜೆ ಘೋಷಣೆ

ಹುಬ್ಬಳ್ಳಿ ರೋಟರಿ ಶಾಲೆ ವಿದ್ಯಾರ್ಥಿಗೆ ಕೋವಿಡ್!; ಸೋಮವಾರದವರೆಗೆ ಶಾಲೆಗೆ ರಜೆ ಘೋಷಣೆ

ಪಾಲಕರಿಗೆ ಮಕ್ಕಳ ಆರ್‌ಟಿಪಿಸಿಆರ್ ಮಾಡಿಸಲು ಮನವಿ

ಹುಬ್ಬಳ್ಳಿ: ಪೇಡೆನಗರಿಯ ಸತ್ತೂರ ಬಡಾವಣೆಯಲ್ಲಿರುವ ಎಸ್‌ಡಿಎಂ ವೈದ್ಯಕೀಯ ಮೆಡಿಕಲ್ ಕಾಲೇಜಿನ 300ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಕಳೆದ 25ರಿಂದ ಮಹಾವಿದ್ಯಾಲಯ ಬಂದ್ ಮಾಡಿ ಎರಡು ವಸತಿ ನಿಲಯಗಳನ್ನು ಸೀಲ್ ಡೌನ್ ಮಾಡಿದ ಬೆನ್ನ ಹಿಂದೆಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸವಿರುವ ಆದರ್ಶನಗರದ ರೋಟರಿ ಶಾಲೆಯ ವಿದ್ಯಾರ್ಥಿಯೋರ್ವನಿಗೆ ಕೊರೊನಾ ಖಚಿತ ಪಟ್ಟಿದೆ.

ಕಳೆದ ಎರಡು ಮೂರು ದಿನಗಳಿಂದ ರೋಟರಿ ಶಾಲೆಗೆ ಗೈರಾಗಿದ್ದ 9ನೇ ತರಗತಿಯ ವಿದ್ಯಾರ್ಥಿಗೆ ಇಂದು ಕೋವಿಡ್ ಖಚಿತ ಪಟ್ಟಿದ್ದು ಈ ಹಿನ್ನೆಲೆಯಲ್ಲಿ ಪಾಲಕರು ಶಾಲೆಗೆ ಈ ವಿಷಯ ತಿಳಿಸಿದ ತಕ್ಷಣ ಆಡಳಿತ ಮಂಡಳಿ ಇಂದು ಎಲ್ಲ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಿತಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ವಿಷಯ ತಿಳಿಸಿ ಮುಂದಿನ ಸೋಮವಾರದವರೆಗೆ ಎಲ್ಲ ತರಗತಿಗಳಿಗೂ ರಜೆ ಘೋಷಿಸಿದೆ.
ಕೋವಿಡ್ ದೃಢಪಟ್ಟ ವಿದ್ಯಾರ್ಥಿಯ ಅಕ್ಕ ಎಸ್ ಡಿಎಂ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿಯಾಗಿದ್ದು ಆಕೆಯಿಂದ ಆತನಿಗೆ ಹರಡಿದೆ ಎನ್ನಲಾಗಿದೆ.
ರೋಟರಿ ಶಾಲೆ ಆಡಳಿತ ಮಂಡಳಿ ಈಗಾಗಲೇ ಆದರ್ಶನಗರ ಹೈಸ್ಕೂಲ್ ವಿಭಾಗದ ಎಲ್ಲ ತರಗತಿಗಳ ವಿದ್ಯಾರ್ಥಿಗಳ ಪಾಲಕರಿಗೆ ಮಕ್ಕಳ ಆರ್ ಟಿಪಿಸಿಆರ್ ಮಾಡಿಸುವಂತೆ ಸಹ ಮನವಿ ಮಾಡಿದೆ. ಸೋಮವಾರದವರೆಗೆ ರಜಾ ನೀಡಲಾಗಿದ್ದು, ಮುಂದೆ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎನ್‌ಎಲ್‌ಇ ಸಂಸ್ಥೆಯ ಗೌರವ ಕಾರ್ಯದರ್ಶಿ ರಾಜಾ ದೇಸಾಯಿ ತಿಳಿಸಿದ್ದಾರೆ.
ಸೋಂಕಿತ ವಿದ್ಯಾರ್ಥಿ ಹಾಗೂ ಪಾಲಕರ ಜತೆ ಮಾತನಾಡಿದ್ದು ಆರೋಗ್ಯವಾಗಿದೆಯಲ್ಲದೇ ಸೋಂಕಿನ ಪ್ರಮಾಣ ಅಲ್ಪವಾಗಿದೆ ಎಂದು ತಿಳಿಸಿದ್ದಾರೆಂದು ದೇಸಾಯಿ ಹೇಳಿದರು.

ಎಸ್ ಡಿಎಂನಲ್ಲಿ ಮೊದಲು ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟು,ನಂತರ ಎಲ್ಲರನ್ನು ಆರ್ ಟಿಪಿಸಿಆರ್‌ಗೊಳಪಡಿಸಿದಾಗ ಆ ಸಂಖ್ಯೆ ೩೦೦ನ್ನು ದಾಟಿತ್ತು.

administrator

Related Articles

Leave a Reply

Your email address will not be published. Required fields are marked *