ಹುಬ್ಬಳ್ಳಿ-ಧಾರವಾಡ ಸುದ್ದಿ
ನಕಲಿ ಪಾನ್ ಮಸಾಲಾ ಜಾಲದ 7 ಜನ ಬಲೆಗೆ

ನಕಲಿ ಪಾನ್ ಮಸಾಲಾ ಜಾಲದ 7 ಜನ ಬಲೆಗೆ

ಪೊಲೀಸರ ಕಾರ್ಯ ಶ್ಲಾಘನೀಯ

ಹುಬ್ಬಳ್ಳಿ: ನಕಲಿ ಪಾನ್ ಮಸಾಲಾ ತಯಾರಿಸಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದು ಖಾಕಿ ಬಲೆಗೆ ಬಿದ್ದಿದೆ.
ಆರ್‌ಎಂಡಿ ತಯಾರಕರಾದ ಧಾರಿವಾಲ್ ಇಂಡಸ್ಟ್ರೀಸ್ ಪ್ರೈ.ಲಿಮಿಟೆಡ್‌ನ ಮಾರಾಟ ವ್ಯವಸ್ಥಾಪಕರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸದಲಗಾ ಮತ್ತು ಚಿಕ್ಕೋಡಿ ಪೊಲೀಸರು, ನಕಲಿ ಪಾನ್ ಮಸಾಲಾ ತಯಾರಿಸಿ ಸರ್ಕಾರಕ್ಕೆ ಕೋಟ್ಯಾಂತರ ರೂ. ತೆರಿಗೆ ವಂಚಿಸಿದ 7 ಜನರನ್ನು ಬಂಧಿಸಿದ್ದಾರೆ.


ಬಂಧಿತರಲ್ಲಿ ಕರ್ನಾಟಕದ ಇಬ್ಬರು, ತೆಲಂಗಾಣದ ಇಬ್ಬರು ಹಾಗೂ ಮೂವರು ಸೇರಿದ್ದು ಅವರಿಂದ ಯಂತ್ರೋಪಕರಣಗಳು, ಲಕ್ಷಾಂತರ ರೂ.ಮೌಲ್ಯದ ಕಚ್ಚಾ ವಸ್ತು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
2022ರ ಮೇ 17ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿರುವ ರಾಜಲಕ್ಷ್ಮೀ ಕಿರಾಣಿ ಅಂಗಡಿಯವರಿಗೆ ನಕಲಿ ಆರ್‌ಎಂಡಿ ಪಾನ್ ಮಸಾಲಾ ಮಾರಾಟ ಮಾಡುತ್ತಿದ್ದ ವೇಳೆ ಧಾರಿವಾಲ್ ಇಂಡಸ್ಟ್ರೀಸ್ ಸೇಲ್ಸ್ ಮ್ಯಾನೇಜರ್ ಶೀತಲ ಬಾಲೇಶ ಅವರು ಚಿಕ್ಕೋಡಿ ಮುಲ್ಲಾ ಗಲ್ಲಿ ನಿವಾಸಿ ನೌಶಾದ್ ಮುಲ್ಲಾ ಎಂಬುವನನ್ನು ಹಿಡಿದು 14 ಬಾಕ್ಸ್ ನಕಲಿ ಪಾನ್ ಮಸಾಲಾ ಪೌದ್‌ಗಳೊಂದಿಗೆ ಸದಲಗಾ ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದರು. ಆರೋಪಿ ವಿರುದ್ಧ ಐಪಿಸಿ ಕಲಂ 420ರಡಿ ಪ್ರಕರಣ ದಾಖಲಿಸಲಾಗಿತ್ತು.


ಬಂಧಿತ ವ್ಯಕ್ತಿಯು ತನಿಖೆ ವೇಳೆ ನೀಡಿದ ಮಾಹಿತಿಯನ್ನಾಧರಿಸಿ ಜನರ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಪಾನ್ ಮಸಾಲಾ ತಯಾರಿಸಿ ಸರ್ಕಾರಕ್ಕೆ ಕೋಟ್ಯಾಂತರ ರೂ.ತೆರಿಗೆ ವಂಚನೆ ನಡೆಯುತ್ತಿರುವ ಶಂಕೆ ಮೇಲೆ ತನಿಖೆ ತೀವ್ರ ನಡೆಸಲಾಗಿತ್ತು.
ಆಗ ಆರ್‌ಎಂಡಿ ಅಷ್ಟೇ ಅಲ್ಲದೆ ವಿಮಲ್ ಪಾನ್ ಮಸಾಲಾ ಸೇರಿದಂತೆ ದೇಶಾದ್ಯಂತ ಚಲಾವಣೆಯಲ್ಲಿರುವ ನಾನಾ ಕಂಪನಿಗಳ ಬ್ರಾಂಡ್ ಬಳಸಿ ನಕಲಿ ಪಾನ್ ಮಸಾಲಾ ತಯಾರಿಸಿ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಸಿಪಿಐ ಆರ್.ಆರ್. ಪಾಟೀಲ, ಸದಲಗಾ ಪಿಎಸ್‌ಐ ರವೀಂದ್ರ ಅಜ್ಜನ್ನವರ, ಅಂಕಲಿ ಪಿಎಸ್‌ಐ ಭರತ ಹಾಗೂ ಸಿಬ್ಬಂದಿಗಳಾದ ವಿಠ್ಠಲ ನಾಯ್ಕ, ಎಸ್.ಎಲ್.ಗಳತಗಿ, ಎಸ್.ಪಿ.ಗಲಗಲಿ, ಎಸ್.ಎಚ್.ದೇವರ, ಆರ್.ಎನ್.ಮುಂದಿನಮನಿ ಅವರನ್ನೊಳಗೊಂಡ ತಂಡದ ಕಾರ್ಯಾಚರಣೆಯಲ್ಲಿ ಸತ್ಯ ಹೊರಬಿದ್ದಿದೆ.

ಪೊಲೀಸರ ಕಾರ್ಯ ಶ್ಲಾಘನೀಯ

ನಮ್ಮ ಕಂಪನಿಯ ನಕಲಿ ಪಾನ್ ಮಸಾಲಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಇಂಡಸ್ಟ್ರೀಸ್‌ನ ಸೇಲ್ಸ ಮ್ಯಾನೇಜರ್ ಶೀತಲ ಪಾಟೀಲ ಹೇಳಿದ್ದಾರೆ. ಉಳಿದ ಜಿಲ್ಲೆಗಳಲ್ಲೂ ನಮ್ಮ ಕಂಪನಿಯ ವಿಚಕ್ಷಕ ದಳದವರು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆಂದು ಹೇಳಿದ್ದಾರೆ. ಅವರೊಂದಿಗೆ ಗಿರಿಧರ ಆರ್., ಪ್ರಸಾದ ವಿ.ಕೆ., ಸಂಜಯ, ಚಂದನ ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *