ಹುಬ್ಬಳ್ಳಿ-ಧಾರವಾಡ ಸುದ್ದಿ

ಸಂತೋಷ್ ಲಾಡ್ ಫೌಂಡೇಶನ್‌ನಿಂದ ಸಂಜೆ ’ಸಂಗೀತ’ ಕಾರ್ಯಕ್ರಮ

ಸಾಧಕರು ಹಾಗೂ ಯೋಧರಿಗೆ ಸನ್ಮಾನ

ಮಿಸ್ ಇಂಡಿಯಾ ಸ್ಪರ್ಧಿಗಳು ಇಳಕಲ್, ಮೊಳಕಾಲ್ಮೂರು, ಮೈಸೂರು ಸೀರೆಗಳನ್ನುಟ್ಟು ಕ್ಯಾಟ್ ವಾಕ್

ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ ಫ್ಯಾಷನ್ ಶೋ

ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ ಅವರಿಂದ ಕಿರುನಾಟಕ

ಗಾಯಕಿ ಎಂ.ಡಿ ಪಲ್ಲವಿ, ಇಂಡಿಯನ್ ಐಡಲ್- 18ರ ವಿಜೇತ ಗಾಯಕ ಸಲ್ಮಾನ್ ಅಲಿ ಅವರಿಂದ ಸಂಗೀತ ಸಂಜೆ

ಧಾರವಾಡ: ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಸಂತೋಷ್ ಲಾಡ್ ಫೌಂಡೇಶನ್‌ನಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಇಂದು ಸಂಜೆ 5 ಗಂಟೆಯಿಂದ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ.


ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನಾಪೂರ್ವಕ ವಿಶೇಷ ಲೇಸರ್ ಶೋ ಹಾಗೂ ಸಾಂಸ್ಕೃತಿಕ ಸಂಭ್ರಮ, ಸಾಧಕರು ಹಾಗೂ ಯೋಧರಿಗೆ ಸನ್ಮಾನ ಮತ್ತು ನಮ್ಮ ಭವ್ಯ ಪರಂಪರೆ ಬಿಂಬಿಸುವ ಕಾರ್ಯಕ್ರಮ ಜರುಗಲಿವೆ.


ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ ಅವರಿಂದ ಕಿರುನಾಟಕ ಹಾಗೂ ಗಾಯಕಿ ಎಂ.ಡಿ ಪಲ್ಲವಿ ಮತ್ತು ಇಂಡಿಯನ್ ಐಡಲ್- 18ರ ವಿಜೇತ ಗಾಯಕ ಸಲ್ಮಾನ್ ಅಲಿ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮವಿದೆ.

 

ಫ್ಯಾಷನ್ ಶೋ ರಂಗು: ಖ್ಯಾತ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಹಾಗೂ ತಂಡದಿಂದ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ ಫ್ಯಾಷನ್ ಶೋ ಜರುಗಲಿದೆ. 15ಕ್ಕೂ ಹೆಚ್ಚು ಮಿಸ್ ಇಂಡಿಯಾ ಸ್ಪರ್ಧಿಗಳು ಇಳಕಲ್, ಮೊಳಕಾಲ್ಮೂರು, ಮೈಸೂರು ಸೀರೆಗಳನ್ನುಟ್ಟು ಹೆಜ್ಜೆ ಹಾಕಲಿದ್ದಾರೆ.

ಅದ್ಧೂರಿ ಕಾರ್ಯಕ್ರಮಕ್ಕೆ ಕೆಸಿಡಿ ಮೈದಾನದಲ್ಲಿ ಸಿದ್ಧತಾ ಕಾರ್ಯಗಳು ನಡೆದಿದ್ದು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಫೌಂಡೇಶನ್ ಅಧ್ಯಕ್ಷ ಆನಂದ ಕಲಾಲ ತಿಳಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *