ಹುಬ್ಬಳ್ಳಿ-ಧಾರವಾಡ ಸುದ್ದಿ

ಮೊಟ್ಟೆ ವಿರೋಧಿಗಳ ವಿರುದ್ಧ ಮೆರವಣಿಗೆ

ಹುಬ್ಬಳ್ಳಿ: ಶರಣರ-ಸಂಸ್ಕ್ರತಿ-ಸಸ್ಯಾಹಾರದ ಹೆಸರಲ್ಲಿ ಅಪೌಷ್ಟಿಕತೆಯುಳ್ಳ “ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡುತ್ತಿರುವ “ಮೊಟ್ಟೆ” ನೀಡದಿರಲು ಮಾಡುತ್ತಿರುವ ಷಡ್ಯಂತ್ರ ಖಂಡಿಸಿ ನಗರದಲ್ಲಿಂದು ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ ಪ್ರಗತಿಪರ ಸಂಘ ಸಂಸ್ಥೆಗಳ ಮಹಾಮಂಡಳದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.


ಅಪೌಷ್ಟಿಕತೆ ನಿರ್ಮೂಲನೆಗಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಮೊಟ್ಟೆ ಯೋಜನೆಯನ್ನು, ವಾರಪೂರ್ತಿ ವಿಸ್ತರಿಸಿ ವಿತರಿಸುವಂತೆ ಆಗ್ರಹಿಸಿ, ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ಮಿನಿವಿಧಾನ ಸೌಧದ ವರೆಗೂ ಮೆರವಣಿಗೆ ನಡೆಸಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ನೇತೃತ್ವ ವಹಿಸಿದ್ದ ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಅವರು ಮಾತನಾಡಿ, ಮೊಟ್ಟೆ ಬೇಡ ಎನ್ನುವರಿಗೆ ಬಾಳೆ ಹಣ್ಣು ಅಥವಾ ಇತರೆ ಯಾವುದೇ ಪೌಷ್ಟಿಕ ಆಹಾರ ನೀಡಿ. ಆದರೇ ಮೊಟ್ಟೆ ಸೇವಿಸುವವರಿಗೆ ಮೊಟ್ಟೆ ಅಗತ್ಯವಾಗಿ ನೀಡಿ ಎಂದು ಆಗ್ರಹಿಸಿದ ಅವರು, ಮುಂದಿನ ದಿನಗಳಲ್ಲಿ ಮೊಟ್ಟೆ ವಿತರಣೆ ಕೈ ಬಿಟ್ಟಿದ್ದೆ ಆದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚರಿಸಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ, ರೇವಣಸಿದ್ದಪ್ಪ ಹೊಸಮನಿ, ಲೋಹಿತ ಗಾಮನಗಟ್ಟಿ, ಇಮ್ತಿಯಾಜ ಬಿಜಾಪುರ, ದೇವೆಂದ್ರಪ್ಪ ಇಟಗಿ, ಕುಮಾರ ಸೂರ್ಯವಂಶಿ, ಸುಲೇಮಾನ ಅಧೋನಿ, ಪ್ರಕಾಶ ಬನ್ನಿಗೋಳ, ಇಜಾಜ ಉಪ್ಪಿನ, ಕಿರಣ ಗಾಮನಗಟ್ಟಿ, ಸೋಮು ಹಂಜಗಿ, ಕೃಷ್ಣಪ್ಪ ಪೂಜಾರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *