ಹಳಿಯಾಳ ಫ್ಯಾಕ್ಟರಿ ಕಾರ್ಯಾರಂಭ – ಸಂಶಯ ಮೂಡಿಸಿರುವ ನಡೆ
ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಒಂದೇ ಒಂದು ಸಕ್ಕರೆ ಕಾರ್ಖಾನೆ ಇಲ್ಲದಿದ್ದರೂ ರೈತರೊಂದಿಗೆ ಹೋರಾಟವನ್ನ ಮಾಡಲು ಮುಂದಾಗಿರುವ ಕುರುಬೂರು ಶಾಂತಕುಮಾರ ಅವರು, ನಿಜವಾಗಿಯೂ ರೈತರಿಗಾಗಿ ಹೋರಾಟ ಮಾಡುತ್ತಿದ್ದಾರಾ ಎಂಬ ಸಣ್ಣ ಸಂಶಯ ಆರಂಭವಾಗಿದೆ.
ರಾಜ್ಯದಲ್ಲಿ ಈಗಾಗಲೇ 54 ಸಕ್ಕರೆ ಕಾರ್ಖಾನೆಗಳು ತಮ್ಮ ಕಾರ್ಯವನ್ನ ಆರಂಭಿಸಿದ್ದು, ಇನ್ನುಳಿದ 22 ಕಾರ್ಖಾನೆಗಳು ಸಧ್ಯದಲ್ಲಿ ಕಬ್ಬನ್ನು ನುರಿಸಲು ಆರಂಭಿಸಲಿದ್ದು, ಆದರೂ ಹೋರಾಟ ಧಾರವಾಡಕ್ಕೆ ಹೋರಾಟ ಸ್ಥಳಾಂತರಿಸಿರುವುದು ನಿಜಕ್ಕೂ ಸಂಶಯಕ್ಕೆ ಕಾರಣವಾಗಿದೆ.
ಹಳಿಯಾಳದಲ್ಲಿರುವ ಖಾಸಗಿ ಮಾಲಿಕತ್ವದ ಶುಗರ್ ಪ್ಯಾಕ್ಟರಿ ಕೂಡಾ ಕಾರ್ಯಾರಂಭಿಸಿದ್ದು ನಿನ್ನೆ ವಿವಿಧೆಡೆ ಕಬ್ಬು ಕಟಾವು ಸಹ ಆರಂಭವಾಗಿದ್ದರೂ ಈ ಬಗ್ಗೆಯೂ ಮಾಹಿತಿಯಿಲ್ಲದಂತೆ ನಟಿಸುತ್ತಿರುವ ಕುರುಬೂರ ಹೋರಾಟದ ಸ್ವರೂಪವೇ ಜಿಜ್ಞಾಸೆ ಮೂಡಿಸಿದೆ.
ಸರಕಾರದ ಸಮಿತಿಯೊಂದರಲ್ಲಿ ಸ್ವತಃ ತಾವೇ ಸದಸ್ಯರಾಗಿದ್ದು, ಹಲವು ಸಭೆಗಳಲ್ಲಿ ಭಾಗವಹಿಸಿರುವ ಕುರುಬೂರು ಶಾಂತಕುಮಾರ ಅವರು, ಚುನಾವಣೆ ವರ್ಷದಲ್ಲಿ ರಾಜಕೀಯ ಮಾಡೋಕೆ ಆರಂಭಿಸಿದ್ದಾರೆಂಬ ಸಂಶಯ ಆರಂಭವಾಗಿದೆ. ಮಹತ್ವದ ಅಂಶವೆಂದರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಕ್ಕರೆ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಶುಗರ್ ಪ್ಯಾಕ್ಟರಿಯಲ್ಲಿ ರೈತರ ಬಾಕಿ ಹಣ ಇರದಂತೆ ನೋಡಿಕೊಂಡಿದ್ದು, ಇಡೀ ದೇಶದಲ್ಲಿ ಮಾದರಿಯಾಗುವ ತೀರ್ಮಾನವನ್ನ ತೆಗೆದುಕೊಂಡು ರೈತರ ಪರವಾಗಿ ನಿಂತಿರುವುದು ಸಮುದಾಯಕ್ಕೆ ಗೊತ್ತಿದೆ.
ದಶಕಗಳಿಂದ ರೈತರ ಬಾಕಿ ಹಣಕ್ಕಾಗಿ ಹೋರಾಟ ಮಾಡುತ್ತಿದ್ದ ಕುರುಬೂರು ಶಾಂತಕುಮಾರ ಅವರು, ಸಧ್ಯದ ಸ್ಥಿತಿಯಲ್ಲಿ ಗೊಂದಲಕ್ಕೆ ಬಿದ್ದಿರುವ ಕಾರಣದಿಂದಲೇ ಸಕ್ಕರೆ ಕಾರ್ಖಾನೆ ಧಾರವಾಡದಲ್ಲಿ ಹೋರಾಟ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ರಾಜ್ಯದ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಇಲಾಖೆಯಿಂದ ರೈತರ ಉನ್ನತಿಗಾಗಿ ತೀರ್ಮಾನ ತೆಗೆದುಕೊಂಡು ಬರುತ್ತಿರುವುದೇ, ಕೆಲವರಿಗೆ ಮುಳುವಾಗಿದೆ. ಅದೇ ಕಾರಣಕ್ಕೆ ಬೇರೆಯದ್ದೆ ರೀತಿಯಲ್ಲಿ ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ.
ಧಾರವಾಡದಲ್ಲಿ ನಡೆಯುತ್ತಿರುವ ಕುರುಬೂರು ಶಾಂತಕುಮಾರ ಅವರ ಪ್ರತಿಭಟನೆಯ ಹಿನ್ನೆಲೆಯನ್ನ ಈ ಭಾಗದ ರೈತಾಪಿ ಜನ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದು, ವ್ಯತಿರಿಕ್ತವಾದ ಹೋರಾಟ ಆರಂಭವಾದರೂ ಅಚ್ಚರಿ ಪಡಬೇಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.