ಧಾರವಾಡ: ಹತ್ತಿ ಜಿನ್ನಿಂಗ್ ಮಿಲ್ಗೆ ಬೆಂಕಿ ಹೊತ್ತಿಕೊಂಡು ಕೊಟ್ಯಾಂತರ ರೂಪಾಯಿಗಳಷ್ಟು ಹಾನಿಯಾದ ಘಟನೆ ಇಲ್ಲಿಗೆ ಸಮೀಪದ ಬೈಲೂರು ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಕೋಟ್ಯಾಂತರ ಮೌಲ್ಯದ ಹತ್ತಿಕಾಳು ಹಾಗೂ ಹಿಂಡಿ ಬೆಂಕಿಗಾಹುತಿಯಾಗಿದೆ. ಹತ್ತಿ ಕಾಳು ಮತ್ತು ಹಿಂಡಿ ಚೀಲಗಳ ಸಂಗ್ರಹಕ್ಕೆ ಬೆಂಕಿ ಹತ್ತಿದ ಪರಿಣಾಮ ಕೋಟ್ಯಾಂತರಗೂ ಹೆಚ್ಚು ಹಾನಿಯಾಗಿದೆ ಎನ್ನಲಾಗುತ್ತಿದೆ.
ನಾರಾಯಣ ಕೋಪರ್ಡೆ ಎಂಬುವರಿಗೆ ಸೇರಿದ ರಾಜೇಶ ಜಿನ್ನಿಂಗ್ ಮಿಲ್ ನಲ್ಲಿ ಈ ಘಟನೆ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲ ಕಾಲ ಬೆಂಕಿ ಜ್ವಾಲಾಮುಖಿಯಂತೆ ಆವರಿಸಿತ್ತು.
ಇದೇ ವೇಳೆ ಬೆಂಕಿ ಪಕ್ಕದ ಕೈಗಾರಿಕಾ ಪ್ಲಾಂಟ್ಗಳಿಗೂ ವ್ಯಾಪಿಸುವ ಆತಂಕ ಎದುರಾಗಿತ್ತು. ಈ ಕುರಿತು ಗರಗ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಎಸ್.ಸಿ.ಪಾಟೀಲ, ಪಿಎಸ್ಐ ಕಿರಣ ಮೋಹಿತೆ ಭೇಟಿ ನೀಡಿದ್ದರು.