ಧಾರವಾಡ: ಇಲ್ಲಿನ ವಿಠಲ್ ಇನಸ್ಟಿಟ್ಯೂಟ್ ಆಫ್ ಚೈಲ್ಡ ಹೆಲ್ತ್ ಆಂಡ್ ಸ್ಟೇಷಾಲಿಟಿ ಸೆಂಟರ್‌ನ 43 ನೇ ವಾರ್ಷಿಕೋತ್ಸವ ಮತ್ತು ಮಕ್ಕಳ ಅಕಾಡೆಮಿಯ 21 ನೇ ವಾರ್ಷಿಕೋತ್ಸವ ಅಂಗವಾಗಿ ಸ್ಮಾರ್ಟ ಬಾಸ್ ಬೇಬಿ ಎಂಬ ಹೆಸರಿನಲ್ಲಿ ಆರೋಗ್ಯಕರ ಮಗು ಸ್ಪರ್ಧೆಯನ್ನು ಇದೇ ದಿ.20 ರಂದು ಆಯೋಜಿಸಲಾಗಿದೆ ಎಂದು ಮಕ್ಕಳ ಅಕಾಡೆಮಿ ಅಧ್ಯಕ್ಷ ಡಾ.ರಾಜನ್ ದೇಶಪಾಂಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
6 ತಿಂಗಳಿಂದ 4 ವರ್ಷದೊಳಗಿನ ಶಿಶುಗಳಿಗೆ ವಿಠಲ್ ಇನಸ್ಟಿಟ್ಯೂಟ್ ಆಫ್ ಚೈಲ್ಡ ಹೆಲ್ಲ ಆಂಡ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ.
ಪಾಲಕರು ಮಕ್ಕಳ ಹೆಸರನ್ನು 19 ನೇ ಮಾರ್ಚವರೆಗೆ ಬೆಳಿಗ್ಗೆ 10 ರಿಂದ 8 ಘಂಟೆಯ ಒಳಗೆ ನೊಂದಾಯಿಸಬೇಕು. ಮೊ. 9845816404 ಅಥವಾ 0836 2440387ದಲ್ಲಿ ಸಂಪರ್ಕಿಸಬಹುದಾಗಿದೆ ಎಂದರು.
ಚಿಕ್ಕ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಮಾಡಿದ ಪ್ರಯತ್ನಗಳನ್ನು ನೋಡುವುದು ಈ ಸ್ಪರ್ಧೆಯ ಉದ್ದೇಶ. ಪೋಷಕರು ಸ್ಪರ್ಧೆಗೆ ಬರುವಾಗ ತಮ್ಮೊಂದಿಗೆ ಲಸಿಕಾ ಕಾರ್ಡ್ ತರಬೇಕು. ಸ್ಪರ್ಧೆಯು ಮುಖ್ಯವಾಗಿ 6 ತಿಂಗಳಿಂದ 4 ವರ್ಷದೊಳಗಿನ ಮಕ್ಕಳಿಗೆ ೫ ವಿಭಾಗಗಳಿರುತ್ತವೆ. ಹಳ್ಳಿಯಿಂದ ಮತ್ತು ಕೊಳಗೇರಿಯಿಂದ ಬಂದ ಬಡ ಮಕ್ಕಳಿಗೂ ಕೂಡ ಸ್ಪರ್ಧೆ ನಡೆಯಲಿದೆ ಎಂದರು.
ಪ್ರತಿ ವಿಭಾಗದಲ್ಲಿ 1 ನೇ , 2 ನೇ ,3 ನೇ ಮತ್ತು ಸಮಾಧಾನಕರ ಬಹುಮಾನಗಳಿರುತ್ತವೆ. ಎಲ್ಲ ವಿಭಾಗಗಳಲ್ಲಿ ಒಬ್ಬ ಅತ್ಯುತ್ತಮ ಸ್ಮಾರ್ಟ ಬಾಸ್ ಬೇಬಿ ವಿಜೇತರಿಗೆ ಕಿರೀಟ ಮತ್ತು ಪದಕ ಮತ್ತು ಪ್ರಮಾಣಪತ್ರ ಮತ್ತು ಪಾರಿತೋಷಕಗಳನ್ನು ಕೊಡಲಾಗುವುದು ಎಂದರು.
ಭಾಗವಹಿಸಿದವರಿಗೆ ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಪಡೆಯುತ್ತಾರೆ. ಹಳ್ಳಿ ಮತ್ತು ಕೊಳಗೇರಿ ಪ್ರದೇಶದ ಮಕ್ಕಳಿಗೆ ವಿಶೇಷ ಬಹುಮಾನ ನೀಡಲಾಗುವದು. ಮಧ್ಯಾಹ್ನ 12-30 ಗಂಟೆಗೆ ಧಾರವಾಡದ ವಿಠಲ ಆಸ್ಪತ್ರೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಾಗಿ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಮಹಾದೇವ ಚೆಟ್ಟಿ ಆಗಮಿಸಲಿದ್ದಾರೆ. ಡಾ.ಎಸ್.ಆರ್.ರಾಮನಗೌಡರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಪರಿಗಣಿಸಿ ’ಮೆಡಿಕಲ್ ಎಕ್ಸಲೆನ್ಸ್’ ನೀಡಿ ಗೌರವಿಸಲಾಗುವುದು.
ಮಕ್ಕಳ ಅಕಾಡೆಮಿಯ ರಾಜ್ಯ ಮಟ್ಟದಲ್ಲಿ ಅಪ್ರತಿಮ ಯುವ ಕಲಾವಿದರಿಗೆ ಆಯ್ದ ಕ್ಷೇತ್ರಗಳಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಿದ್ದು, ಈ ವರ್ಷ ಆರ್ಯನ್ ಚಿಲಕವಾಡ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆನ್ ಲೈನ್‌ಲೈನಲ್ಲಿ ನಡೆದ ಸ್ಪರ್ಧೆಯ ವಿಜೇತರಿಗೆ ಕೂಡ ಬಹುಮಾನಗಳನ್ನು ಸಹ ವಿತರಿಸಲಾಗುವುದು ಎಂದರು.
ಡಾ.ಎಂ.ವೈ.ಸಾವಂತ. ಅರವಿಂದ ದೇಶಮುಖ,ಕರಣ ದೊಡವಾಡ, ಕಿರಣ ಹಿರೇಮಠ ಗೋಷ್ಠಿಯಲ್ಲಿದ್ದರು.