ಹುಬ್ಬಳ್ಳಿ-ಧಾರವಾಡ ಸುದ್ದಿ

ಇಳಿವಯಸ್ಸಿನಲ್ಲಿ 2ನೇ ಮದುವೆಯಾದ ಮಾಜಿ ಮೇಯರ್ ಡಿ.ಕೆ.ಚವ್ಹಾಣ

ಹುಬ್ಬಳ್ಳಿ: ಅವಳಿನಗರದ ಮಾಜಿ ಪ್ರಥಮ ಪ್ರಜೆಯೊಬ್ಬರು ತಮ್ಮ 75ನೇ ವಯಸ್ಸಿನಲ್ಲಿ ವಿವಾಹವಾಗುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ಬಿಜೆಪಿಯ ಪಾಲಿಕೆ ಸದಸ್ಯರಾಗಿ ಅಲ್ಲದೇ ಮೇಯರ್ ಪಟ್ಟ ಅಲಂಕರಿಸಿದ್ದ ಕಮರಿಪೇಟೆಯ ಡಿ.ಕೆ.ಚವ್ಹಾಣ ಅವರೇ ಮತ್ತೆ ಹಸೆಮಣೆ ಏರಿದವರು.


ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಮದುವೆಯಾಗುವಂತಹ ನಿರ್ಧಾರ ಕೈಗೊಳ್ಳುವವರು ವಿರಳ. ಆದರೆ, ಈ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಿ ಡಿ.ಕೆ. ಗಮನ ಸೆಳೆದಿದ್ದಾರೆ. ಒಂದು ಕ್ಷಣ ಅಚ್ಚರಿ ಎನಿಸಿದರೂ ಚವ್ಹಾಣ ಅವರು ಅರವಿಂದ ನಗರದ ತಮ್ಮ ನಿವಾಸದ ಮುಂದೆಯೇ ನಿನ್ನೆ ಮತ್ತೆ ಸಪ್ತಪದಿ ತುಳಿದಿದ್ದು, ಈ ಮದುವೆಯಲ್ಲಿ ಅವರ ಮೂವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಆಪ್ತರು, ಬಂಧುಗಳು ಪಾಲ್ಗೊಂಡಿದ್ದರು.


ಚವ್ಹಾಣ ಅವರ ಮೊದಲ ಪತ್ನಿ ಶಾರದಾ ಅವರು ಕಳೆದ ಮೂರು ತಿಂಗಳ ಹಿಂದೆ ನಿಧನರಾಗಿದ್ದಾರೆ. ಪತ್ನಿಯ ಅಗಲಿಕೆಯನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ಡಿ.ಕೆ. ಅವರು ಏಕಾಂತದಲ್ಲಿ ಸಮಯ ಕಳೆಯುತ್ತಿದ್ದರು. ಅಲ್ಲದೇ ತಮ್ಮ ಆರೈಕೆ, ಆಸರೆಗಾಗಿ ಮತ್ತೊಂದು ಮದುವೆ ಮಾಡಿಕೊಳ್ಳುವ ಚಿಂತನೆ ಮಾಡಿದ್ದರು. ಈ ಹಂತದಲ್ಲಿ ಅವರು ಮದುವೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದು ಅವರ ಪತ್ನಿಯ ತಂಗಿ ಅನಸೂಯಾ ಅವರನ್ನು. ಅನಸೂಯಾ ಅವರೂ ವಿವಾಹವಾಗಿರಲಿಲ್ಲ. ಹೀಗಾಗಿ, ಅವರನ್ನು ಮದುವೆ ಮಾಡಿಕೊಂಡಿದ್ದು ಎಲ್ಲರೂ ಸಮ್ಮತಿಯೊಂದಿಗೆ ವಿವಾಹ ವಾಗಿದ್ದಾರೆಂದು ಆಪ್ತರು ಸಂಬಂಧಿಗಳು ಹೇಳುವ ಮಾತು.

administrator

Related Articles

Leave a Reply

Your email address will not be published. Required fields are marked *