ಹಳ್ಳಿ ಹಕ್ಕಿಯ ಹಾಡಿಗೆ
ಮೈಮರೆಯುತ್ತಿದ ಸಂಗೀತ ಪ್ರೇಮಿಗಳು ನಾವುಗಳು.
ಹಾಡುತ್ತಾ ಕುಣಿಯುತ್ತಾ
ನಗಿಸುತ್ತಾ ರಂಜಿಸುತ್ತಿದ್ದರು
ನಮ್ಮ ದುಃಖ ದುಮ್ಮಾನ ಮರೆಯಲೆಂದು.
ಒಮ್ಮೆಯೂ ಮರೆತಿಲ್ಲ ಉಸಿರು ನಿಲ್ಲುವರೆಗೂ ನಾಡ ನುಡಿಯ ಜಾನಪದ ಹಾಡನು ಹಾಡಲು ಇವರು.
ಇನ್ಯಾರು ಹಾಡುವರು ಆ ಹಾಡನು “ಹುಲಿಯು ಹುಟ್ಟಿತೋ ಕಿತ್ತೂರ ನಾಡಾಗ “ಗಂಡು ಮೆಟ್ಟಿದ ನಾಡಲ್ಲಿ.
ಮತ್ತೆ ಹುಟ್ಟು ಬನ್ನಿ ಜಾನಪದ
ತಾಯಿಯ ಕರುಳ ಬಳ್ಳಿಯಲ್ಲಿ
ಹಾಡುತ್ತಾ ಬಸವಲಿಂಗಯ್ಯ ಹೀರೆಮಠ ಅವರಾಗಿ…
ಫಕ್ಕಿರೇಶ ಎಸ್ ಕಾಡಣ್ಣವರ ಬಸಾಪುರ.