ಹುಬ್ಬಳ್ಳಿ-ಧಾರವಾಡ ಸುದ್ದಿ

ಕಿಮ್ಸ್‌ನಲ್ಲಿ ’ಸ್ವರ್ಣ ಶಿಶು ಧಾಮ’ ಲೋಕಾರ್ಪಣೆ

ಡಾ.ಪ್ರಸಾದ ಸಾಮಾಜಿಕ ಕಳಕಳಿಗೆ ವ್ಯಾಪಕ ಪ್ರಶಂಸೆ

ಹುಬ್ಬಳ್ಳಿ: ನಗರದ ಸ್ವರ್ಣ ಸಮೂಹ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ಅವರು ಕಿಮ್ಸ್ ಆಸ್ಪತ್ರೆಯ ಮುಖ್ಯ ಕಟ್ಟಡದಲ್ಲಿ ತಮ್ಮ ತಂದೆ ಚಿಗರುಪಾಟಿ ಮಲ್ಲಿಕಾರ್ಜುನರಾವ ಸ್ಮರಣಾರ್ಥ1.5ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನವಜಾತ ಶಿಶುಗಳ ಆರೈಕೆಯ ಕೇಂದ್ರ ಸ್ವರ್ಣ ಶಿಶುಧಾಮ ವನ್ನು ಇಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದರು.


ನವಜಾತ ಶಿಶುಗಳ ಆರೈಕೆಯ ಸಲುವಾಗಿ ಕಿಮ್ಸ್ ಆವರಣದಲ್ಲಿ ಸುಮಾರು 6760 ಚ.ಅಡಿ ಜಾಗದಲ್ಲಿ ನಿರ್ಮಿಸಿರುವ ಅತ್ಯಧುನೀಕಣ ಸೌಲಭ್ಯಗಳ ಒಳಗೊಂಡ ಕೇಂದ್ರ ಇದಾಗಿದ್ದು ನವಜಾತ ಶಿಶುಗಳಿಗೆ ಉತ್ತಮ ಚಿಕಿತ್ಸೆ ದೊರೆಯಲಿದ್ದು, ಇದರ ಸದುಪಯೋಗ ಪಡೆಯುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಸಂದರ್ಭದಲ್ಲಿ ನಡೆದರು.
ಸಮಾಜ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ಕೊಟ್ಟೆ ಎಂಬ ಪ್ರಶ್ನೆಯನ್ನು ತಮ್ಮಷ್ಟಕ್ಕೆ ತಾವೇ ಕೇಳಿಕೊಳ್ಳುವ ಮನೋಭಾವದ ಪ್ರಸಾದ ಅವರು ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿನ ಸಂಜೀವಿನಿಯಾಗಿರುವ ಕಿಮ್ಸ್ ಆಸ್ಪತ್ರೆಗೆ ಔಟ್ ಬಾರ್ನ ಎನ್‌ಐಸಿಯು, ಎಸ್‌ಎನ್‌ಸಿಯು ಘಟಕ ನೀಡಿ ಇತರರಿಗೆ ಮಾದರಿಯಾಗಿದ್ದಾರೆಂದರು. ಇತರ ಗಣ್ಯರು ಪ್ರಸಾದ ಅವರ ಸಾಮಾಜಿಕ ಕಳಕಳಿ ಪ್ರಶಂಸಿಸಿದರು.


ಕಾರ್ಯಕ್ರಮದಲ್ಲಿ ಘಟಕ ದೇಣಿಗೆ ನೀಡಿದ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ, ಶಾಸಕರಾದ ಎನ್.ಎಚ್.ಕೋನರಡ್ಡಿ, ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬಾರದ್ವಾಡ, ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮೂರಿ, ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ಪ್ರಾಂಶುಪಾಲ ಡಾ.ಈಶ್ವರ ಹೊಸಮನಿ, ಡಾ.ಲಕ್ಷ್ಮೀಕಾಂತ ಲೋಕರೆ ,ನವಜಾತ ಶಿಶು ವಿಭಾಗದ ಮುಖ್ಯಸ್ಥ ಡಾ.ಮಾರ್ತಾಂಡಪ್ಪ ಡಿ.ಎಚ್. ಮುಂತಾದವರಿದ್ದರು.

administrator

Related Articles

Leave a Reply

Your email address will not be published. Required fields are marked *