ಧಾರವಾಡ ಗ್ರಾಮೀಣ ತಾಲೂಕು ಶಿಕ್ಷಕರ ದಿನೋತ್ಸವ, ನಿವೃತ್ತ ಶಿಕ್ಷಕರಿಗೆ ಸನ್ಮಾನ, ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಧಾರವಾಡ: ಹಿಂದೆ ತಾವು ಶಾಸಕನಾಗಿದ್ದಾಗ 28ನೇ ಸ್ಥಾನದಲ್ಲಿದ್ದ ಧಾರವಾಡ ಜಿಲ್ಲೆಯನ್ನು 3ನೇ ಸ್ಥಾನಕ್ಕೆ ತಂದ ಹೆಮ್ಮೆ ನನಗಿದೆ,ಇಂದೂ ಕೂಡ ಶಿಕ್ಷಣ ವ್ಯವಸ್ಥೆಯಲ್ಲಿ ಜಿಲ್ಲೆ ಹಿಂದುಳಿದಿದ್ದು ಮತ್ತೆ ಶಿಕ್ಷಣದ ಉನ್ನತೀಕರಣಕ್ಕೆ ಶ್ರಮಿಸುವುದಾಗಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದರು.
ಇಂದು ಸವದತ್ತಿಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಧಾರವಾಡ ಗ್ರಾಮೀಣ ತಾಲೂಕು ಶಿಕ್ಷಕರ ದಿನೋತ್ಸವ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲ ಶಿಕ್ಷಕರು ಶಹರದತ್ತ ಮುಖ ಮಾಡುತ್ತಿದ್ದು ಗ್ರಾಮೀಣ ಭಾಗದ ಮಕ್ಕಳ ಉನ್ನತಿಗಾಗಿ ಶ್ರಮಿಸಿ ಎಂದು ಕರೆ ನೀಡಿದರಲ್ಲದೇ ತಾಯಿ ಮೊದಲ ಗುರು ಮನೆಯೇ ಪಾಠಶಾಲೆಯಾದರೆ, ಮನುಷ್ಯನ ಜೀವನವನ್ನು ಸನ್ಮಾರ್ಗದಲ್ಲಿ ನಡೆಸಲು ದಾರಿ ದೀಪವಾಗುವವರು ಶಿಕ್ಷಕರು.ಅಂತಹ ಗುರುವೃಂದಕ್ಕೆ ತುಂಬು ಹೃದಯದ ಧನ್ಯವಾದಗಳು ಎಂದರು.
ಸಾ.ಶಿ.ಇಲಾಖೆಯ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ, ಮಾಜಿ ಉಪನಿರ್ದೇಶಕ ಎಸ್ ಬಿ ಕೊಡ್ಲಿ, ಅಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ, ರಾಮಕೃಷ್ಣ ಸದಲಗಿ, ಅಶೋಕ ಕುಮಾರ ಸಿಂಧಗಿ, ಎಸ್.ಎಮ್.ಹುಡೇದಮನಿ, ತಾ.ಪಂ.ಇಒ ಜಗದೀಶ ಕಂದಕೂರ, ಜಿಲ್ಲಾ ಶಿಕ್ಷಕರ ಸಂಘದ ರಾಜಶೇಖರ ಹೊಂಡಪ್ಪನವರ, ಅಜಿತ ದೇಸಾಯಿ, ವಿ.ಪಿ ಜಾಕೋಜಿ, ಶಾಂತಾ ಶೀಲವಂತರ, ಮುಖಂಡರಾದ ಶಿವಲೀಲಾ ಕುಲಕರ್ಣಿ, ತವನಪ್ಪ ಅಷ್ಟಗಿ, ಪ್ರಕಾಶ ಘಾಟಗೆ, ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ ಸೇರಿದಂತೆ ಇತರರಿದ್ದರು.