ಹುಬ್ಬಳ್ಳಿ-ಧಾರವಾಡ ಸುದ್ದಿ
ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ನಾನೇ: ಲಿಂಬಿಕಾಯಿ

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ನಾನೇ: ಲಿಂಬಿಕಾಯಿ

ಹುಬ್ಬಳ್ಳಿ: ಜೂನ್ ತಿಂಗಳಲ್ಲಿ ನಡೆಯುವ ಪಶ್ಚಿಮ ಶಿಕ್ಷಕರ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿ. ಪಕ್ಷದ ರಾಜ್ಯ ಸಮಿತಿಯು ಕೇವಲ ನನ್ನ ಹೆಸರನ್ನು ಮಾತ್ರ ಸೂಚಿಸಿ ಕಳಿಸಿರುತ್ತದೆ. ನೀವು ಪ್ರಚಾರದಲ್ಲಿ ತೊಡಗಿಕೊಳ್ಳಿ. ನಿಮ್ಮ ಒಂದೇ ಹೆಸರನ್ನು ಕಳಿಸಲಾಗಿದೆ. ಬೇರೆ ವಿಷಯದ ಬಗ್ಗೆ ತಲೆಕೆಡಿಸಿ ಕೊಳ್ಳಬೇಡಿ ಎಂದು ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರೆಲ್ಲರೂ ಭರವಸೆ ನೀಡಿದ್ದಾರೆಂದು ಮೋಹನ ಲಿಂಬಿಕಾಯಿ ಹೇಳಿದರು.


ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ನಗರದ ಗೋಕುಲ ರಸ್ತೆಯ ಕೆ.ಎಸ್.ಶರ್ಮಾ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅಧಿಕೃತ ಅಭ್ಯರ್ಥಿ ಎಂಬುದನ್ನು ಘೋಷಿಸಿಕೊಂಡರಲ್ಲದೇ ಮಾಧ್ಯಮಗಳ ವರದಿಗಳಿಗೆ ಯಾರೂ ವಿಚಲಿತರಾಗುವ ಅವಶ್ಯಕತೆಯಿಲ್ಲ ಎಂದರು.
ನಾನು ಪಕ್ಷದ ರಾಷ್ಟ್ರೀಯ ನಾಯಕರು ಆಗಿರುವ ನಡ್ಡಾ, ಸಂತೋಷ್, ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆಲ್ಲ ರೊಂದಿಗೆ ಮಾತನಾಡಿದ್ದು, ಎಲ್ಲರೂ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದರು.
ನಮ್ಮದು ಅತ್ಯಂತ ಶಿಸ್ತಿನ ಪಕ್ಷ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಮಾನದಂಡವನ್ನು ಎಲ್ಲರಿಗೂ ಒಂದೇ ರೂಪದಲ್ಲಿ ಅಳವಡಿಸು ವುದು ಪಕ್ಷದ ಸಿದ್ಧಾಂತವಾಗಿದೆ. ಅದು ವಯಸ್ಸಿನಲ್ಲಿ ಇರಬಹುದು. ಇತರೆ ಪಕ್ಷದವರ ಸೇರ್ಪಡೆ ಇರಬಹುದು ಎಂದರು.
ಸಭೆಯಲ್ಲಿ ವಿಶ್ರಾಂತ ಪ್ರಾಚಾರ್ಯ ಎಸ್.ವಿ.ಹಿರೇಮಠ. ಆಯುರ್ವೇದ ಮಹಾವಿದ್ಯಾಲಯಗಳ ಡೀನ್ ಡಾ.ಎಸ್.ವಿ.ಬನ್ನಿಗೋಳ. ಪ್ರೊ.ಎಸ್.ಟಿ.ಅಕ್ಕಿ. ಪ್ರೊ.ರಾಘವೇಂದ್ರ ಮಿಟ್ಟಿಮನಿ, ನಿವೃತ್ತ ಪ್ರಾಚಾರ್ಯ ಪ್ರೊ.ಜಿ.ಎಸ್. ಪಲ್ಲೇದ, ಪ್ರಾಚಾರ್ಯ ವೀರೇಶ್ ಅಂಗಡಿ, ಚಿಕ್ಕ ರೆಡ್ಡಿ, ಡಾ.ಸಿ.ಸಿ.ಹಿರೇಮಠ, ಪ್ರಭು ಪಾಟೀಲ್, ಕುಂದರಗಿ, ಅಮರೇಶ್ ಹಿಪ್ಪರಗಿ, ರಮೇಶ್ ಭರಮಗೌಡರ, ಪ್ರೊ. ಶ್ರೀಕಾಂತ್ ಕಿರೇಸೂರ್, ವಿ.ವಿ.ಕುರ್ತಕೋಟಿ. ಡಾ.ಎಂ.ಆರ್.ಪಾಟೀಲ್, ಬಾಳು ಪಾಟೀಲ್, ಬಸವರಾಜ್ ಹೊಳೆನ್ನವರ್, ಬಾಬುಗೌಡ ಬಂಟನೂರು, ಪ್ರೋ.ಶಿವಯೋಗಪ್ಪ ಎಮ್ಮಿ, ವಿ.ಎಸ್.ಕಬನೂರ ಮುಂತಾದವರಿದ್ದರು.

 

administrator

Related Articles

Leave a Reply

Your email address will not be published. Required fields are marked *