ಹುಬ್ಬಳ್ಳಿ-ಧಾರವಾಡ ಸುದ್ದಿ
ಡಾ. ಮಯೂರ ಮೋರೆ ಪ್ರತಿಷ್ಠಾನ ಲೋಕಾರ್ಪಣೆ

ಡಾ. ಮಯೂರ ಮೋರೆ ಪ್ರತಿಷ್ಠಾನ ಲೋಕಾರ್ಪಣೆ

ಪರೋಪಕಾರದಲ್ಲಿ ಸಾರ್ಥಕತೆಯಿದೆ: ಡಾ. ಮಲ್ಲಿಕಾರ್ಜುನ ಸ್ವಾಮೀಜಿ

ಧಾರವಾಡ: ಮನುಷ್ಯ ಲೇಸು ಎನಿಸಿಕೊಳ್ಳುವ ಜೀವನ ನಡೆಸಿದಾಗಲೇ ಜೀವನಕ್ಕೆ ಒಂದು ಅರ್ಥ ಬರುತ್ತದೆ. ಜೀವನದಲ್ಲಿ ಮತ್ತೊಬ್ಬರಿಗೆ ಒಳ್ಳೆಯ ದ್ದನ್ನು ಮಾಡಲು ಆಗಿದಿದ್ದರೂ ಕೆಟ್ಟದ್ದನ್ನು ಮಾಡಬಾರದು. ಮನುಷ್ಯ ಪರೋಪಕಾರ ಮಾಡಲೆಂದೇ ಜನಿಸಿದ್ದಾನೆ ಎಂದು ಮುರುಘಾಮಠದ ಶ್ರೀ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.


ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಡಾ. ಮಯೂರ ಮೋರೆ ಪ್ರತಿಷ್ಠಾನ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಜನರಿಗೆ ಉಪಕಾರ ಮಾಡುವ ಮೂಲಕ ಪ್ರತಿಷ್ಠಾನ ಸಾರ್ಥಕತೆ ಪಡೆಯಲಿ.ಸಮಾಜ ಸೇವೆಗೆ ಕಂಕಣ ಬದ್ಧರಾಗಿರುವ ಡಾ. ಮಯೂರ ಮೋರೆ ಅವರಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸ್ಥಾನ, ಮಾನ ಸಿಕ್ಕು ಅವರಿಂದ ಸಮಾಜಕ್ಕೆ ಒಳ್ಳೆ ಸೇವೆ ಸಿಗಲಿ ಎಂದು ಹಾರೈಸಿದರು.


ಫಾದರ್ ಜಾಕೋಬ್ ಸಿ. ಮಾತನಾಡಿ, ಜೀವನದಲ್ಲಿ ಹಣಕ್ಕಿಂತ ವಿದ್ಯೆ ಮುಖ್ಯ. ಇಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರಕ್ಕೆ ವಿದ್ಯಾವಂತರು ಬಂದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗಲಿದೆ. ವಿದ್ಯಾವಂತರಾಗದ ಡಾ. ಮೋರೆ ಸಮಾಜ ಸೇವೆ ಮೂಲಕ ರಾಜಕೀಯ ಕ್ಷೇತ್ರದಲ್ಲೂ ಉನ್ನತ ಸ್ಥಾನ ಪಡೆಯಲಿ ಎಂದರು.

ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ಡಾ. ಮಯೂರ ಮೋರೆ ತಂದೆಗೆ ತಕ್ಕ ಮಗನಾಗಿ ರಾಜಕೀಯ, ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಿದೆ. ಎಂದರು.


24 ನೇ ವಾರ್ಡಿನ ಪಾಲಿಕೆ ಸದಸ್ಯ ಹಾಗೂ ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಮಯೂರ ಮೋರೆ ಮಾತನಾಡಿ, ಸಮಾಜಮುಖಿ ಸೇವೆ ಮಾಡುವ ಉದ್ದೇಶದಿಂದ ಪ್ರತಿಷ್ಠಾನ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಉತ್ತಮ ಜ್ಞಾನ ಪಡೆದು ಸ್ವಾವಲಂಬಿ ಬದುಕು ನಡೆಸಬೇಕು. ಕರೊನಾ ಸಮಯದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರು, ದಾದಿಯರ ಸೇವೆ ಸ್ಮರಣೀಯ. ನಿರುದ್ಯೋಗಿ ಯುವಕರು, ಆರ್ಥಿಕವಾಗಿ ಹಿಂದುಳಿದವರಿಗೆ ವಿವಿಧ ರೀತಿಯ ತರಬೇತಿ ನೀಡುವುದು ಪ್ರತಿಷ್ಠಾನದ ಮುಖ್ಯ ಧ್ಯೇಯವಾಗಿದೆ. ಇದಲ್ಲದೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.


ಧರ್ಮಗುರು ಬಾಷಾಪೀರ, ಅಲ್ತಾಫ್ ಹಳ್ಳೂರ, ಸದಾನಂದ ಡಂಗನವರ, ಪಾಲಿಕೆ ಸದಸ್ಯೆ ಕವಿತಾ ಕಬ್ಬೇರ, ಸ್ವಾತಿ ಮಾಳಗಿ, ಮನೋಹರ ಮೋರೆ, ಸುನಂದಾ ಮೋರೆ ಇತರರು ಮಾತನಾಡಿದರು.
ಮುಖಂಡರಾದ ಅನಿಲಕುಮಾರ ಪಾಟೀಲ, ಶಿವಾನಂದ ಕರಿಗಾರ, ವಸಂತ ಅರ್ಕಾಚಾರ, ಪ್ರಕಾಶ ಕ್ಯಾರಕಟ್ಟಿ, ಮಹಮ್ಮದಅಲಿ ಗೊರವನಕೊಳ್ಳ, ಆನಂದ ಸಿಂಗನಾಥ, ನಾಗರಾಜ ಗೌರಿ, ದೀಪಾ ನೀರಲಕಟ್ಟಿ, ಅಬ್ದುಲ್ ದೇಸಾಯಿ, ಮನೋಜ ಕರ್ಜಗಿ, ಶರಣಪ್ಪ ಕೊಟಗಿ, ಪಾಲಿಕೆ ಸದಸ್ಯ ಗಣೇಶ ಮುಧೋಳ, ಮುತ್ತುರಾಜ ಮಾಕಡವಾಲೆ, ಮಂಜುನಾಥ ಭೋವಿ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.ಬಸವರಾಜ ಕಿತ್ತೂರ ಸ್ವಾಗತಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಪಿ.ಕೆ. ನೀರಲಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 

administrator

Related Articles

Leave a Reply

Your email address will not be published. Required fields are marked *