ಹುಬ್ಬಳ್ಳಿ-ಧಾರವಾಡ ಸುದ್ದಿ

’ಈದ್ಗಾ’ದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ಬೇಡ

ಗಣೇಶ ಸ್ಥಾಪನೆಗೆ ದಲಿತ ಮಹಾಮಂಡಳ ವಿರೋಧ

ದಿ. 15ರಂದು ಡಿಸಿ, ಆಯುಕ್ತರಿಗೆ ಮನವಿ

ಹುಬ್ಬಳ್ಳಿ: ಧಾರ್ಮಿಕ ಆಚರಣೆ ಹೆಸರಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಹಲವು ಕೋಮುವಾದಿಗಳು ಸನಾತನವಲ್ಲದ ಗಣೇಶೋತ್ಸವವನ್ನು ಹುಬ್ಬಳ್ಳಿಯ “ಈದ್ಗಾ ಮೈದಾನ”ದಲ್ಲಿ ಆಚರಿಸಲು ಮುಂದಾಗಿದ್ದು, ಇಂತಹ ಅನೈತಿಕ ಧಾರ್ಮಿಕ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದೆಂದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಒತ್ತಾಯಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಈದ್ಗಾ ಗಣೇಶೋತ್ಸವಕ್ಕೆ ಕಡಿವಾಣ ಹಾಕಿ ಅವಳಿನಗರದ, ರಾಜ್ಯದ ಕೋಮು ಸೌಹಾರ್ದತೆ ಕಾಪಾಡಬೇಕೆಂದು ಜಿಲ್ಲಾಡಳಿತ ಮತ್ತು ಪೊಲೀಸ್ ಆಯುಕ್ತರನ್ನು ಆಗ್ರಹಿಸಿದ್ದಾರೆ.


ಈದ್ಗಾ ಮೈದಾನ ಹುಬ್ಬಳ್ಳಿ ಸಿಟಿಎಸ್ ದಾಖಲೆಗಳ ಆರಂಭಕ್ಕೆ “ಮುಸಲ್ಲ್ಮಾನರ ನಮಾಜ ಮಾಡುವ ಸ್ಥಳ” ಅಂತ ದಾಖಲೆ ಹೊಂದಿದ ವಿವರ ಎಲ್ಲರಿಗೂ ತಿಳಿದದ್ದೆ ಆಗಿದೆ. ಆದರೆ ಯಾರೋ ದುಷ್ಟರು ತಿದ್ದಿ ಮುನ್ಸಿಪಾಲಿಟಿ ಅಂತಾ ನಮೂದಿಸಿದ್ದು ಸಹ ಈಗ ಬೇರೆ ವಿಷಯವೇ ಆಗಿದೆ. ಸ್ಥಳೀಯ ನ್ಯಾಯಾಲಯದಿಂದ ಘನ ಸರ್ವೋಚ್ಛ ನ್ಯಾಯಾಲಯದೊರೆಗಿನ ಪಯಣದ ಮೂಲಕ ವರ್ಷದ ಎರಡು ಹಬ್ಬಗಳಿಗೆ ಸಂಭಂಧಿಸಿದಂತೆ ಸಾಮೂಹಿಕ ಪ್ರಾರ್ಥನೆಗೆ ಮತ್ತು ಎರಡು ಬಾರಿ ಧ್ವಜಾರೋಹಣಕ್ಕೆ ಅವಕಾಶ ಉಳಿದಂತೆ ಸಾರ್ವಜನಿಕ ಉಪಯೋಗಕ್ಕೆ ಸದರಿ ಮೈದಾನದ ಬಳಕೆ ಇದ್ದು ಎಲ್ಲೂ ಇತರೆ ಧಾರ್ಮಿಕ ಆಚರಣೆಯ ವಿಷಯಕ್ಕೆ ಅವಕಾಶವಿಲ್ಲವಾಗಿದೆ ಎಂದರು.
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಆತಂಕದಲ್ಲೇ ಗಣೇಶೋತ್ಸವ ಆಚರಿಸುವ ಹೀನ ವಾತಾವರಣ ಅವಳಿನಗರದ ಜನತೆಗೆ ಬರಬಾರದೆಂಬುದು ಮಹಾಮಂಡಳದ ಆಶಯವಾಗಿದೆ ಎಂದರು.


ಮುಸಲ್ಮಾನರ ಪ್ರಾರ್ಥನಾ ಸ್ಥಳ ಪಾಲಿಕೆ ಆಸ್ತಿ ಎಂದು ದಾಖಲಿಸಿದ ಕಾರಣಕ್ಕೆ ಇಂತಹ ಆಚರಣೆಗೆ ಮುಂದಾಗಿರುವ ಗಣೇಶೋತ್ಸವ ಆಚರಣೆ ಮಾಡುವವರು 300 ವರ್ಷಕ್ಕೂ ಅಧಿಕ ಪುರಾತನವಾದ ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದ ಜಾಗೆ ಅತಿಕ್ರಮಿಸಿದ ಪೊಲೀಸ್ ಠಾಣೆಯ ವಿರುದ್ದ ಯಾಕೆ ಧ್ವನಿ ಎತ್ತಿಲ್ಲ. ಹೆಗ್ಗೇರಿಯಲ್ಲಿರುವ ಪಾಲಿಕೆಯ ಡಾ:ಬಿ.ಆರ.ಅಂಬೇಡ್ಕರ ಕ್ರೀಡಾಂಗಣದಲ್ಲಿ ನಿಮ್ಮ ಪಥ ಸಂಚಲನ ನಡೆದ ಮೈದಾನದಲ್ಲಿ ಗಣೇಶನ ಸ್ಥಾಪಿಸಬಹು ದಲ್ಲವೇ ಇಲ್ಲೇಕೆ ಬೇಡ ಎಂದು ಪ್ರಶ್ನಿಸಿದ್ದಾರೆ.
ನೆಹರೂ ಮೈದಾನ,ರೇಲ್ವೆ ಮೈದಾನ,ದೇಶಪಾಂಡೆ ನಗರದ ಮೈದಾನಗಳಿದ್ದರೂ ಇಲ್ಲೆಲ್ಲೂ ಸ್ಥಾಪಿತನಾಗದ ಗಣಪ ಕೇವಲ “ಈದ್ಗಾ” ದಲ್ಲೇಕೆ ಎಂದರಲ್ಲದೆ ಕಾನೂನು ಸುವ್ಯವಸ್ಥೆಗೆ ಪೆಟ್ಟು ನೀಡುವ ಮಾರಕವಾದ ಆಚರಣೆಗೆ ಕಡಿವಾಣ ಹಾಕುವದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿದೆ ಎಂದರು.
ಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ, ದಲಿತ ಮುಖಂಡರಾದ ಶ್ಯಾಮ ಜಾಧವ, ಬಸವರಾಜ ಕಲಾದಗಿ, ರೇವಣಸಿದ್ದಪ್ಪ ದೇಸಾಯಿ,ಶ್ರೀನಿವಾಸ ಬೆಳದಡಿ, ದೇವೆಂದ್ರಪ್ಪ ಇಟಗಿ, ರವಿ ಕದಂ, ಪ್ರಭು ಪ್ರಭಾಕರ, ಲೋಹಿತ್ ಗಾಮನಗಟ್ಟಿ
ಕವಿತಾ ನಾಯ್ಕರ ಮುಂತಾದವರಿದ್ದರು.

 

 

 

administrator

Related Articles

Leave a Reply

Your email address will not be published. Required fields are marked *