ಹುಬ್ಬಳ್ಳಿ-ಧಾರವಾಡ ಸುದ್ದಿ
ಎಪಿಎಂಸಿ ನಿವೇಶನ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ : ಆರೋಪ

ಎಪಿಎಂಸಿ ನಿವೇಶನ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ : ಆರೋಪ

ಹುಬ್ಬಳ್ಳಿ: ಹುಬ್ಬಳ್ಳಿ ಅಮರಗೋಳದ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವ್ಯಾಪ್ತಿಯಲ್ಲಿ ಪ್ರತಿಯೊಂದು ವಿಭಾಗದಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಲಿದೆ ಎಂದು  ಎಪಿಎಂಸಿ ಸದಸ್ಯರಲ್ಲದೇ ಮಾಜಿ ಅಧ್ಯಕ್ಷರೂ ಆಗಿರುವ ಶಂಕರಣ್ಣ ಬಿಜವಾಡ ಇಂದು ಗಂಭೀರ ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಆವರಣದಲ್ಲಿ ನಿವೇಶನ ಹಂಚಿಕೆ ಬೇಕಾಬಿಟ್ಟಿ ಮಾಡಿದ್ದು ಯಾವುದೇ ರೀತಿಯ ಕಾನೂನು ನೀತಿ ನಿಯಮ ಅನುಸರಿಸಿಲ್ಲ ಎಂದು ಹೇಳೀದರು.
ವ್ಯಾಪಾರಕ್ಕೆಂದು ಹಂಚಿಕೆ ಮಾಡಿದ ನಿವೇಶನ ಬೇರೆ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಇದರ ಜೊತೆಗೆ ಬೇಕಾಬಿಟ್ಟಿ ಹಂಚಿಕೆ ಮಾಡಿದ್ದು ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಎಪಿಎಂಸಿ ಸದಸ್ಯ ಚೆನ್ನು ಹೊಸಮನಿ, ಎಪಿಎಂಸಿ ಅಧ್ಯಕ್ಷ ಸುರೇಶ್ ಕಿರೇಸೂರ ಹಾಗೂ ಎಪಿಎಂಸಿ ಪ್ರಧಾನ ಕಾರ್ಯದರ್ಶಿ ಅಲ್ಲಿನ ಸಿಬ್ಬಂದಿ ಬೇಕಾಬಿಟ್ಟಿ ಕಾನೂನು ಉಲ್ಲಂಘನೆ ಮಾಡಿ ನಡೆದುಕೊಳ್ಳುತಿದ್ದಾರೆ ಎಂದು ಹೇಳಿದರು.

administrator

Related Articles

Leave a Reply

Your email address will not be published. Required fields are marked *