ಹುಬ್ಬಳ್ಳಿ-ಧಾರವಾಡ ಸುದ್ದಿ

ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು  ಆಗ್ರಹ

ಧಾರವಾಡ: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ಅತಿಥಿ ಉಪನ್ಯಾಸಕರನ್ನು ಸರಕಾರ ಕಾಯಂಗೊಳಿಸಬೇಕೆಂದು ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಸರಕಾರಕ್ಕೆ ಆಗ್ರಹಪಡಿಸಿದ್ದಾರೆ.
ನಗರದಲ್ಲಿ ಹೋರಾಟ ನಿರತ ಅತಿಥಿ ಉಪನ್ಯಾಸಕರನ್ನು ಭೇಟಿ ಮಾಡಿ ಅವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗುರಿಕಾರ, ತಾತ್ಕಾಲಿಕ ನೇಮಕಾತಿಗಳಿಂದ ಪರಿಣಾಮಕಾರಿ ಕಲಿಕೆ ಸಾಧ್ಯವಿಲ್ಲ. ಭೋದಕ ನೆಮ್ಮದಿಯಿಂದ ಇದ್ದರೆ ಪರಿಣಾಮಕಾರಿ ಭೋದನೆ ಮಾಡಲು ಸಾಧ್ಯ. ಸರಕಾರ ಅತಿಥಿ ಉಪನ್ಯಾಸಕರಿಗೆ ಕೊಡುವ ವೇತನ ಬಹಳ? ಕನಿ? ಪ್ರಮಾಣದಲ್ಲಿ ಇದೆ. ಇದರಿಂದ ಜೀವನ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಈ ಹಿಂದೆ ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ಮಾಡಿದ ಶಿಕ್ಷಕರು ಗಳನ್ನು ಖಾಯಂಗೊಳಿಸಿದ ಉದಾಹರಣೆಗಳಿವೆ. ದೆಹಲಿ ಹರಿಯಾಣ ರಾಜ್ಯ ಸರಕಾರಗಳು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿವೆ. ಕರ್ನಾಟಕ ಸರಕಾರ ತಕ್ಷಣ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕೆಂದು ಗುರಿಕಾರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನಮಂತಗೌಡ ಕಲ್ಮನಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರ ಶಿಕ್ಷಕ ದುರೀಣ ಬನ್ನೂರ, ರವಿಕುಮಾರ ಜಮಖಂಡಿ, ಕನ್ನಡಪರ ಸಂಘಟನೆಯ ಮುಖಂಡ ವಿನಾಯಕ ಗುಡ್ಡದಕೇರಿ ಇದ್ದರು.

ಸೇವಾ ಭದ್ರತೆಗೆ ಆಗ್ರಹಿಸಿ ಧಾರವಾಡ ಮಿನಿವಿಧಾನಸೌಧದೆದುರು ಅನಿರ್ಧಿಷ್ಟ ಅಹೋರಾತ್ರಿ ಧರಣಿ ನಿರತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಒಂದು ದಿನ ಸಾಂಕೇತಿಕ ಧರಣಿ ನಡೆಸಲು ಬಸ್ ಮೂಲಕ ಬೆಳಗಾವಿ ಸುವರ್ಣಸೌಧಕ್ಕೆ ಪ್ರಯಾಣ ಬೆಳೆಸಿದರು. ರಾಮಕೃಷ್ಣ.ವಿ.ಹೆಗಡೆ, ಹನುಮಂತಗೌಡ ಕಲ್ಮನಿ, ದಾನೇಶ್ವರಿ ಗುಡ್ಡದ, ವಿಜಯಲಕ್ಷ್ಮಿ ಜೋಶಿ, ಜಾನ್ ಪೀಟರ್, ಶಿವಾನಂದ ಕಲ್ಲೂರ ಸೇರಿದಂತೆ ಇತರರಿದ್ದರು.

ಸರಕಾರ ಬೇಡಿಕೆ ಈಡೇರಿಸುವತನಕ ಹೋರಾಟ

ಧಾರವಾಡ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಹೋರಾಟ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ. ಹನುಮಂತಗೌಡ ಕಲ್ಮನಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದಾಗ್ಯೂ ಸರ್ಕಾರ ಪರಿಹಾರ ನೀಡುತ್ತಿಲ್ಲ. ಹೀಗಾಗಿ ಈ ಬಾರಿ ಸರ್ಕಾರ ಸ್ಪಷ್ಟ ಆದೇಶ ನೀಡಿದರಷ್ಟೇ ಹೋರಾಟ ನಿಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ತರಗತಿ ಬಹಿಷ್ಕರಿಸಿದ ಹೋರಾಟದಲ್ಲಿ ತೊಡಗಿರುವ ಉಪನ್ಯಾಸಕರು ತರಗತಿಗೆ ಹಾಜರಾಗದಿದ್ದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವರು ಹೇಳಿರುವುದು ಖಂಡನೀಯ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಸೇವಾ ಭದ್ರತೆಯ ಲಿಖಿತ ಆದೇಶ ದೊರೆಯುವವರೆಗೆ ನಮ್ಮ ಹೋರಾಟ , ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ ಎಂದರು.
ಪ್ರೊ. ಸಂಜು ಸತರೆಡ್ಡಿ, ಪ್ರೊ. ವಿಜಯಲಕ್ಷ್ಮೀ ಜೋಶಿ, ಪ್ರೊ. ವೈ.ಜಿ. ಹಂಚನಾಳ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *