ಹುಬ್ಬಳ್ಳಿ-ಧಾರವಾಡ ಸುದ್ದಿ
ಹೊರಟ್ಟಿ ಗೆಲುವು ಐತಿಹಾಸಿಕ ದಾಖಲೆ

ಹೊರಟ್ಟಿ ಗೆಲುವು ಐತಿಹಾಸಿಕ ದಾಖಲೆ

ಶಿಕ್ಷಕರ ಸಭೆಯಲ್ಲಿ ಸಚಿವ ಜೋಶಿ ವಿಶ್ವಾಸ

ಹುಬ್ಬಳ್ಳಿ: ನಿರಂತರ ಸಂಘರ್ಷ, ಅವಿರತ ಪರಿಶ್ರಮ ಹಾಗೂ ಅಸಂಖ್ಯಾತ ಹೋರಾಟಗಳ ಮೂಲಕ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ತಮ್ಮದೆ ಯಾದ ವಿಶಿಷ್ಟ ಕೊಡುಗೆ ನೀಡಿರುವ ಬಸವರಾಜ ಹೊರಟ್ಟಿಯವರು 8 ಬಾರಿ ಐತಿಹಾಸಿಕ ದಾಖಲೆ ನಿರ್ಮಿಸುವ ಮೂಲಕ ಅಭೂತಪೂರ್ವ ವಿಜಯ ಸಾಧಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.


ಇಲ್ಲಿಯ ದೇಶಪಾಂಡೆನಗರ ರೋಟರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹಗಲಿರುಳು ಶ್ರಮಿಸುತ್ತಾ ಏಳು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಶಿಕ್ಷಣ ಸಚಿವರಾಗಿ, ಸಭಾಪತಿಗಳಾಗಿ ಸುಧೀರ್ಘ ಕಾರ್ಯನಿರ್ವಹಿಸುವ ಮೂಲಕ ಶಿಕ್ಷಕ ಸಮುದಾಯದ ಏಕೈಕ ಆಶಾಕಿರಣವಾಗಿ ಬಸವರಾಜ ಹೊರಟ್ಟಿಯವರು ಹೊರಹೊಮ್ಮಿದ್ದು, ಈ ಬಾರಿಯು ಅವರ ಗೆಲುವು ದಾಖಲೆ ಸೃಷ್ಟಿಸಲಿದ್ದು, ಗಿನ್ನಿಸ್ ದಾಖಲೆ ನಿರ್ಮಿಸುವಲ್ಲಿ ತಮ್ಮ ಮತವು ಸೇರಿದೆ ಎಂಬ ಆತ್ಮ ತೃಪ್ತಿ ಹೊಂದಲು ಮತದಾರರಾಗಿರುವ ಎಲ್ಲ ಶಿಕ್ಷಕರು ಕ್ರೀಯಾಶೀಲವಾಗಿ ಚುನಾವಣೆಯಲ್ಲಿ ಸಕ್ರೀಯರಾಗುವಂತೆ ಮನವಿ ಮಾಡಿದರು.


ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ಏಳು ಬಾರಿ ತಮ್ಮ ಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದು, ಶಿಕ್ಷಕರೆಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೆಂಬಲಿಸಿದ್ದು ಈ ಬಾರಿಯೂ ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಡಾ.ಎಚ್.ವಿ.ಬೆಳಗಲಿ, ಜಗದೀಶ ಕಲ್ಯಾಣಶೆಟ್ಟರ, ಜಗದೀಶ ದ್ಯಾವಪ್ಪನವರ, ಎಂ.ಎಸ್. ಪಾಟೀಲ, ಎಂ.ಬಿ.ಕುಂಬಾರಗೇರಿ, ಶಿವರಾಂ ಹೆಗಡೆ, ಅಬ್ದುಲ್ ಮೆಣಸಗಿ, ಆರ್.ವಿ. ಬದ್ದಿ, ಬಿ.ಎಸ್. ಗೌಡರ, ಸಿ.ಜಿ. ಹುಣಸ್ಯಾಳ, ವಿ.ಎಸ್. ಹುದ್ದಾರ, ಆರ್.ಬಿ. ಕೊಣ್ಣೂರ, ಜ್ಯೋತಿ ಪಾಟೀಲ, ಶಾಂತಾ ಕಲಾದಗಿ, ದಾನಪ್ಪಗೌಡರ, ಬಿ.ಕೆ. ಮಳಗಿ, ಡಿ.ಡಿ. ಮೇಚಣ್ಣವರ ಉಪಸ್ಥಿತರಿದ್ದರು.

 

administrator

Related Articles

Leave a Reply

Your email address will not be published. Required fields are marked *