ಶೆಟ್ಟಿ, ಶಿವು, ಬೇದರೆ, ಸಫಾರೆಗೆ ಅಧ್ಯಕ್ಷಗಿರಿ ಪಕ್ಕಾ
ಬಿಜೆಪಿ, ಕಾಂಗ್ರೆಸ್ ಮಧ್ಯೆ 4:3 ಸೂತ್ರ ಯಶಸ್ವಿ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಇಂದು ನಡೆದ ಚುನಾವಣೆಯಲ್ಲಿ 28 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಎರಡೂ ಪಕ್ಷಗಳು ತಲಾ ನಾಲ್ಕು ಹಾಗೂ ಮೂರು ಸೂತ್ರದನ್ವಯ ಹೊಂದಾಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಹಣಕಾಸು ಸ್ಥಾಯಿ ಸಮಿತಿ: ಬಿಜೆಪಿಯ ಶಿವು ಮೆಣಸಿನಕಾಯಿ,ಸತೀಶ ಹಾನಗಲ್, ಸರಸ್ವತಿ ಧೋಂಗಡಿ, ಚಂದ್ರಿಕಾ ಮೇಸ್ತ್ರಿ ಕಾಂಗ್ರಸ್‌ನಿಂದ ಇಮ್ರಾನ್ ಯಲಿಗಾರ, ಇಲಿಯಾಸ್ ಮನಿಯಾರ್, ಮಂಜುನಾಥ ಬಡಕುರಿ ನಾಮಪತ್ರ ಸಲ್ಲಿಸಿದ್ದಾರೆ.
ನಗರಯೋಜನಾ ಸಮಿತಿ : ಬಿಜೆಪಿಯಿಂದ ವಿಜಯಾನಂದ ಶೆಟ್ಟಿ, ಶಂಕರ ಶೇಳಕೆ,ಪೂಜಾ ಶೇಜವಾಡಕರ, ಕಿಶನ್ ಬೆಳಗಾವಿ ಕಾಂಗ್ರೆಸ್‌ನಿಂದ ರಾಜಶೇಖರ ಕಮತಿ, ಮಂಗಳಾ ಹಿರೇಮನಿ, ಗೀತಾ ಹೊಸಮನಿ ನಾಮಪತ್ರ ಸಲ್ಲಿಸಿದ್ದಾರೆ.
ಆರೋಗ್ಯ ಸ್ಥಾಯಿ ಸಮಿತಿ: ಬಿಜೆಪಿಯ ಸುರೇಶ ಬೆದರೆ, ಆನಂದ ಯಾವಗಲ್, ಎಂ.ವೈ. ನರಗುಂದ,ದುರ್ಗಮ್ಮ ಬಿಜವಾಡ ಹಾಗೂ ಕೈ ಪಾಳೆಯದಿಂದ ಕವಿತಾ ಕಬ್ಬೇರ, ಪ್ರಕಾಶ ಕುರಹಟ್ಟಿ, ಸವಿತಾ ಬುರಬುರೆ ನಾಮಪತ್ರ ಸಲ್ಲಿಸಿದ್ದಾರೆ.
ಲೆಕ್ಕ ಸ್ಥಾಯಿ ಸಮಿತಿ : ಕಮಲ ಪಾಳೆಯದಿಂದ ರಾಧಾಭಾಯಿ ಸಫಾರೆ,ಅನಿತಾ ಚಳಗೇರಿ, ಲಕ್ಷ್ಮಿ ಹಿಂಡಸಗೇರಿ, ರೂಪಾ ಶೆಟ್ಟಿ ಹಾಗೂ ಕಾಂಗ್ರೆಸ್‌ನಿಂದ ಸೆಂದಿಲ್ ಕುಮಾರ, ಗಣೇಶ ಮುಧೋಳ ಹಾಗೂ ಅಕ್ಷತಾ ಅಸುಂಡಿ ನಾಮಪತ್ರ ಸಲ್ಲಿಸಿದರು.
ತಲಾ 7 ಸ್ಥಾನಗಳಿಗೆ 7 ಜನ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಿಶ್ಚಿತವಾಗಿದೆ. ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಮುಂತಾದವರು ಇದ್ದು.ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ ಆಯ್ಕೆಯನ್ನು ಮಧ್ಯಾಹ್ನ ಪ್ರಕಟಿಸಲಿದ್ದಾರೆ.
ಅತ್ಯಂತ ನಿರ್ಣಾಯಕ ಸಮಿತಿಗಳಾದ ಹಣಕಾಸಿಗೆ ಶಿವು ಮೆಣಸಿನಕಾಯಿ, ಕಾಮಗಾರಿ ಸ್ಥಾಯಿ ಸಮಿತಿ ವಿಜಯಾನಂದ ಶೆಟ್ಟಿಯವರಿಗೆ, ಸುರೇಶ ಬೇದರೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ಲೆಕ್ಕ ಸ್ಥಾಯಿ ಸಮಿತಿ ಕುರ್ಚಿಯಲ್ಲಿ ಶ್ರೀಮತಿ ರಾಧಾಬಾಯಿ ಸಫಾರೆ ಇವರಿಗೆ ನಿಕ್ಕಿಯಾಗಿದೆ.
ಪಕ್ಷೇತರರಿಗೆ ಕಮಲ ಆದ್ಯತೆ
ಮೇಯರ್ ಚುನಾವಣೆಯಲ್ಲಿ ಬೆಂಬಲಿಸಿದ್ದ ಪಕ್ಷೇತರರಾದ ಕಿಶನ್ ಬೆಳಗಾವಿ ಚಂದ್ರಿಕಾ ಮೇಸ್ತ್ರಿ, ದುರ್ಗಮ್ಮ ಬಿಜವಾಡ ಅಲ್ಲದೇ ಜೆಡಿಎಸ್ ನಿಂದ ಆಯ್ಕೆಯಾಗಿದ್ದ ಲಕ್ಷ್ಮಿ ಹಿಂಡಸಗೇರಿ ನಾಲ್ವರಿಗೂ ಸ್ಥಾಯಿ ಸಮಿತಿಯಲ್ಲಿ ಆದ್ಯತೆ ನೀಡಿ ಪಕ್ಷ ಗಟ್ಟಿಗೊಳಿಸಲು ಮುಂದಾಗಿದೆ.
ಪೂರ್ವ, ಪಶ್ಚಿಮಕ್ಕೆ ನಾಲ್ಕು ಸ್ಥಾನ
ಕಾಂಗ್ರೆಸ್ ಪಾಳೆಯದಲ್ಲಿ ಇಂದು ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ನೇತೃತ್ವದಲ್ಲಿ ಸಭೆ ಸೇರಿ ಪೂರ್ವ ಮತ್ತು ಪಶ್ಚಿಮಕ್ಕೆ ನಾಲ್ಕು ಸ್ಥಾನ ನೀಡಿದರೆ ಸೆಂಟ್ರಲ್‌ಗೆ ಮೂರು ಹಾಗೂ ಧಾರವಾಡ ಗ್ರಾಮೀಣಕ್ಕೆ ಒಂದು ಸ್ಥಾನ ನೀಡಲಾಗಿದೆ. ಪಕ್ಷೇತರರಾಗಿ ಗೆದ್ದಿದ್ದ ಪೂರ್ವದ ಅಕ್ಷತಾ ಅಸುಂಡಿಗೂ ಲೆಕ್ಕದ ಸ್ಥಾನ ನೀಡಲಾಗಿದೆ.
ರಾಜಣ್ಣಗೆ ಮತ್ತೆ ಕೈಕೊಟ್ಟ ಅದೃಷ್ಟ
ಮೇಯರ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ರಾಜಣ್ಣ ಕೊರವಿಯವರಿಗೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ನಿಕ್ಕಿ ಎನ್ನುವಂತಿದ್ದರೂ ಮತ್ತೆ ಅದೃಷ್ಟ ಕೈ ಕೊಟ್ಟಿದೆ. ಆ ಸ್ಥಾನಕ್ಕೆ ಶಿವು ಮೆಣಸಿನಕಾಯಿ ಬಂದಿದ್ದಾರೆ.ಮುಂದಿನ ದಿನಗಳಲ್ಲಿ ರಾಜಣ್ಣಗೆ ಯಾವ ಸ್ಥಾನ ಮಾನ ನೀಡುವರು ಕಾದು ನೋಡಬೇಕಿದೆ.