ಹುಬ್ಬಳ್ಳಿ: ಪರೋಕ್ಷವಾಗಿ ಬಿಜೆಪಿಗೆ ಸಪೋರ್ಟ್ ಮಾಡುವ ಕೆಲಸ ಬಿಡಿ. ಆಡಳಿತದಲ್ಲಿ ಇಲ್ಲದ ಹೊರತಾಗಿಯೂ ವಿಪಕ್ಷ ಪ್ರತಿಪಕ್ಷವನ್ನೇ ಟೀಕೆ ಮಾಡುತ್ತಿದೆ, ಇದು ದೇಶದ ಇತಿಹಾಸದಲ್ಲಿ ಮೊದಲು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚುನಾವಣೆಯ ಸಂದರ್ಭದಲ್ಲಿ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಜೆಡಿಎಸ್ ದ್ವಿಮುಖ ನೀತಿ ವಿರುದ್ದ ಹರಿಹಾಯ್ದರು.
ಚುನಾವಣೆ ಬಂದಾಗ ಇಲ್ಲಸಲ್ಲದ ಟೀಕೆ ಮಾಡುವುದು ಯಾಕೆ ಎಂದು ಪ್ರಶ್ನಿಸಿದರಲ್ಲದೇ ಜನಸಾಮಾನ್ಯರು ನೆನಪಿನಲ್ಲಿ ಉಳಿಯುವ ಯೋಜನೆ ಕೊಟ್ಟಿದ್ದಾರಾ ಎಂದರಲ್ಲದೇ ಕೆಂಪೇಗೌಡ ಜಯಂತಿ, ಬಸವಕಲ್ಯಾಣ ಬಿಜೆಪಿಯವರು ನಯಾಪೈಸೆ ಕೊಟ್ಟಿಲ್ಲ ಎಂದರು.
ಸಂವಿಧಾನಕ್ಕೆ ಅನುಗುಣವಾಗಿ 2013ರಿಂದ 2018ರವರೆಗೆ ಕಾಂಗ್ರೆಸ್ ಜನಮೆಚ್ಚುಗೆಯ ಆಡಳಿತ ನೀಡಿದೆ, ಹಿಂದುಳಿದ ವರ್ಗಗಳಿಗೆ ಯಾವುದೇ ಅನ್ಯಾಯ ಮಾಡಿಲ್ಲ ಎಂದರು.
ಬಿಜೆಪಿ ಹಿಂದುಳಿದವರು, ಅಲ್ಪಸಂಖ್ಯಾತರನ್ನು ಸಂಪೂರ್ಣ ನಿರ್ಲಕ್ಷಿಸಿದ್ದರೂ ಯಾಕೆ ಜೆಡಿಎಸ್ ಪ್ರಶ್ನೆ ಮಾಡುತ್ತಿಲ್ಲ.ಇದು ಅವರ ಪರೋಕ್ಷ ತಂತ್ರಗಾರಿಕೆ ಎಂದರು.
ಪರಿಷತ್ ಸದಸ್ಯ ನಜೀರ್ ಅಹ್ಮದ್, ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಇಸ್ಮಾಯಿಲ್ ತಮಟಗಾರ, ಶಾಜಮಾನ್ ಮುಜಾಹಿದ ಮುಂತಾದವರಿದ್ದರು.
ದ್ವೇಷ ಸಾಧನೆಗೆ ಅಲ್ಪಸಂಖ್ಯಾತರ ಬಳಕೆ ಬೇಡ
ಹುಬ್ಬಳ್ಳಿ: ಅಲ್ಪಸಂಖ್ಯಾತರು ಬದುಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಈಗ ಜ್ಞಾನೋದಯ ಆಗಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ಸಲ ಸಿಎಂ ಆದ್ರು ಅಲ್ಪಸಂಖ್ಯಾತರ ಪರ ಸಿಂಪತಿ ತೋರಲಿಲ್ಲ.ಸಿದ್ದರಾಮಯ್ಯನವರನ್ನ ಟಾರ್ಗೆಟ್ ಮಾಡಲು ಅಲ್ಪಸಂಖ್ಯಾತರ ಪರ ಮಾತಾಡೋದು ತಪ್ಪು ಎಂದರು.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯೋದನ್ನ ಯಾರು ನೋಡಲಿಲ್ಲ ಎನ್ನುವ ಪರಿಸ್ಥಿತಿ ಜೆಡಿಎಸ್‌ನದ್ದಾಗಿದೆ.ಅಲ್ಪಸಂಖ್ಯಾತರಿಗೆ ಯಾವಾಗಲೂ ಕಾಂಗ್ರೆಸ್ ಸಾಮಾಜಿಕ ನ್ಯಾಯ ಕೊಟ್ಟಿದೆ ಎಂದರು.
ರೈತರ ಮೇಲೆ ಕೇಂದ್ರದ ಗೃಹಮಂತ್ರಿ ಮಗ ಗಾಡಿ ಹತ್ತಿಸಿದಾಗ ಜೆಡಿಎಸ್ ಹೋರಾಟ ಮಾಡಲಿಲ್ಲ.ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಹೋರಾಟ ಮಾಡಲಿಲ್ಲ.ಸದನದ ಒಳಗೆ ಸದನದ ಹೊರಗೆ ಬಿಜೆಪಿ ವಿರುದ್ದ ಹೋರಾಟ ಕಾಣುತ್ತಿಲ್ಲ.ಯಾರ ಪರ ಹೋರಾಟ ಮಾಡಿದ್ದಿರಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರ ಮೆಲೆ ಸಿಟ್ಟಿದ್ದೆರೆ ಬೇರೆ ರೀತಿ ಮಾತನಾಡಿ ದ್ವೇಷ ಸಾಧನೆಗೆ ಅಲ್ಪಸಂಖ್ಯಾತರನ್ನ ಬಳಸಿಕೊಳ್ಳಬೇಡಿ ಎಂದು ಹೇಳಿದರು.