ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದ ಗಾಯತ್ರಿ ಎಸ್.ಆರ್. ಅವರು ಕಾನೂನು ಪದವಿಯಲ್ಲಿ ಪ್ರಥಮ ರ್‍ಯಾಂಕ್ ಜೊತೆಗೆ ಚಿನ್ನದ ಪದಕದ ಪಡೆದು ಉತ್ತೀರ್ಣರಾಗಿದ್ದಾರೆ.
ನಗರದ ಸರ್ ಸಿದ್ದಪ್ಪ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗಾಯತ್ರಿ ಅವರು, ವಿ.ಜಿ.ಭಟ್ ಚಿನ್ನದ ಪದಕ, ಶಿವದೇವ ಒಡೆಯರ ಚಿನ್ನದ ಪದಕ, ಡಾ.ಎಸ್.ಚನ್ನಬಸಪ್ಪ ಸ್ಮಾರಕ ಚಿನ್ನದ ಪದಕ, ಪ್ರೊ.ಐ.ಎಸ್.ಪಾವಟೆ ಚಿನ್ನದ ಪದಕ, ಐ.ಜಿ.ಹಿರೇಗೌಡರ ಚಿನ್ನದ ಪದಕ ಮತ್ತು ರ್‍ಯಾಂಗಲರ್ ಡಿ.ಸಿ.ಪಾವಟೆ ಡೈಮಂಡ್ ಜ್ಯುಬಿಲಿ ಸೆಲಬ್ರೇಷನ್ ಸ್ಕಾಲರಶಿಪ್ ಸಹಿತ ಪಾಸಾಗಿದ್ದಾರೆ.
ಇತ್ತೀಚೆಗೆ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ 70 ಹಾಗೂ 71ನೇ ಘಟಿಕೋತ್ಸವದಲ್ಲಿ ಕೃವಿವಿ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರು ಗಾಯತ್ರಿಗೆ ಪದಕ ಪ್ರದಾನ ಮಾಡಿದರು. ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ, ಕುಲಸಚಿವ ಡಾ.ಎಚ್.ನಾಗರಾಜ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿದ್ದರು.
ಚಿಕ್ಕಮಗಳೂರು ಮೂಲದ ಗಾಯತ್ರಿ ಸಧ್ಯ ಹಿರಿಯ ವಕೀಲರಾದ ಕೇಶವರೆಡ್ಡಿ, ಮಲ್ಲಿಕಾಜುನಸ್ವಾಮಿ ಹಿರೇಮಠ, ಕೆ.ಎಸ್.ಪಾಟೀಲ ಮತ್ತು ಆರ್.ಎಚ್.ಅಂಗಡಿ ಅವರ ಬಳಿ ವಕೀಲ ವೃತ್ತಿಯಲ್ಲಿ ತೊಡಗಿದ್ದಾರೆ.