ಹುಬ್ಬಳ್ಳಿ-ಧಾರವಾಡ ಸುದ್ದಿ
ಹೂಬಳ್ಳಿಯಲ್ಲೊಬ್ಬ ’ಸಮೃದ್ಧ’ ಜ್ಞಾನ ಭಂಡಾರ   : ಚಿಣ್ಣನ ಮುಡಿಗೆ ಇಂಡಿಯಾ ರೆಕಾರ್ಡ ಪುರಸ್ಕಾರ

ಹೂಬಳ್ಳಿಯಲ್ಲೊಬ್ಬ ’ಸಮೃದ್ಧ’ ಜ್ಞಾನ ಭಂಡಾರ : ಚಿಣ್ಣನ ಮುಡಿಗೆ ಇಂಡಿಯಾ ರೆಕಾರ್ಡ ಪುರಸ್ಕಾರ

ಹುಬ್ಬಳ್ಳಿ: ವಾಣಿಜ್ಯ ರಾಜಧಾನಿಯ ಎರಡೂವರೆ ವರ್ಷದ ಬಾಲಕನೊಬ್ಬ ತನ್ನ ಜ್ಞಾನ ಭಂಡಾರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡುವ ಮೂಲಕ ಸುದ್ದಿ ಮಾಡಿದ್ದಾನೆ.
ಗೋಕುಲ ರಸ್ತೆಯ ಕೋಟಿಲಿಂಗೇಶ್ವರ ನಗರದ ಸಮೃದ್ಧ ಶ್ರೀಕಾಂತ ಶೆಟ್ಟಿಯೇ ಮನೆಯಂಗಳದಲ್ಲಿ ಆಟವಾಡುವ ವಯಸ್ಸಿನಲ್ಲೇ ಎಲ್ಲರ ದೃಷ್ಟಿಯನ್ನು ತನ್ನೆಡೆಗೆ ಸೆಳೆದ ಬಾಲಕನಾಗಿದ್ದಾನೆ.


ಹದಿನೈದು ತರಹದ ಯೋಗಾಸನ ಮಾಡುವ ಈತನು, ಗೃಹಗಳನ್ನು ಗುರುತಿಸಿ ಅವುಗಳ ಪರಿಚಯಿಸುತ್ತಾನೆ.ಅಲ್ಲದೆ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಅರಳು ಹುರಿದಂತೆ ಉತ್ತರಿಸುವದಲ್ಲದೇ ರಾಜ್ಯದ ನದಿಗಳ ಹೆಸರನ್ನು ಸರಾಗವಾಗಿ ಹೇಳುತ್ತಾನೆ. ವಯಸ್ಸಿಗೂ ಮೀರಿದ ಇತನ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರ ಈತನ ಮುಡಿಯೇರಿದ್ದು, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂದು ಸಾಭೀತುಪಡಿಸಿದ್ದಾನೆ.
ಮಗನ ಸಾಧನೆಗೆ ತಾಯಿ ಚಾರುಲತಾ ಹಾಗೂ ಹೊಟೆಲ್ ಉದ್ಯಮಿ ತಂದೆ ಶ್ರೀಕಾಂತ ಶೆಟ್ಟಿ ಇಬ್ಬರೂ ಕೇವಲ ಸಂತಸ ಪಡುವುದಲ್ಲದೇ ಅವನ ಯಶಸ್ಸಿಗೆ ಬೆನ್ನೆಲುಬಾಗಿದ್ದಾರೆ.
ಮಕ್ಕಳು ಮೊಬೈಲ್ ಬಳಕೆಯಿಂದ ತಮ್ಮಲ್ಲಿರುವ ಕೌಶಲ್ಯವನ್ನು ಮರೆಯುತ್ತಿ ರುವ ಸಂದರ್ಭದಲ್ಲಿ ಸಮೃದ್ಧ ಮತ್ತಷ್ಟು ಜ್ಞಾನ ಸಮೃದ್ಧಿಯೊಂದಿಗೆ ಪ್ರಕಾಶಮಾನವಾಗಲಿ,ಅವನಿಗೆ ಮತ್ತಷ್ಟು ಪ್ರಶಸ್ತಿಗಳು ಅರಸಿ ಬರುವಂತಾಗಲಿ .

ಮನರಂಜನೆಗಾಗಿ ಬಳಕೆ ಮಾಡದೇ ಮೊಬೈಲ್ ನಲ್ಲಿ ಸಾಕಷ್ಟು ಜ್ಞಾನವನ್ನು ಪಡೆದುಕೊಂಡು ದೇಶದ ಸಾಧಕ ಬಾಲಕರ ಪಟ್ಟಿಯಲ್ಲಿ ಮಗ ಸೇರಿರುವುದು ಸಂತಸ ತಂದಿದೆ.

ಚಾರುಲತಾ,ಬಾಲಕನ ತಾಯಿ

ಮಗನ ಜ್ಞಾನವನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರವನ್ನು ನೀಡಿರುವುದು ನಿಜಕ್ಕೂ ವಿಶೇಷವೇ ಸರಿ

ಶ್ರೀಕಾಂತ ಶೆಟ್ಟಿ ,ಬಾಲಕನ ತಂದೆ

 

administrator

Related Articles

Leave a Reply

Your email address will not be published. Required fields are marked *