ಹುಬ್ಬಳ್ಳಿ-ಧಾರವಾಡ ಸುದ್ದಿ
ಸಿಸಿಬಿ ಪೊಲೀಸರಿಂದ ‘ಚಿನ್ನದ ಬೇಟೆ’  38.50 ಲಕ್ಷ ಮೌಲ್ಯದ ಬಂಗಾರ ಜಪ್ತಿ  ಬೆಲ್ಟ್ ನಲ್ಲಿ ಬಂಗಾರ ಸಾಗಿಸುತ್ತಿದ್ದ ಜನ್ನು ಅಂದರ್

ಸಿಸಿಬಿ ಪೊಲೀಸರಿಂದ ‘ಚಿನ್ನದ ಬೇಟೆ’ 38.50 ಲಕ್ಷ ಮೌಲ್ಯದ ಬಂಗಾರ ಜಪ್ತಿ ಬೆಲ್ಟ್ ನಲ್ಲಿ ಬಂಗಾರ ಸಾಗಿಸುತ್ತಿದ್ದ ಜನ್ನು ಅಂದರ್

ಹುಬ್ಬಳ್ಳಿ: ಬೆಲ್ಟ್ ನಲ್ಲಿ ಸುಮಾರು 38.50 ಲಕ್ಷ ಮೌಲ್ಯದ ಚಿನ್ನ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖದೀಮನನ್ನು ಸಿಸಿಬಿ ಪೋಲಿಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.
ಚೇತನ ದೇವೆಂದ್ರಪ್ಪ ಜನ್ನು ಎಂಬ ಮಧುರಾ ಎಸ್ಟೇಟ ವ್ಯಕ್ತಿಯೇ ರವಿವಾರ ರಾತ್ರಿ ಸುಮಾರು ೮೦೪.೧ ಗ್ರಾಂ ಚಿನ್ನವನ್ನು ಬೆಲ್ಟ್ ನಲ್ಲಿ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೆರೆಗೆ ದಾಳಿ ನಡೆದಿದೆ.
ಸಿಸಿಬಿ ಇನ್ಸಪೆಕ್ಟರ್ ಅಲ್ತಾಫ್ ನೇತ್ರತ್ವದ ಅನಿಲ ಹುಗ್ಗಿ, ಸಂತೋಷ ಇಚ್ಚಂಗಿ ಮುಂತಾದವರ ತಂಡ ಗಿರಣಿಚಾಳ ಬಳಿಯ ಏಳು ಮಕ್ಕಳ ತಾಯಿಯ ಗುಡಿಯ ಹಿಂಭಾಗದಲ್ಲಿ ವಶಕ್ಕೆ ಪಡೆದಿದ್ದಾರೆ.
ಚಿನ್ನವನ್ನು ಜಪ್ತಿ ಮಾಡಿದ ಸಿಸಿಬಿ ಅಧಿಕಾರಿಗಳು ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಇದು ಇತ್ತೀಚಿನ ವರ್ಷಗಳಲ್ಲಿ ಕಮಿಶ್ನರೇಟ್ ವ್ಯಾಪ್ತಿಯಲ್ಲಿನ ದೊಡ್ಡ ಚಿನ್ನದ ಬೇಟೆಯಾಗಿದೆ.

administrator

Related Articles

Leave a Reply

Your email address will not be published. Required fields are marked *