ಹುಬ್ಬಳ್ಳಿ-ಧಾರವಾಡ ಸುದ್ದಿ

ಕಾರ್ಯಕರ್ತರಿಂದಲೇ ರಜತ್ ಪರ ಹಣ ಜಮಾವಣೆ

ಎಲ್ಲರ ಅಭಿಪ್ರಾಯ, ಸಲಹೆ, ಪಡೆದು ರಜತ್ ಉಳ್ಳಾಗಡ್ಡಿಮಠ ಸೆಂಟ್ರಲ್ ಅಖಾಡಕ್ಕೆ

ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ಕ್ಷೇತ್ರದ ಕೈ ಪಾಳೆಯದ ಪ್ರಬಲ ಆಕಾಂಕ್ಷಿಯಾಗಿರುವ ರಜತ್ ಉಳ್ಳಾಗಡ್ಡಿಮಠ ಪರವಾಗಿ ಸ್ವಯಂ ಪ್ರೇರಿತರಾಗೊ ಕಾರ್ಯಕರ್ತರೇ ದೇಣಿಗೆ ಸಂಗ್ರಹಿಸಿ ಕೆ.ಪಿ.ಸಿ.ಸಿಗೆ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದರು.


ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಬ್ಲಾಕ್ ಸಭೆಯಲ್ಲಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ 2023 ರ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ಗೆ ಅರ್ಜಿದಾರರಾಗಿ ಅರ್ಜಿ ಸಲ್ಲಿಸಬೇಕೆ ಅಥವಾ ಬೇಡವೇ ಎಂದು ಎಲ್ಲಾ ನಾಯಕರು ಮತ್ತು ಕಾರ್ಯಕರ್ತರ ಅಭಿಪ್ರಾಯವನ್ನು ತೆಗೆದುಕೊಂಡಾಗ ಪಾಲಿಕೆ ಕಾಂಗ್ರೆಸ್ ಅಭ್ಯರ್ಥಿಗಳು, ಬ್ಲಾಕ್ ಮಟ್ಟದ ಪದಾಧಿಕಾರಿಗಳು, ವಾರ್ಡ್ ಅಧ್ಯಕ್ಷರು ಮತ್ತು 253 ಬೂತ್‌ಗಳ ಕಾರ್ಯಕರ್ತರು ಅರ್ಜಿ ಸಲ್ಲಿಸಲು ಅವರನ್ನು ಕೇಳಿಕೊಂಡರು.


ರಜತ್ ಅವರ ಮೇಲೆ ಪ್ರೀತಿ, ವಿಶ್ವಾಸ, ಗೌರವ ಮತ್ತು ಅಭಿಮಾನ ಇಟ್ಟುಕೊಂಡು ಕ್ಷೇತ್ರದಲ್ಲಿ ಸ್ವಯಂ ಪ್ರೇರಿತರಾಗಿ ದೇಣಿಗೆ ಸಂಗ್ರಹಿಸಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗಿ ಕಾಂಗ್ರೆಸ್ ಪಕ್ಷದ ನಿಯಮದಂತೆ ಮೇಘನಾ ಕಿರಣ ಹಿರೇಮಠ, ನವೀನ್ ಚಿಂಚಲಿ, ರೋಹನ್ ಹಿಪ್ಪರಗಿ ಮತ್ತು ತಂಡ ರಜತ್ ಅವರ ಪರವಾಗಿ ಶುಲ್ಕ ಪಾವತಿಸಿ ಕೆ.ಪಿ.ಸಿ.ಸಿಗೆ ಅರ್ಜಿ ಸಲ್ಲಿಸಿದ್ದಾರೆ.


ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿರಣ ಹಿರೇಮಠ ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿ ಪಕ್ಷ ಮರು-ಸಂಘಟಿಸಿ, ಸೋತು ಸುಣ್ಣವಾದ ಕಾರ್ಯಕರ್ತರ ಹೃದಯದಲ್ಲಿ ವಿಶ್ವಾಸವನ್ನು ತುಂಬಿದ್ದಾರೆ, ಸಂಕಷ್ಟದ ಕಾಲದಲ್ಲಿ ಬಡವರ ಧ್ವನಿಯಾಗಿದ್ದಾರೆ. ವಾಣಿಜ್ಯ ನಗರಿ ೩೦ ವರ್ಷಗಳಿಂದ ಅಸಹಾಯಕವಾಗಿದೆ ರಜತ್ ಮೂಲಕ ಹುಬ್ಬಳ್ಳಿಯ ಧ್ವನಿ ಬದಲಾವಣೆ ಆಗುತ್ತೆದೆಯೆಂಬ ವಿಶ್ವಾಸ ವ್ಯಕ್ತಪಡಿಸಿದರು.

 

administrator

Related Articles

Leave a Reply

Your email address will not be published. Required fields are marked *