ಹುಬ್ಬಳ್ಳಿ-ಧಾರವಾಡ ಸುದ್ದಿ

ಯುವಕರ ಸಂಭ್ರಮದ ಹಲಗಿ ಹಬ್ಬ

ಧಾರವಾಡ: ಪ್ರತಿ ವರ್ಷದಂತೆ ಈ ವರ್ಷವು ನಗರದಲ್ಲಿ ರವಿವಾರ ಹಲಗಿ ಹಬ್ಬ ನೂರಾರು ಯುವಕ ಪಾಲ್ಗೊಳ್ಳುವಿಕೆಯ ಮೂಲಕ ಅತ್ಯಂತ ಸಂಭ್ರಮದಿಂದ ನಡೆಯಿತು.
ಹಲಗಿ ಹಬ್ಬಕ್ಕೆ ಹೊಸಯಲ್ಲಾಪುರದ ಹಿರೇಮಠ ಗದಗಯ್ಯ ಸ್ವಾಮೀಜಿ ಗಳ ಸಾನಿಧ್ಯದಲ್ಲಿ ಶಾಸಕರಾದ ಅರವಿಂದ ಬೆಲ್ಲದ ಮತ್ತು ಅಮೃತ ದೇಸಾಯಿ ಅವರು ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಮೃತ ದೇಸಾಯಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಹಲಗಿ ಹಬ್ಬ ರಂಗೇ ರಿರಲಿಲ್ಲ. ಆದರೆ ಈ ಬಾರಿ ಹಲಗಿ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರ ಹುಮ್ಮಸ್ಸಿನಿಂದ ಭಾಗವಹಿಸಿರುವುದು ಹಿಂದುಗಳ ಹಬ್ಬಕ್ಕೆ ಮೆರಗು ತಂದಂತಾಗಿದೆ ಎಂದರು.
ಏಕತೆ, ಸಮಾತೆ ಕಾಪಾಡಲು ಇಂತಹ ಹಬ್ಬಗಳು ಸ್ಪ್ಪೂರ್ತಿ. ಹಲಗಿ ಹಬ್ಬ ಏಕತೆಯ ಹಬ್ಬವಾಗಿದೆ. ಇದು ಎಲ್ಲ ವರ್ಗದ ಜನರು ಇದರಲ್ಲಿ ಪಾಲ್ಗೊಳ್ಳುವುದರಿಂದ ನಾಡು ಹಬ್ಬದಂತಾಗಿದೆ ಎಂದರು.


ಪಾಲಿಕೆ ಸದಸ್ಯರಾದ ಶಂಕರ ಶೇಳಕೆ, ನೀತಿನ್ ಇಂಡಿ, ಶಂಭುಗೌಡ ಸಾಲಮನಿ, ಸುನೀಲ ಮೋರೆ, ಈರಣ್ಣ ಹಪ್ಪಳಿ, ಮೋಹನ ರಾಮದುರ್ಗ, ಬಸವರಾಜ ಬೆಣ್ಣಿ, ರಾಕೇಶ ನಾಝರೆ, ಮಹೇಶ ಸುಲಾಖೆ, ಓಂಕಾರ ರಾಯಚೂರ, ಶ್ರೀನಿವಾಸ ಪಾಟೀಲ್, ನಾಗರಾಜ ನಾಯಕ ಇನ್ನಿತರರು ಉಪಸ್ಥಿತರಿದ್ದರು.

 

administrator

Related Articles

Leave a Reply

Your email address will not be published. Required fields are marked *