ಧಾರವಾಡ: ವರ್ಗಾವಣೆಯಲ್ಲಿ ತನಗೆ ಅನ್ಯಾಯ ಆಗಿದೆ ಎಂದು ಅಸಮಾಧಾನಗೊಂಡ ಹೆಡ್‌ಕಾನಸ್ಟೇಬಲ್‌ರೊಬ್ಬರು ಸಂಪೂರ್ಣ ನಿವೃತ್ತಿ ವೇತನ ನಿಗದಿ ಪಡಿಸಿ ಸ್ವಯಂ ನಿವೃತ್ತಿ ನೀಡಬೇಕೆಂದು ಜಿಲ್ಲೆಯ ಪೊಲೀಸ್ ವರಿಷ್ಢಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ.
ಅಳ್ಳಾವರ ಪೊಲೀಸ್ ಠಾಣಿಯ ಮುಖ್ಯ ಪೇದೆ ಆರ್.ಎನ್.ಗೊರಗುದ್ದಿ ಮನವಿ ಸಲ್ಲಿಸಿದ ಸಿಬ್ಬಂದಿಯಾಗಿದ್ದು, ದಿ.5-6-2023 ರಂದು ಸಾರ್ವತ್ರಿಕ ವರ್ಗಾವಣೆಯಲ್ಲಿ 5 ವರ್ಷಗಳ ಅವಧಿ ಪೂರ್ಣಗೊಳ್ಳದೇ ಇದ್ದರೂ ಸಹ ಕೋರಿಕೆಯ ಮೇರೆಗೆ ಅಂತಾ ಡಿಸಿಆರ್ ವಿಭಾಗದಿಂದ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ವರ್ಗಾವಣೆ ಸಂದರ್ಭದಲ್ಲಿ ನನ್ನ ಕೌಟುಂಬಿಕ ತೊಂದರೆಯನ್ನು ಲಿಖಿತವಾಗಿ ಗಮನಕ್ಕೆ ತಂದರೂ ಪ್ರಯೋಜನ ಆಗಲಿಲ್ಲ.ಇದರಿಂದ ನನ್ನ ಮನಸ್ಸಿಗೆ ತೀವ್ರ ಆಘಾತವಾಗಿದೆ. ನನ್ನದು ಅವಿಭಕ್ತ ಕುಟುಂಬ ವಾಗಿದ್ದು, ನಮ್ಮ ಕುಟುಂಬದಲ್ಲ ನಾನೊಬ್ಬನೇ ಸರ್ಕಾರಿ ಕರ್ತವ್ಯದ ಮೇಲಿದ್ದು ಎಲ್ಲರನ್ನೂ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ.
ನನ್ನ ಕೊರತೆಗಳನ್ನು ಹೇಳಲು ಬಂದಾಗ ನನ್ನನ್ನು ಅಮಾನತ್‌ಗೊಳಿಸುವ ಹಾಗೂ ಸೇವೆಯಿಂದ ವಜಾ ಮಾಡುವ ಮನಸ್ಥಿತಿ ಕಂಡು ಬಂದಿತು.
ವರ್ಗಾವಣಿ ಮಾಡುವ ಸಮಯದಲ್ಲಿ ತಮಗಿಂತ ಹಿರಿಯ ಅಧಿಕಾರಿಗಳಿಂದಲೂ ಸಹ ನನ್ನ ಕುಂದು ಕೊರತೆಯ ಬಗ್ಗೆ ತಿಳಿಸಿದರೂ ಸಹ ನನಗೆ ನನ್ನ ಕುಟುಂಬದ ಜೊತೆಗೆ ಇಲಾಖೆಯ ಕರ್ತವ್ಯಗಳನ್ನು ನಿಭಾಯಿಸಲು ಅನುಕೂಲ ಮಾಡಿಕೊಡಲಿಲ್ಲ ಎಂದು ತಮ್ಮ ಮನವಿಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.