ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡ: ಅಕ್ಟೋಬರ್‌ನಲ್ಲಿ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿ

ಪೇಡೆನಗರಕ್ಕೆ ವಿಶ್ವದ ನಾನಾ ದೇಶಗಳ ಶ್ರೇಯಾಂಕಿತ ಟೆನಿಸ್ ಆಟಗಾರರು

ಲಾನ್ ಟೆನಿಸ್ ಅಸೋಸಿಯೇಷನ್ ಸದಸ್ಯತ್ವಕ್ಕೆ ಅರ್ಜಿ

ಧಾರವಾಡ: ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಜಂಟಿಯಾಗಿ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಅಸೋಸಿಯೇಷನ್ ಸಹಯೋಗದಲ್ಲಿ ಬರುವ ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡದಲ್ಲಿ ಅಂತರರಾಷ್ಟ್ರೀಯ ಟೆನಿಸ್ ಕ್ರೀಡಾಕೂಟ ಆಯೋಜಿಸುತ್ತಿದೆ. ಇದರಲ್ಲಿ ವಿಶ್ವದ ನಾನಾ ದೇಶಗಳ ಶ್ರೇಯಾಂಕಿತ ಟೆನಿಸ್ ಆಟಗಾರರು ಭಾಗವಹಿಸಲಿದ್ದಾರೆ.


ಇದರ ಅಂಗವಾಗಿ ಟೆನಿಸ್ ಕ್ರೀಡಾ ಆಸಕ್ತರಿಗೆ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಅಸೋಸಿಯೇಷನ್‌ದ ಆಜೀವ ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಧಾರವಾಡ ಟೆನಿಸ್ ಕೋರ್ಟ್ ಸುಮಾರು ೯೬ ವರ್ಷಗಳ ಇತಿಹಾಸ ಹೊಂದಿದೆ. ಐದು ಸಿಂಥೆಟಿಕ್ ಯುಎಸ್‌ಟಿಎ ಶ್ರೇಣಿಯ ಟೆನಿಸ್ ಕೋರ್ಟ್ ಹೊಂದಿದೆ. ಮತ್ತು ಅತ್ಯಾಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಜಿಮ್ ಹಾಗೂ ಟೆನಿಸ್ ತರಬೇತಿದಾರರನ್ನು ಹೊಂದಿದೆ. ಇಲ್ಲಿನ ಟೆನಿಸ್ ಕೋರ್ಟ್ ಅಂತರರಾಷ್ಟ್ರೀಯ ಗುಣಮಟ್ಟದ್ದಾಗಿದೆ.


ಧಾರವಾಡ ಜಿಲ್ಲಾ ಲಾನ್ ಟೆನಿಸ್ ಅಸೋಸಿಯೇಷನ್‌ದ ಆಜೀವ ಸದಸ್ಯತ್ವ ಪಡೆಯಲು ಸೆ. 15 ರಿಂದ 22 ರ ವರೆಗೆ ಸೀಮಿತ ಕಾಲಾವಕಾಶ ನೀಡಲಾಗಿದೆ. ನಿಗದಿತ ಅರ್ಜಿ ನಮೂನೆ ಹಾಗೂ ಸದಸ್ಯತ್ವ ಶುಲ್ಕದೊಂದಿಗೆ ಆಸಕ್ತರು ಸದಸ್ಯತ್ವ ಪಡೆಯಬಹುದು. ಸಂಪರ್ಕಕ್ಕಾಗಿ ಸಂದೀಪ ಬಣವಿ, ಕಾರ್ಯದರ್ಶಿಗಳು, ಧಾರವಾಡ ಜಿಲ್ಲಾ ಲಾನ್ ಟೆನಿಸ್ ಅಸೋಸಿಯೇಷನ್, ಡಿ.ಸಿ. ಕಂಪೌಂಡ್, ಧಾರವಾಡ ಮೊ.ಸಂ: 9448460955, 6361398510 ಗೆ ಸಂಪರ್ಕಿಸಬಹುದು. ಟೆನಿಸ್ ಕಚೇರಿಗೆ ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದೆಂದು ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *