ಹುಬ್ಬಳ್ಳಿ-ಧಾರವಾಡ ಸುದ್ದಿ

’ವಿಷಯಪಟ್ಟಿ’ ಗಲಾಟೆ: ಪಾಲಿಕೆ ಸಭೆ ಮುಂದೂಡಿಕೆ

ಖಾಸಗಿ ಆಸ್ತಿ ಖರೀದಿ – ಪ್ರತ್ಯೇಕ ಸಭೆಗೆ ಕೈ ಪಟ್ಟು

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಂದು ವಿಷಯ ಪಟ್ಟಿ ಮಂಡನೆ ಕುರಿತು ನಿಯಮಾವಳಿ ಜಿಜ್ಞಾಸೆಗೊಳಗಾಗಿ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಜಟಾಪಟಿ ನಡೆದು ಬಿರುಸಿನ ವಾಗ್ವಾದ ನಡೆದು ಮುಂದೂಡಿದ ಪ್ರಸಂಗ ಇಂದಿನ ಪಾಲಿಕೆ ಸಾಮನ್ಯ ಸಭೆಯಲ್ಲಿ ನಡೆಯಿತು.
ಸಭೆ ಆರಂಭದಲ್ಲಿ ಪರಿಷತ್ ಕಾರ್ಯದರ್ಶಿ ಗುರುಶಾಂತಪ್ಪ ಡಂಬಳ ಹೆಚ್ಚುವರಿ ಪಟ್ಟಿ ಮಂಡಿಸಲು ಮುಂದಾದರು. ವಿಪಕ್ಷ ಹಾಗೂ ಆಡಳಿತ ಪಕ್ಷದವರ ಮಧ್ಯೆ ಗೊಂದಲಕ್ಕೆ ಕಾರಣವಾಯಿತು.


ಕೆಎಂಸಿ ನಿಯಮಗಳ ಪ್ರಕಾರ, ಸಭೆಯ ವಿಷಯ ಪಟ್ಟಿಯನ್ನು ಸದಸ್ಯರಿಗೆ ಲಿಖಿತವಾಗಿ ಕೊಡಬೇಕು. ಕೊಡದೇ ಹೇಗೆ ಮಂಡಿಸುತ್ತೀರಿ. ಇದಕ್ಕೆ ಕಾನೂನು ಏನು ಹೇಳುತ್ತದೆ, ಎಂಬುದನ್ನು ತಿಳಿಸಿದ ಬಳಿಕ ಸಭೆ ನಡೆಸಬೇಕೆಂದು ಕಾಂಗ್ರೆಸ್‌ನ ವಿಪಕ್ಷ ನಾಯಕಿ ಸುವರ್ಣಾ ಕಲಕುಂಟ್ಲ, ಪಾಲಿಕೆ ಸದಸ್ಯರಾದ ಆರೀಫ ಭದ್ರಾಪುರ,ಇಕ್ಬಾಲ್ ನವಲೂರ, ದೊರೆರಾಜ ಮಣಿಕುಂಟ್ಲ ಸೇರಿದಂತೆ ಇತರ ಸದಸ್ಯರು ಪಟ್ಟು ಹಿಡಿದರು. ಏತನ್ಮಧ್ಯೆ ಕಾನೂನು ಸಲಹೆ ಗಾರರು ಪುಸ್ತಕದಲ್ಲಿ ಇದ್ದದ್ದನ್ನು ಓದಿದರು. ಅದು ಕೂಡ ಸಮರ್ಪಕವಾಗಿ ಅರ್ಥವಾಗಲಿಲ್ಲ. ಈ ವೇಳೆ ಸಭೆಯಲ್ಲಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದವರ ಮಧ್ಯೆ ಮಾತಿನ ಚಕಮಕಿ ನಡೆಯಿತು.


ಸದನಕ್ಕೆ ಅಗೌರವ ತೋರುತ್ತಿದ್ದೀರಿ ಎಂದು ಬಿಜೆಪಿ ಸದಸ್ಯ ತಿಪ್ಪಣ್ಣ ಮಜ್ಕಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯ ಸಭಾ ನಾಯಕ ಶಿವು ಹಿರೇಮಠ, ಹಿರಿಯ ಸದಸ್ಯರಾದ ವೀರಣ್ಣ ಸವಡಿ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ಬೀರಪ್ಪ ಖಂಡೇಕರ,ರೂಪಾ ಶೆಟ್ಟಿ ಉಮೇಶ ಕೌಜಗೇರಿ ಸಾಥ್ ನೀಡಿದರು. ಆಗ ಮೇಯರ್ ವೀಣಾ ಬರದ್ವಾಡ, ಹೆಚ್ಚುವರಿ ವಿಷಯ ಪಟ್ಟಿಯನ್ನು ಕೈ ಬಿಡಲಾಗಿದ್ದು, ಸದ್ಯಕ್ಕೆ ಸಭೆ ಮುಂದೂಡಲಾಗಿದೆ ಎಂದು ರೂಲಿಂಗ್ ನೀಡಿ ಹೊರನಡೆದರು. ಇದನ್ನು ಪ್ರತಿಪಕ್ಷ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರೆ ಬಿಜೆಪಿ ಸದಸ್ಯರು ಮೇಯರ್ ಅವರ ನಿಲುವು ಸರಿಯಲ್ಲ ಆಕ್ರೋಶ ವ್ಯಕ್ತಪಡಿಸಿದರು.


ಮಹಾನಗರ ಪಾಲಿಕೆ ಆಸ್ತಿಗೆ ಹೊಂದಿಕೊಂಡಿರುವ ಖಾಸಗಿ ಆಸ್ತಿಗಳನ್ನು ಖರೀದಿಸುವ ವಿಷಯ ವಿಷಯ ಪಟ್ಟಿಯಲ್ಲಿದ್ದು ಇದನ್ನು ಸಮಗ್ರವಾಗಿ ವಿಶೇಷ ಸಭೆ ಕರೆದು ಆ ಕುರಿತು ಎಲ್ಲ ಮಾಹಿತಿಗಳನ್ನು ನೀಡಬೇಕೆಂದು ಕಾಂಗ್ರೆಸ್‌ನ ವಿಪಕ್ಷ ನಾಯಕಿ ಸುವರ್ಣಾ ಕಲಕುಂಟ್ಲ, ಪಾಲಿಕೆ ಸದಸ್ಯರಾದ ಆರೀಫ ಭದ್ರಾಪುರ,ಇಕ್ಬಾಲ್ ನವಲೂರ,ದೊರೆರಾಜ ಮಣಿಕುಂಟ್ಲ ಆಗ್ರಹಿಸಿದರು.

 

administrator

Related Articles

Leave a Reply

Your email address will not be published. Required fields are marked *