ಹುಬ್ಬಳ್ಳಿ-ಧಾರವಾಡ ಸುದ್ದಿ

ಗಲಭೆಕೋರರು ಕಲಬುರ್ಗಿ ಜೈಲಿಗೆ ಬಂಧಿತರ ಸಂಖ್ಯೆ 103ಕ್ಕೇರಿಕೆ –

ಮೌಲ್ವಿ ಹೈದ್ರಾಬಾದ್‌ಗೆ ಪರಾರ ?

ಹುಬ್ಬಳ್ಳಿ: ಕಳೆದ ಶನಿವಾರ ರಾತ್ರಿ ನಡೆದ ಘಟನೆಯ ನಂತರ ಉದ್ವಿಗ್ನಗೊಂಡಿದ ಹಳೇಹುಬ್ಬಳ್ಳಿ ಇಂದು ಯಥಾ ಸ್ಥಿತಿಗೆ ಮರಳಿದ್ದು, ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 103 ಗಲಭೆಕೋರರನ್ನು ಕಲಬುರಗಿ ಜೈಲಿಗೆ ರವಾನೆ ಮಾಡಲಾಗಿದೆ.


ಗಲಭೆಗೆ ಕಾರಣರಾದರೆನ್ನಲಾದ ಮತ್ತೆ 15 ಜನರನ್ನು ಬಂಧಿಸಿದ್ದು, ಇದರಿಂದ ಬಂಧಿತರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ. ಮತ್ತೆ ಯಾವುದೇ ಅಹಿತಕರ ಘಟನೆ ನಡೆದಿಲ್ಲವಾಗಿದ್ದು ಹತೋಟಿಯಲ್ಲಿದ್ದು ಸಹಜ ಸ್ಥಿತಿಗೆ ಮರಳಿದೆ ಎಂದು ಪೊಲೀಸ್ ಆಯುಕ್ತ ಲಾಭೂರಾಮ್ ’ಸಂಜೆ ದರ್ಪಣ’ ತಿಳಿಸಿದರು.


ಒಟ್ಟು 12 ಎಫ್‌ಐಆರ್ ದಾಖಲಾಗಿದ್ದು, ದೇವಸ್ಥಾನ, ಮನೆ, ಆಸ್ಪತ್ರೆ ಹಾಗೂ ಪೋಸ್ಟ್ ಆಫೀಸ್ ಮೇಲೆ ಕಲ್ಲು ಎಸೆದಿರುವ ಪ್ರಕರಣ ಹಾಗೂ ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿ ಹಾನಿ ಕೇಸ್‌ಗಳು ದಾಖಲಾಗಿವೆ.
ಪೊಲೀಸ್ ವಾಹನದ ಮೇಲೆ ಮೌಲ್ವಿ ಸೇರಿದಂತೆ ಹಲವರು ಹತ್ತಿದ್ದ ಪ್ರಕರಣ ದ ಬಗ್ಗೆ ಪೊಲೀಸ್ ತನಿಖೆ ಆರಂಭವಾಗಿದೆ. ತನಿಖೆ ನಂತರ ಯಾರೆಲ್ಲಾ ಈ ವೇಳೆ ಭಾಗಿಯಾಗಿದ್ದರು ಎಂಬುದರ ಬಗ್ಗೆ ಗೊತ್ತಾಗಲಿದೆ.
ಗಲಭೆ ಪ್ರಕರಣದ ಕುರಿತು ಗುಪ್ತಚರ ಮಾಹಿತಿಯಿಂದ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಬಂಧಿತರ ಬಿಡುಗಡೆಗೆ ಆಗ್ರಹಿಸಿ ಮತ್ತೊಂದು ಹೋರಾಟಕ್ಕೆ ಕೆಲವು ಸಂಘಟನೆಗಳು ಮುಂದಾಗಿರುವ ಮಾಹಿತಿ ಇರುವ ಹಿನ್ನೆಲೆಯಲ್ಲಿ ಕಲಬುರಗಿಯ ಕೇಂದ್ರಿಯ ಕಾರಾಗೃಹಕ್ಕೆ ರವಾನೆ ಮಾಡಲು ನಿರ್ಧರಿಸಿದ್ದು, ನವಲಗುಂದ ಮಾರ್ಗವಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಗಳನ್ನು ಕರೆದೊಯ್ಯಲಾಯಿತು.


ಪೊಲೀಸ್ ಕಮಿಷನರ್ ಕಾರಿನ ಮೇಲೆ ಹತ್ತಿ ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿ ಗಲಾಟೆ ನಡೆದ ಮಧ್ಯರಾತ್ರಿಯೇ ಹೈದರಾಬಾದ್ ತೆರಳಿದ್ದಾನೆ ಎನ್ನಲಾಗುತ್ತಿದೆ.
ನಂತರ ಗಲಾಟೆ ನಡೆದ ಮಧ್ಯರಾತ್ರಿಯೇ ವಾಸೀಂ ಹುಬ್ಬಳ್ಳಿಯಿಂದ ರೈಲಿನ ಮುಖಾಂತರ ಹೈದರಾಬಾದ್‌ಗೆ ತೆರಳಿದ್ದಾನೆ. ಈತನ ಜೊತೆಗೆ ಇನ್ನೂ ೮ ಮಂದಿ ಗಲಭೆಕೋರರು ಹೈದರಾಬಾದ್‌ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಮುಂದುವರಿದ ಪತ್ತೆ: ಗಲಭೆಕೋರರ ಪತ್ತೆ ಕಾರ್‍ಯ ಮುಂದುವರಿದಿದ್ದು ಗಂಟೆ ಗಂಟೆಗೂ ಬಂಧಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದಂತೆಯೇ ನಮ್ಮ ಮಕ್ಕಳನ್ನು ಬಿಡಿ ಪೋಷಕರು ಆಗಮಿಸಿ ಹೈಡ್ರಾಮಾ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

administrator

Related Articles

Leave a Reply

Your email address will not be published. Required fields are marked *