ಟಿಕಾರೆ ರಸ್ತೆ ಗುಂಡಿಗಳನ್ನು ಮುಚ್ಚಿದ ನಾಗರಿಕರು
ಧಾರವಾಡ: ಇಲ್ಲಿಯ ಟಿಕಾರೆ ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ನಾಗರಿಕರೆ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿದರು.
ನಗರದಲ್ಲಿ ಕೆಲ ದಿನಗಳಿಂದ ಸುರಿದ ಮಳೆಗೆ ಟಿಕಾರೆ ರಸ್ತೆ ಸೇರಿದಂತೆ ವಿವಿಧಡೆ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಈ ಪ್ರದೇಶದಲ್ಲಿ
ಮೊಬೈಲ್ ಸೇರಿದಂತೆ ವಿವಿಧ ಅಂಗಡಿಗಳು ಇವೇ. ಇಲ್ಲಿ ನಿತ್ಯ ಸಾವಿರಾರು ವಾಹನ ಸಂಚಾರ ಇರುತ್ತದೆ. ಈ ರಸ್ತೆಯಲ್ಲಿರುವ
ಗುಂಡಿಗಳನ್ನು ತಪ್ಪಿಸಲು ಹೊಗಿ ಸುಮಾರು ಸವಾರರು ಬಿದ್ದು ಗಾಯಗಳನ್ನು ಮಾಡಿಕೊಂಡಿದ್ದಾರೆ. ಈ ಕುರಿತು ಇಲ್ಲಿಯ
ನಾಗರಿಕರು ವಾರ್ಡ್ ನಂ.14ರ ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ ಹಾಗೂ 13ನೇ ವಾರ್ಡಿನ ಸುರೇಶ ಬೇದರೆ ಅವರಿಗೆ
ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಇಲ್ಲಿಯ ನಾಗರಿಕರು ದೂರಿದರು.
ಈ ಇಬ್ಬರು ಪಾಲಿಕೆ ಸದಸ್ಯರು ಇದ್ದು ಇಲ್ಲದಂತಾಗಿದೆ. ಇವರಿಗೆ ಪೋನ್ ಮಾಡಿದರೆ ಪೋನ್ ಎತ್ತುತ್ತಿಲ್ಲ. ಚುನಾವಣೆ
ಬಂದಾಗ ಮನೆ ಮನೆಗೆ ಬಂದು ದೊಡ್ಡ ದೊಡ್ಡ ಮಾತುಗಳನ್ನಾಡಿ ಮತ ಭಿಕ್ಷೆ ಬೇಡುತ್ತಾರೆ. ಚುನಾವಣೆಯಲ್ಲಿ ಆರಿಸಿ ಬಂದ
ನಂತರ ನಾಗರಿಕರ ಸಮಸ್ಯೆ ಸ್ಪಂದಿಸುತ್ತಿಲ್ಲ ಎಂದು ಇಲ್ಲಯ ನಾಗರಿಕರು ದೂರಿದರು.
ಈ ಇಬ್ಬರು ಸದಸ್ಯರು ದೊಡ್ಡ ದೊಡ್ಡ ನಾಯಕರ ಬೆನ್ನು ಹತ್ತಿ ತಿರುಗುತ್ತಾರೆ ಹೊರೆತು ಜನರ ಸಮಸ್ಯೆಗೆ ಸ್ಪಂದನೆಯಿಲ್ಲ ಎಂದು
ದೂರಿದರು.
ಇಲ್ಲಿಯ ನಿವಾಸಿ ಅರುಣ ಅಚಲಕರ ಸೇರಿದಂತೆ ಇಲ್ಲಿಯ ಅಂಗಡಿಕಾರರು ಸೇರಿ ಸ್ವತಃ ಅವರೇ ಸಲಕಿ ಬುಟ್ಟಿ
ತೆಗೆದುಕೊಂಡು ಕಲ್ಲು, ಮಣ್ಣು ತಂದು ಎಲ್ಲ ಗುಂಡಿ ಮುಚ್ಚಿದ್ದಾರೆ. ಇನ್ನು ಮುಂದಾದರು ಇಲ್ಲಿಯ ಜನಪ್ರತಿನಿಧಿಗಳು ಎಚ್ಚೆತ್ತು
ಜನರ ಸಮಸ್ಯೆಗೆ ಸ್ಪಂದಿಸಲಿ ಎಂದು ಇಲ್ಲಿಯ ನಾಗರಿಕರು ಒತ್ತಾಯಿಸಿದ್ದಾರೆ.