ಧಾರವಾಡ: ಪೇಡೆನಗರಿಯ ಅನ್ನದಾತರ ಪಾಲಿನ ದೇಗುಲ ಎಂದು ಕರೆಸಿಕೊಳ್ಳುವ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದ ಆಡಳಿತ ಧೋರಣೆಯನ್ನು ಖಂಡಿಸಿ ಶಿಕ್ಷಕರು ನಡೆಸುತ್ತಿರುವ ಅನಿರ್ಧಿಷ್ಠಾವಧಿಯ ಧರಣಿ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ.
ಆಡಳಿತ ಭವನದ ಎದುರು ಶಿಕ್ಷಕರ ಕಲ್ಯಾಣ ಸಂಘದ ಆಶ್ರಯದಲ್ಲಿ ಶಿಕ್ಷಕರು ಕಳೆದ ಸೋಮವಾರ ಧರಣಿ ಆರಂಭಿಸಿದ್ದು, ಕೃವಿವಿ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ಇಂದು ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರಲ್ಲದೇ ಕುಲಪತಿ ಜತೆ ಮಾತನಾಡುವ ಭರವಸೆ ನೀಡಿದರು. ಮೋಹನ ಸಿದ್ದಾಂತಿ ಸಹಿತ ಅನೇಕ ಮಾದ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.
ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಡಾ.ಐ.ಕೆ.ಕಾಳಪ್ಪನವರ, ಪ್ರಧಾನ ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ, ಡಾ.ಚಿದಾನಂದ ಮನ್ಸೂರ್ ,ಡಾ. ರಾಮನಗೌಡ ಪಾಟೀಲ, ಡಾ. ನಾಗಪ್ಪ ಗೋವನಕೊಪ್ಪ, ಡಾ.ಆರ್.ಎಚ್.ಪಾಟೀಲ, ಡಾ.ಮಂಜುಳಾ ಎನ್., ಡಾ.ವೀಣಾ ಜಾಧವ, ಸುರೇಖಾ ಸಂಕನಗೌಡರ ಸೇರಿದಂತೆ ಅನೇಕ ಶಿಕ್ಷಕರು ಪಾಲ್ಗೊಂಡಿದ್ದಾರೆ.