ಹುಬ್ಬಳ್ಳಿ-ಧಾರವಾಡ ಸುದ್ದಿ

ಹೆಗ್ಗಡೆಯವರ ಅಪಪ್ರಚಾರ : ಕಾನೂನು ಕ್ರಮ ಕೈಗೊಳ್ಳಿ

ನಾಳೆ ಬೆಳ್ತಂಗಡಿಯಲ್ಲಿ ಹೋರಾಟ – ಸರ್ಕಾರಕ್ಕೆ ಮನವಿ

ಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೇಲೆ ಇಲ್ಲ ಸಲ್ಲದ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅಪಪ್ರಚಾರ ಮಾಡಲಾಗುತ್ತಿದ್ದು, ಇಂತಹ ಸುಳ್ಳು ವಿಷಯಗಳನ್ನು ಹರಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಸರಕಾರಕ್ಕೆ ಆಗ್ರಹಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಧರ್ಮಸ್ಥಳವು ಪವಿತ್ರ ಧಾರ್ಮಿಕ ಯಾತ್ರಾಸ್ಥಳವಾಗಿದ್ದು, ರಾಜ್ಯದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯೊಂದಿಗೆ ಹೆಸರುವಾಸಿಯಾಗಿದೆ. ಹೆಗ್ಗಡೆಯವರ ಯೋಜನಾ ಕೌಶಲ್ಯ ಅತ್ಯದ್ಭುತವಾದದ್ದು ಧರ್ಮಸ್ಥಳದ ಚಾರಿತ್ರಿಕ ಮಹತ್ವ ಪರಂಪರೆ ಮತ್ತು ತಮ್ಮ ವ್ಯಕ್ತಿತ್ವಕ್ಕೆ ಸರಿದೂಗುವ ರೀತಿಯಲ್ಲಿ ಅವರು ಯೋಜನೆ ರೂಪಿಸುತ್ತಾ ಬರುತ್ತಿದ್ದಾರೆ, ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಲ್ಲಿ ೪೮ ಲಕ್ಷ ಕುಟುಂಬಗಳಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದರು.


ಇನ್ನು ಸ್ವಸಹಾಯ ಸಂಘದ ಅಭಿವೃದ್ಧಿಯಲ್ಲದೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಮೂಲಕ ಕೆರೆಗಳ ಮನಸ್ಸೇತನ, ರುದ್ರಭೂಮಿ ಅಭಿವೃದ್ಧಿ, ಮಹಿಳೆಯರ ಸಬಲೀಕರಣಕ್ಕಾಗಿ ಜ್ಞಾನವಿಕಾಸ ಕಾರ್ಯಕ್ರಮ ಹಾಗೂ ಉತ್ಸಲ್ಯ ಕಾರ್ಯಕ್ರಮದಲ್ಲಿ ಅಸಹಾಯಕರಿಗೆ ಮಾಶಾಸನ, ಸುಜ್ಞಾನನಿಧಿ ಶಿಷ್ಯವೇತನ, ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡಗಳಿಗೆ ಅನುದಾನ, ಶಿಕ್ಷಕರ ಕೊರತೆ ಇದ್ದಲ್ಲಿ ಜ್ಞಾನದೀಪ ಶಿಕ್ಷಕರ ನಿಯೋಜನೆ, ಮಧ್ಯವರ್ಜನ ಶಿಬಿರ, ಆರೋಗ್ಯರಕ್ಷಾ, ಸಂರ್ಪೂ ಸುರಕ್ಷಾ ಕಾರ್ಯಕ್ರಮ, ೮೭ ಲಕ್ಷ ಮಂದಿಗೆ ಆಯುಷ್ಠಾನ ಕಾರ್ಡ್, ರೈತ ಮಿತ್ರ ಯೋಜನೆಗ ಬಡವರಿಗೆ ಆರ್ಥಿಕ ಸಹಕಾರ ಇವುಗಳ ಕಾರಣಕರ್ತರಾದ ಹೆಗ್ಗಡೆ ಅವರ ಕುರಿತಾಗಿ ಕೆಲವು ಸಮಾಜ ದ್ರೋಹಿಗಳು ಮಾನಹಾನಿಕರ ನುಡಿಗಳನ್ನು ಹೇಳುತ್ತಿರುವುದು ನಿಜಕ್ಕು ನೋವಿನ ವಿಚಾರ ಎಂದರು.


ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಒತ್ತಾಯ ಮಾಡಿ ನ್ಯಾಯಯುತ ತನಿಖೆಗೆ ಆಗ್ರಹಿಸಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಗೆಯೇ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇಂತಹ ಸುಳ್ಳು ವಿಚಾರಗಳ ಬಗ್ಗೆ ಜನರು ಎಚ್ಚರವಹಿಸಬೇಕು. ಸರ್ಕಾರ ಇಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ಜನಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಮುಂದಿನ ದಿನದಲ್ಲಿ ಇಂತಹ ಅಪಪ್ರಚಾರಗಳು ಮರುಕಳಿಸಿದ್ದಲ್ಲಿ ಹೆಗ್ಗಡೆ ಅವರ ಭಕ್ತ ವೃಂದ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಸಂತೋಷ. ಆರ್. ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಫಿರೋಜಿ ಖಂಡೇಕರ, ಸವಿತಾ ಅಮರಶೆಟ್ಟಿ, ವಸಂತ ಅರ್ಕಾಚಾರ, ದೇವೆಂದ್ರಪ್ಪ ಕಾಗೇನವರ ಮತ್ತಿತರರಿದ್ದರು.

ನಾಳೆ ಬೆಳ್ತಂಗಡಿಯಲ್ಲಿ ಹೋರಾಟ

 

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುರಿತಾಗಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಕಿಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಬೆಳ್ತಂಗಡಿಯಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುತ್ತಿದ್ದು, ಬಳಿಕ ಸರ್ಕಾರಕ್ಕೆ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗು ವುದು ಎಂದು ರಾಜಣ್ಣ ಕೊರವಿ ಹೇಳಿದರು.

 

administrator

Related Articles

Leave a Reply

Your email address will not be published. Required fields are marked *