ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಲೇವಡಿ
ಧಾರವಾಡ : ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿಗಾಗಿ ಹೋರಾಟ ಮಾಡುವ ಶಾಸಕ ಅರವಿಂದ ಬೆಲ್ಲದ ಮೊದಲು ತಮ್ಮ ಮನೆಯಲ್ಲಿ ಗಣಪತಿ ಇಡಲಿ ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಕೇಳದೆ ಇರುವ ಶಾಸಕ ಅರವಿಂದ ಬೆಲ್ಲದ ತಮ್ಮ ಮನೆಯಲ್ಲೇ ಗಣಪತಿ ಕೂಡಿಸಬೇಕು. ನಂತರ ಬಿಜೆಪಿ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಯಾರನ್ನಾದರೂ ಕೂಡ್ರಿಸಿ ಎಂದರು.
ಒಂದು ಸಮಾಜವನ್ನು ಕೆಣಕುವ ಕೆಲಸವನ್ನು ಶಾಸಕ ಅರವಿಂದ ಬೆಲ್ಲದ ಮಾಡುತ್ತಿ ದ್ದಾರೆ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ಹಿಂದೂ -ಮುಸ್ಲಿಂರ ಮಧ್ಯೆದ ಭಾವೈಕ್ಯತೆಯನ್ನು ಹಾಳು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಚಿಂಚೋರೆ ಆರೋಪಿಸಿದರು.