ಏ.15ರಿಂದ ಪರಿಷ್ಕ್ರತ ದರ ಅನುಷ್ಠಾನ
ಹುಬ್ಬಳ್ಳಿ: ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಿಲ್ಡರ್ಸ್‌ಗಳ ಮುಂದೆ ದರ ಏರಿಕೆಯೊಂದೇ ಇರುವ ಏಕೈಕ ದಾರಿಯಾಗಿದ್ದು, ಬರುವ ಏ.೧೫ ರಿಂದ ಬೆಲೆ ಏರಿಕೆ ಅನುಷ್ಠಾನಗೊಳ್ಳಲಿದೆ ಎಂದು ಹುಬ್ಬಳ್ಳಿ-ಧಾರವಾಡ ಕ್ರೆಡಾಯ್ ಅಧ್ಯಕ್ಷ ಸಾಜೀದ್ ಫರಾಶ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನ ಮತ್ತು ವಸತಿ ಅಪಾರ್ಟ್ಮೆಂಟ್ ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆಯಿಂದ ಸುಮಾರು 2 ರಿಂದ 10 ಲಕ್ಷದವರೆಗೆ ಹೆಚ್ಚಿನ ಹೊರೆಯಾಗಲಿದೆ ಎಂದರು.
ಬಿಲ್ಡಿಂಗ್ ಕಚ್ಚಾವಸ್ತುಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಸಿಗುತ್ತಿಲ್ಲವಾಗಿದ್ದು, ಕಬ್ಬಿಣ ಮತ್ತು ಸಿಮೆಂಟ್‌ಗಳಂತೂ ತೀವ್ರವಾಗಿ ಏರಿದ ಪರಿಣಾಮ ಇಡೀ ಕಟ್ಟಡ ಕಾಮಗಾರಿ ಉದ್ಯಮ ತೀವ್ರ ತೊಂದರೆಯಲ್ಲಿದೆ ಎಂದರು.
ಎಪ್ರಿಲ್ 15 ರಿಂದ ಖಾಲಿ ನಿವೇಶನಗಳ ಬೆಲೆಯನ್ನು ರೂ. 200, ಮೂಲ ವಸತಿ ಅಪಾರ್ಟ್ಮೆಂಟ್ ಬೆಲೆಯನ್ನು ಸುಮಾರು ರೂ. 4000 ರಿಂದ ರೂ.4500 ಚದರ ಅಡಿಗೆ ಬೆಲೆ ಏರಿಕೆ, ಸ್ಥಳದ ಮೇಲೆ ಅವಲಂಬಿತವಾಗಿದೆ. ಕೆಲವು ಕಡೆ ಭೂಮಿಯ ವೆಚ್ಚದ ಅನುಸಾರ ವಸತಿ ಅಪಾರ್ಟ್ಮೆಂಟ್ ಬೆಲೆ ರೂ. 6000 ಚದರ ಅಡಿಗೆ ಆಗಲಿದೆ ಎಂದರು.
ವಸತಿ ಅಪಾರ್ಟಮೆಂಟ್‌ಗಳಿಗೆ ಜಿಎಸ್‌ಟಿ ಇನ್‌ಪುಟ್ ಇರದೇ ಇರುವುದರಿಂದ ಬೆಲೆಯಲ್ಲಿ ಸುಮಾರು 300 ರಿಂದ 350ರೂ. ಏರಿಕೆಯಾಗುತ್ತಿದ್ದು, ರಾಷ್ಟ್ರೀಯ ರಾಷ್ಟ್ರೀಯ ಕ್ರೆಡಾಯ್ ಸಂಸ್ಥೆಯವರು
ಜಿಎಸ್‌ಟಿ ಕೌನ್ಸಿಲ್‌ಗೆ ನಿಯೋಗವೊಂದರ ಮೂಲಕ ತೆರಳಿ ವಸತಿ ಅಪಾರ್ಟಮೆಂಟ್‌ಗಳಿಗೂ ಜಿಎಸ್‌ಟಿ ಇನ್‌ಪುಟ್ ನೀಡುವಂತೆ ವಿನಂತಿಸಿದ್ದಾರೆ ಎಂದರು.
ಕಬ್ಬಿಣದ ಬೆಲೆ ಶೇ. 112ರಷ್ಟು, ಸಿಮೆಂಟ್ ಶೇ. 35ರಷ್ಟು, ಪ್ಲಂಬಿಂಗ್ ಸಾಮಗ್ರಿಗಳು ಶೇ. 110ರಷ್ಟು, ಸ್ಯಾನಿಟರಿ ಸಾಮಗ್ರಿಗಳು ಶೇ. 55ರಷ್ಟು, ಗ್ರೀಲ್ ಮುಂತಾದವುಗಳು ಶೇ. 67ರಷ್ಟು, ಒಟ್ಟಾರೆಯಾಗಿ ಶೇ. 45ರಷ್ಟು ಹೆಚ್ಚಳವಾಗಿದೆ ಎಂದು ಫರಾಶ ಎಲ್ಲ ಮಾಹಿತಿಗಳನ್ನು ಮಾಧ್ಯಮಗಳ ಮುಂದು ಬಿಚ್ಚಿಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಸುರೇಶ ಶೇಜವಾಡಕರ, ಇಸ್ಮಾಯಿಲ್ ಸಂಶಿ, ಸಂಜಯ ಕೊಠಾರಿ, ನಾರಾಯಣ ಹಬೀಬ್, ದಿಲೀಪ್, ಗುರುರಾಜ ಅಣ್ಣಿಗೇರಿ, ಸೂರಜ್ ಅಳವಂಡಿ, ಡಿಸೋಜಾ ಸೇರಿದಂತೆ ಇನ್ನಿತರರಿದ್ದರು.