ಹುಬ್ಬಳ್ಳಿ-ಧಾರವಾಡ ಸುದ್ದಿ

ಯಾವ ಕ್ಷೇತ್ರವೂ ಮಾದರಿಯಾಗುಳಿದಿಲ್ಲ: ಕಾಗೇರಿ

ಆತ್ಮಾವಲೋಕನ ಮಾಡಿ ಮತ ಹಾಕಿ

ಹುಬ್ಬಳ್ಳಿ : ಸಂವಿಧಾನದ ಬಗ್ಗೆ ಗೌರವವಿರಬೇಕು. ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಬಹಳ ಮುಖ್ಯ. ದೇಶದಲ್ಲಿ ಬಡತನ, ನಿರುದ್ಯೋಗ, ಭಯೋತ್ಪಾದನೆ ಸೇರಿದಂತೆ ವಿವಿಧ ಸಮಸ್ಯೆಗಳು ಭುಗಿಲೆದ್ದಿವೆ.ಯಾವ ಕ್ಷೇತ್ರವೂ ಸಹ ಮಾದರಿ ಎನ್ನುವ ರೀತಿಯಲ್ಲಿ ಇಲ್ಲವಾಗಿವೆ ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.


ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ವಿಷಯದ ಕುರಿತು ಬಿವಿಬಿ ಕಾಲೇಜಿನ ಬಯೋಟೆಕ್ ಹಾಲ್‌ದಲ್ಲಿ ಮಾತನಾಡಿದ ಅವರು ಪ್ರಸಕ್ತ ಸ್ಥಿತಿಗೆ ಈ ಸ್ಥಿತಿಗೆ ಕಾರಣರು ಯಾರು ಎಂಬ ಪ್ರಶ್ನೆ ತಲೆದೋರುತ್ತದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಜೆಗಳು ಕರ್ತವ್ಯ ಅರಿತು ಮತ ಚಲಾವಣೆ ಮಾಡಬೇಕು. ಮುಕ್ತ ಮನಸ್ಸಿನಿಂದ ಮತದಾನ ಮಾಡಬೇಕಿದೆ. ನಮಗೆ ನಾವೇ ಆತ್ಮಾವಲೋಕನ ಮಾಡಿ ಕೊಳ್ಳಬೇಕು ಎಂದು ಹೇಳಿದರು.


ಸ್ವಾತಂತ್ರ್ಯ ಇತಿಹಾಸವನ್ನು ನಾವು ಅರಿತುಕೊಳ್ಳಬೇಕೆಂದ ಅವರು, ಹಲವರ ತ್ಯಾಗ ಬಲಿದಾನ ಹೋರಾಟಗಾರರ ಸ್ಮರಣೆಯನ್ನು ನಾವು ಮಾಡಿಕೊಳ್ಳಬೇಕು. ಗಾಂಧಿ, ಸುಭಾಷ್ ಚಂದ್ರ ಬೋಸ್, ಮದನ ಲಾಲ್ ಧಿಂಗ್ರ ಅವರ ತ್ಯಾಗ ಬಲಿದಾನ ನೆನಯಬೇಕಾಗಿದೆ. ಇಂದು ಆಹಾರ ಸ್ವಾವಲಂಬನೆ ಸಾಧಿಸಿದ್ದೇವೆ. ೨೯೫ ಕೋಟಿ ತಲಾದಾಯ ಹೊಂದಿದ್ದೇವೆ. ಚಂದ್ರಯಾನ ಮೂಲಕ ಭಾರತೀಯ ವಿಜ್ಞಾನಿಗಳು ಸಾಧನೆ ಮಾಡಿದ್ದು, ಜಗತ್ತಿನ ಬೇರೆ ಬೇರೆ ದೇಶದವರು ಭಾರತದಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂಬುದನ್ನು ಅರಿತು ಭಾರತಕ್ಕೆ ಬರುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಭಾರತ ಕೋವಿಡ್ ಕಾಲಘಟ್ಟದಲ್ಲಿ ಮಾದರಿಯಾಗಿದೆ ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ವಾಗತಿಸಿ ಮಾತನಾಡಿ, ನಾ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾನದ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ತಾಪಂ ಇಒ ಗಂಗಾಧರ್ ಕಂದಕೂರ್ ಇದ್ದರು.

ಬಾಕ್ಸ

ಧಾರವಾಡದ ಸವಿನೆನಪು
ಧಾರವಾಡದಲ್ಲಿ ನಾನು ಓದಿದವನು. ಹುಬ್ಬಳ್ಳಿಯ ಜನಜೀವನ, ವಿಶೇಷತೆಗಳು ನನಗೆ ಹಸಿರಾದ ನೆನಪುಗಳನ್ನು ಕಟ್ಟಿಕೊಡುತ್ತವೆ. ವಿದ್ಯಾರ್ಥಿ ಜೀವನ ವ್ಯಕ್ತಿತ್ವ ನಿರ್ಮಾಣಕ್ಕೆ ಧಾರವಾಡ ನನಗೆ ಕೊಟ್ಟಿದೆ ಎಂದು ಕಾಗೇರಿ ಇಲ್ಲಿನ ಹಳೆಯ ನೆನಪುಗಳ ಮೆಲುಕು ಹಾಕಿದರು

ಹುಬ್ಬಳ್ಳಿಯ ಪ್ರವಾಸಿ ಮಂದಿರಕ್ಕೆ ವಿಧಾನಸಭಾ ಸಭಾಪತಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಚುನಾವಣೆ ಸುಧಾರಣೆ ಕುರಿತು ಸಂವಾದದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಲಿಂಗರಾಜ ಪಾಟೀಲ, ರಂಗಾ ಬದ್ದಿ, ವೀರಣ್ಣ ಸವಡಿ, ನಾಗೇಶ ಕಲಬುರ್ಗಿ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಬಿಜೆಪಿ ವಕ್ತಾರರ ರವಿ ನಾಯಕ, ಗೋಪಾಲ ಬದ್ದಿ, ವಿರುಪಾಕ್ಷ ರಾಯನಗೌಡ್ರ, ವಸಂತ ನಾಡಜೋಶಿ ಮೊದಲಾದವರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *