ಹುಬ್ಬಳ್ಳಿ: ಹಿಜಾಬ್ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ವಾಣಿಜ್ಯ ರಾಜಧಾನಿಯಲ್ಲಿ ಮೊದಲ ಬಾರಿಗೆ ಇಂದು ಹುಟ್ಟಿಕೊಂಡಿದೆ.
ಹಿಜಾಬ್ ವಿವಾದದ ಚರ್ಚೆ ಕೋರ್ಟನಲ್ಲಿ ನಡೆಯುತ್ತಿರುವಾಗಲೇ ಇಂದು ಕಾಲೇಜುಗಳು ಪುನಾರಂಭವಾಗಿದ್ದು, ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಿದ ಘಟನೆ ಇಲ್ಲಿನ ಜೆ.ಸಿ. ನಗರದ ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಮಹಿಳಾ ಕಾಲೇಜಿನಲ್ಲಿ ನಡೆದಿದೆ.
ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಹಿಜಾಬ್ ತೆಗೆದು ಒಳಗೆ ಬನ್ನಿ ಇಲ್ಲದಿದ್ದರೆ ಕಾಲೇಜು ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ಹೇಳಿದಾಗ ಕಾಲೇಜು ಪ್ರಾಚಾರ್ಯರು, ಹಾಗೂ ವಿದ್ಯಾರ್ಥಿಗಳು, ಪಾಲಕರ ನಡುವೆ ವಾಗ್ವಾದ ನಡೆಯಿತು.
ತಡೆ ಕ್ರಮ ಖಂಡಿಸಿ, ವಿದ್ಯಾರ್ಥಿನಿಯರು ಕಾಲೇಜು ಎದುರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಾವು ಹಿಜಾಬ್ ತೆಗೆಯೋಲ್ಲ, ಹಿಜಾಬ್ ಹಾಕಿಕೊಂಡೆ ಕಾಲೇಜಿಗೆ ಬರುತ್ತೇವೆ ಎಂದು ವಿದ್ಯಾರ್ಥಿನಿಯರು ಹಾಗೂ ಪಾಲಕರು ಪಟ್ಟು ಹಿಡಿದರು. ಪ್ರತಿಭಟನಾ ಸಂದರ್ಭದಲ್ಲಿ ಕಾಲೇಜು ಮುಂದೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಏಕಾಏಕಿ ನಡೆದ ಘಟನೆಯಿಂದ ಅತಿ ಸೂಕ್ಷ್ಮ ಪ್ರದೇಶ ಹುಬ್ಬಳ್ಳಿಯಲ್ಲೂ ಹಿಜಾಬ್ ಕಿಚ್ಚು ಹೊತ್ತಿಕೊಂಡಿದ್ದು, ಜೆ ಸಿ ನಗರದ ಕಾಲೇಜು ಸುತ್ತಮುತ್ತ ೧೪೪ನೇ ಸೆಕ್ಷನ್ ಅಡಿ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ.
ಪೊಲೀಸ್ ಆಯುಕ್ತ ಲಾಭುರಾಮ್ ಕಾಲೇಜಿಗೆ ಭೇಟಿ ನೀಡಿ,
ಘಟನೆ ಕುರಿತು ಅಡಳಿತ ಮಂಡಳಿಯಿಂದ ಮಾಹಿತಿ ಪಡೆದರು. ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಸಮುದಾಯದವರು ಬೆಂಬಲ ನೀಡಿದ್ದು ಘಟನೆ ಬೇರೆ ತಿರುವು ಪಡೆಯುತ್ತಿರುವುದನ್ನು ಗಮನಿಸಿ ಆಡಳಿತ ಮಂಡಳಿ,
ಕಾಲೇಜಿಗೆ ಮುಂದಿನ ಆದೇಶದವರೆಗೂ ರಜೆ ಘೋಷಣೆ ಮಾಡಿದೆ.
ಹಿಜಾಬ್ ಗಲಾಟೆ ಹಿನ್ನೆಲೆಯಲ್ಲಿ ಹು-ಧಾ ನಗರ ಪೊಲೀಸ್ ಕಮಿಷನರ್ ಲಾಭುರಾಮ್ ಹೇಳಿಕೆ ಕಾಲೇಜು ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆಕಾಲೇಜು ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದ್ದು,ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ
ಲಾಬೂರಾಮ್ ,ಮಹಾನಗರ ಪೊಲೀಸ್ ಆಯುಕ್ತರು
ನಾವು ಇಷ್ಟು ದಿನ ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದೆವು. ಆದ್ರೆ ಏಕಾಏಕಿ ಹಿಜಾಬ್ ತೆಗದು ಬನ್ನಿ ಎನ್ನುತ್ತಿದ್ದಾರೆ. ಇವಗ್ಯಾಕೆ ನಾವ್ ಹಿಜಾಬ್ ತೆಗೆಯಬೇಕು. ನ್ಯಾಯಲಯದ ಅಂತಿಮ ಆದೇಶ ಬರಲಿ. ಅಲ್ಲಿಯವರೆಗೂ ನಮಗೆ ಅನುಮತಿ ನೀಡಿ.
ಮುಷ್ಕಾನ್ ,ವಿದ್ಯಾರ್ಥಿನಿ