ಹುಬ್ಬಳ್ಳಿ-ಧಾರವಾಡ ಸುದ್ದಿ

ಗೋ ರಕ್ಷಕರ ಮೇಲೆ ಹಲ್ಲೆ: ಬಂಧನಕ್ಕೆ ಪಟ್ಟು

ಹುಬ್ಬಳ್ಳಿ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದವರನ್ನು ಹಿಡಿದುಕೊಟ್ಟು ಎಫ್‌ಐಆರ್ ಆದ ನಂತರ ಭಜರಂಗದಳದ ಪ್ರಮುಖರ ಮೇಲೆ ಹಲ್ಲೆಗೆ ಯತ್ನಿಸಲಾಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕೆಂದು ಇಂದು ಭಜರಂಗದಳ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಉತ್ತರ ಎಸಿಪಿಯವರಿಗೆ ಗಡುವು ನೀಡಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ನ ಶಿವಾನಂದ ಸತ್ತಿಗೇರಿ, ರಘು ಯಲ್ಲಕ್ಕನವರ ಮುಂತಾದವರ ತಂಡ ಸವದತ್ತಿಯಿಂದ ಹಳೆಹುಬ್ಬಳ್ಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಎತ್ತಗಳನ್ನು ಹಿಡಿದುಕೊಟ್ಟಿದ್ದಲ್ಲದೇ ಎಫ್‌ಐಆರ್ ದಾಖಲಾಗಿದೆ.


ಎಫ್‌ಐಆರ್ ಆದ ನಂತರ ಪ್ರತಿ ಪಡೆದು ವಾಪಸಾಗುವ ಹಂತದಲ್ಲಿ ಸತ್ತಿಗೇರಿ ಸಹೋದರರು ಕಾರಿನಲ್ಲಿ ವಾಪಸ್ಸಾಗುವ ಹಂತದಲ್ಲಿ ಏಕಾಏಕಿ ೧೫ ಜನರ ತಂಡವೊಂದು ಬಂದು ತಮ್ಮ ಮೇಲೆ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ.
ಇಂದು ಬಿಜೆಪಿ ರಾಜ್ಯ ವಿವಿಧ ಪ್ರಕೋಷ್ಠಗಳ ಸಹ ಸಂಯೋಜಕ ಜಯತೀರ್ಥ ಕಟ್ಟಿ, ಅಶೋಕ ಅಣವೇಕರ, ಶಿವಾನಂದ ಸತ್ತಿಗೇರಿ, ರಮೇಶ ಕದಂ, ವಿಜಯ ಕ್ಷೀರಸಾಗರ ಸೇರಿದಂತೆ ಅನೇಕರು ಇಂದು ವಿದ್ಯಾನಗರ ಠಾಣೆ ಎದುರು ಪ್ರತಿಭಟನೆ ನಡೆಸಿ ನಿನ್ನೆ ರಾತ್ರಿ ಹಲ್ಲೆ ಮಾಡಿದವರನ್ನು ಬಂಧಿಸಲು ಪಟ್ಟು ಹಿಡಿದರು.
ಉತ್ತರ ಎಸಿಪಿ ಠಾಣಗೆ ಆಗಮಿಸಿ ಈ ಬಗ್ಗೆ ಪ್ರಕರಣ ದಾಖಲಿಸಿ ಬಂಧಿಸುವ ಭರವಸೆ ನೀಡಿದ್ದು ತಾವು ಗಡುವು ನೀಡಿರುವುದಾಗಿ ಹಿಂದೂ ಸಂಘಟನೆಗಳು ಹೇಳಿವೆ.

administrator

Related Articles

Leave a Reply

Your email address will not be published. Required fields are marked *