ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 33ನೇ ವಾರ್ಡಿನ ಹು.ಧಾ.ಮ.ಪಾಲಿಕೆ. ಸದಸ್ಯ ಇಮಾಮಹುಸೇನ (ಇಮ್ರಾನ) ಎಲಿಗಾರ ಅವರನ್ನು ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಜ್ಯೋತಿ ಪಾಟೀಲ್ ಹಾಗೂ ಉಪ ಮೇಯರ್ ಪಟ್ಟಕ್ಕೆ ಸಂತೋಷ್ ಚವ್ಹಾಣ ಏರಿದ್ದು, ಕಾಂಗ್ರೆಸ್ ಪಕ್ಷದಿಂದ ಇಮಾಮಹುಸೇನ (ಇಮ್ರಾನ) ಎಲಿಗಾರ ವಿಪಕ್ಷ ನಾಯಕರಾಗಿ ನೇಮಕಗೊಂಡಿದ್ದಾರೆ.

ಮೂರು ವರ್ಷಗಳಲ್ಲಿ ವಿಪಕ್ಷ ನಾಯಕ ಸ್ಥಾನ ದೊರೆರಾಜ ಮಣಿಕುಂಟಲ(ಪೂರ್ವ ಕ್ಷೇತ್ರ), ಸುವರ್ಣ ಕಲಕುಂಟಲಾ ( ಸೆಂಟ್ರಲ್) ಹಾಗೂ ರಾಜಶೇಖರ ಕಮತಿ (ಧಾರವಾಡ ) ಅವರಿಗೆ ದೊರೆತಿದೆ. ಈ ಬಾರಿ ಮೇಯರ್ ಪಟ್ಟ ಸಹ ಪಶ್ಚಿಮ ಕ್ಷೇತ್ರದ ಪಾಲಾಗಿರುವ ಕಾರಣ ವಿಪಕ್ಷ ನಾಯಕ ಹುದ್ದೆಯೂ ಆ ಕ್ಷೇತ್ರದವರಿಗೆ ದಕ್ಕಿದೆ. ಈ ಬಾರಿ ಗದ್ದುಗೆ ಅಲ್ಪಸಂಖ್ಯಾತರಿಗೆ ನಿಶ್ಚಿತವಾಗಿತ್ತು.

ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರು ಆಯ್ಕೆ ಪತ್ರವನ್ನು ಇಮ್ರಾನ್ ಎಲಿಗಾರ ಅವರಿಗೆ ನೀಡಿದರು. ಮುಖಂಡರಾದ ನವೀದ ಮುಲ್ಲಾ ಸೇರಿದಂತೆ ಇತರರು ಇದ್ದರು.


