ಹುಬ್ಬಳ್ಳಿ-ಧಾರವಾಡ ಸುದ್ದಿ

ಪೇಡೆ ನಗರದಲ್ಲಿ ಸಡಗರದ ಹೋಳಿ ಸಂಭ್ರಮ

ಧಾರವಾಡ: ನಗರದಾದ್ಯಂತ ಯುವಕರು, ಚಿಣ್ಣರು ಮಾತ್ರವಲ್ಲದೇ ಹಿರಿಯರು ಮತ್ತು ಮಹಿಳೆಯರು ಪರಸ್ಪರ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬದ ಸಂಭ್ರಮ ಸವಿದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಹೋಳಿ ಆಚರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಕೋವಿಡ್‌ನ ಆತಂಕ ಇಲ್ಲದ ಕಾರಣ ಅತ್ಯಂತ ಖುಷಿಯಿಂದ ಹೋಳಿ ಆಚರಿಸುತ್ತಿರುವುದು ಕಂಡುಬಂದಿತು.


ಯುವಕರು ತಮ್ಮ ಸ್ನೇಹಿತರ ಮನೆಗಳಿಗೆ ತೆರಳಿ, ಅವರನ್ನು ಹೊರಗೆ ಕರೆ ತಂದು ಬಣ್ಣ ಹಾಕುತ್ತಿದ್ದರು. ಪರ ಊರಿನಿಂದ ಬಂದವರು ತಮ್ಮ ಗೆಳೆಯರು ಮತ್ತು ಆತ್ಮೀಯರನ್ನು ಸಂಪರ್ಕಿಸಿ ಬಣ್ಣ ವಿನಿಮಯ ಮಾಡಿಕೊಳ್ಳುತ್ತಿದ್ದರು. ಕೆಲವು ಯುವಕರು ಬೈಕ್‌ಗಳ ಮೂಲಕ ಕರ್ಕಷ ಶಬ್ದ ಮಾಡುತ್ತ ನಗರದಲ್ಲಿ ವೇಗದಿಂದ ತಿರುಗಾಡುತ್ತಿದ್ದರು.
ಕೆಲವು ಪ್ರಮುಖ ಸ್ಥಳಗಳಲ್ಲಿ ಯುವಕರು ಗುಂಪುಗೂಡಿ ಬಣ್ಣ ಎರಚುತ್ತಿದ್ದರು. ಇಲ್ಲಿನ ಸಪ್ತಾಪುರ, ಜಯನಗರ ಇನ್ನಿತರ ಕಡೆಗಳಲ್ಲಿ ಯುವಕರು ಮೈಮೇಲಿನ ಬಟ್ಟೆ ಬಿಚ್ಚಿ ಮನಬಂದಂತೆ ಚೀರಾಡುತ್ತ ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಅಸಹಾಯಕರಾಗಿ ನೋಡುತ್ತ ನಿಲ್ಲಬೇಕಾಯಿತು.
ಇತ್ತ ಮಕ್ಕಳು ಕೂಡ ಮನೆಯ ಮುಂದೆ ನಿಂತು ತಮ್ಮ ಕೈಯ್ಯಲ್ಲಿನ ಪಿಚಕಾರಿಯಿಂದ ಬಣ್ಣ ಚಿಮುಕಿಸುತ್ತಿದ್ದರು. ಇದೇ ಮಹಿಳೆಯರು ಕೂಡ ತಮ್ಮ ಅಕ್ಕಪಕ್ಕದ ಮನೆಯವರು ಮತ್ತು ಆತ್ಮೀಯರ ಜೊತೆ ಸೇರಿ ಬಣ್ಣದಾಟದಲ್ಲಿ ಭಾಗವಹಿಸಿದ್ದರು. ಹಿರಿಯರು ಸಹ ಪರಸ್ಪರ ಬಣ್ಣ ವಿನಿಮಯ ಮಾಡಿಕೊಳ್ಳುತ್ತ ತಮ್ಮ ಬಾಲ್ಯದ ದಿನಗಳಂತೆ ವರ್ತಿಸುತ್ತಿದ್ದುದು ವಿಶೇಷವಾಗಿತ್ತು.

ಸರಕಾರದ ಅಧಿಕೃತ ರಜೆ ಇಲ್ಲದಿದ್ದರೂ ಸ್ಥಳೀಯವಾಗಿ ರಜೆ ಘೋಷಿಸಿದ ಪರಿಣಾಮ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳು, ಖಾಸಗಿ ಸಂಘ-ಸಂಸ್ಥೆಗಳಲ್ಲಿನ ಸಿಬ್ಬಂದಿ ಇನ್ನಿತರರು ಹಬ್ಬದ ಸಡಗರದಲ್ಲಿ ತೊಡಗಿದ್ದರು.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ರಜೆ ಸಿಕ್ಕಿತ್ತು. ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ, ಸಾರಿಗೆ ಸಂಸ್ಥೆಯ ಅಥವಾ ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅಡಚಣಿ ಉಂಟಾಯಿತು. ಪಾಲಕರು ತಮ್ಮ ವಾಹನಗಳಲ್ಲಿ ಮಕ್ಕಳನ್ನು ಪರೀಕ್ಷೆಗೆ ನಂತರ ವಾಪಸ್ ಮನೆಗೆ ಕರೆದೊಯ್ಯಬೇಕಾಯಿತು.

ಶಾಂತಿನಿಕೇತನ ನಗರದಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಮಹಾವೀರ ಉಪಾದ್ಯೆ, ಎನ್.ಜಿ.ಸಾಣಿಕೊಪ್ಪ, ಡಾ.ಶಾಂತಿನಾಥ ದಿಬ್ಬದ. ಡಾ.ಎನ್.ಎಂ.ಹೊನಕೇರಿ, ಬಸವರಡ್ಡಿ, ದೊಡ್ಡಮನಿ ಸೇರಿದಂತೆ ಅನೇಕರು ಕಾಮದಹನಲ್ಲಿ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ನಿವಾಸದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರೊಂದಿಗೆ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಪದಾಧಿಕಾರಿಗಳಾದ ಶಂಕ್ರಯ್ಯ ಸುಬ್ಬಾಪುರಮಠ, ಆರ್.ಜಿ.ಲಿಂಗದಾಳ, ರಾಜಶೇಖರ ಹೊನ್ನಪ್ಪನವರ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿ ಹೋಳಿ ಹಬ್ಬ ಆಚರಿಸಿದರು.

ಎಂ.ಬಿ.ನಗರದಲ್ಲಿ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ, ಬಿಜೆಪಿ ಯುವ ಮುಖಂಡರಾದ ಶ್ರೀಕಾಂತ ಕ್ಯಾತಪ್ಪನವರ, ಸಿದ್ದಗೌಡ ಪಾಟೀಲ, ಚನ್ನಬಸಪ್ಪ ಹುಂಬೇರಿ, ಪಾರೀಶ ಮಡ್ಲಿ, ಮಂಜು ದೇಸಾಯಿ, ಮಮೋಹರ ನಾಯಕ, ಬಾಹುಬಲಿ ಕೊಟಬಾಗಿ ಇನ್ನಿತರರು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿಹಬ್ಬ ಆಚರಿಸಿದರು.

ಧಾರವಾಡದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೋಳಿಯಂಗವಾಗಿ ಬಣ್ಣದಾಟದಲ್ಲಿ ಪಾಲ್ಗೊಂಡರು. ಅವರೊಂದಿಗೆ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಪದಾಧಿಕಾರಿಗಳಾದ ಶಂಕ್ರಯ್ಯ ಸುಬ್ಬಾಪುರಮಠ, ಆರ್.ಜಿ. ಲಿಂಗದಾಳ, ರಾಜಶೇಖರ ಹೊನ್ನಪ್ಪನವರ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.
ಧಾರವಾಡ ಕೆಲಗೇರಿ ರಸ್ತೆಯ ವಿಜಯನಗರದಲ್ಲಿ ಚಿಣ್ಣರು ಬಣ್ಣದಾಟ.
ಧಾರವಾಡದ ಕೊಪ್ಪದಕೇರಿ ಬಡಾವಣೆಯಲ್ಲಿ ಬಿಜೆಪಿ ಮುಖಂಡ ಶ್ರೀಕಾಂತ ಕ್ಯಾತಪ್ಪನವರ ನೇತೃತ್ವ್ವದಲ್ಲಿ ತುಪ್ಪದ, ಧುಮ್ಮಾಳ, ಹನಸಿ, ಮಾನೆ ಪರಿವಾರದವರ ಹೋಳಿ ಸಂಭ್ರಮ.
ಹಳೇಹುಬ್ಬಳ್ಳಿ ಅಯೋಧ್ಯಾನಗರದಲ್ಲಿಂದು ಹಿಂದು ಮುಸ್ಲೀಂ ಬಾಂಧವರು ಪರಸ್ಪರ ಬಣ್ಣ ಹಚ್ಚುವ ಮೂಲಕ ಭಾವೈಕ್ಯತೆಯಿಂದ ಹೋಳಿ ಹಬ್ಬವನ್ನು ಆಚರಿಸಿದರು.

ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಬಣ್ಣದಾಟವನ್ನು ಸಂಭ್ರಮದಿಂದ ಆಚರಿಸಿದರು. ಕೊರೋನಾದಿಂದ ಕಳೆದ ವರ್ಷದಿಂದ ಮರೆತಂತಾಗಿದ್ದ ಹೋಳಿಯ ಹುರುಪು, ಎಲ್ಲ ವರ್ಗದವರಲ್ಲೂ ಸಂತಸವನ್ನುಂಟು ಮಾಡಿತ್ತು.

 

ಅಣ್ಣಿಗೇರಿ: ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಹಾಗೂ ಪಟ್ಟಣದಲ್ಲಿ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಲಾಯಿತು.
administrator

Related Articles

Leave a Reply

Your email address will not be published. Required fields are marked *