ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 22ನೇ ಅವಧಿಯ ನೂತನ ಸಭಾ ನಾಯಕರಾಗಿ ಮಾಜಿ ಮೇಯರ್ ಶಿವು ಹಿರೇಮಠ ನಿಯುಕ್ತಿಗೊಂಡಿದ್ದಾರೆ.
ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನಗಳೂ ಹುಬ್ಬಳ್ಳಿಗೆ ಸಿಕ್ಕ ಕಾರಣ ಧಾರವಾಡಕ್ಕೆ ಸಭಾನಾಯಕ ಪಟ್ಟ ನಿಕ್ಕಿಯಾಗಿತ್ತು. ಅಲ್ಲದೇ ಮೇಯರ್ ವೀಣಾ ಬರದ್ವಾಡ ಮೊದಲ ಬಾರಿ ಪಾಲಿಕೆ ಸದಸ್ಯರಾಗಿದ್ದರಿಂದ ಪಾಲಿಕೆ ಒಳ ಹೊರಗಿನ ಅರಿವಿರುವ ಹಿರಿಯ ಸದಸ್ಯರೊಬ್ಬರಿಗೆ ನೀಡಲು ಉದ್ದೇಶಿಸಲಾಗಿತ್ತು. ಮಾಜಿ ಮೇಯರ್ ಶಿವು ಹಿರೇಮಠ ಹಾಗೂ ನಿಕಟಪೂರ್ವ ಮೇಯರ್ ಈರೇಶ ಅಂಚಟಗೇರಿ ಪೈಕಿ ಇಬ್ಬರ ಮಧ್ಯೆ ಒಬ್ಬರಾಗುವುದು ನಿಶ್ಚಿತವಾಗಿತ್ತು.
ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಹಿರೇಮಠರನ್ನು ನೇಮಕ ಮಾಡಿದ್ದಾರೆ ಎಂದು ಜಿಲ್ಲಾ ವಕ್ತಾರರಾದ ರವಿ ನಾಯಕ ತಿಳಿಸಿದ್ದಾರೆ.