ಹುಬ್ಬಳ್ಳಿ-ಧಾರವಾಡ ಸುದ್ದಿ

ರೋಟರಿ ಉತ್ತರ ಸ್ಥಾಪನಾ ಪದಗ್ರಹಣ ಸಮಾರಂಭ

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ನಾರ್ತ್ ಸ್ಥಾಪನಾ ಪದಗ್ರಹಣ ಸಮಾರಂಭವು ಜು. 6 ರಂದು ಸಂಜೆ 6.30ಕ್ಕೆ ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ ಸಭಾಂಗಣದಲ್ಲಿ ನಡೆಯಲಿದೆ.


2023-24ನೇ ಸಾಲಿನ ಅಧ್ಯಕ್ಷರಾಗಿ ಡಾ.ನಾಗರಾಜ್ ಪಿ.ಶೆಟ್ಟಿ, ಕಾರ್ಯದರ್ಶಿಯಾಗಿ ಪ್ರಕಾಶ್ ಇರಕಲ್ ಹಾಗೂ ಖಜಾಂಚಿಯಾಗಿ ರವಿ ಬಾಕಳೆ ಆಯ್ಕೆಯಾಗಿದ್ದು, ಅಧಿಕಾರ ವಹಿಸಿಕೊಳ್ಳಲಿದ್ದಾರೆ.

 

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರ್.ಟಿ.ಎನ್.ಅರುಣ್ ಭಂಡಾರೆ, ಜಿಲ್ಲಾ ಗವರ್ನರ್ ನಾಮಿನಿ, ಸುರೇಂದ್ರ ಪೋರವಾಲ್ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

administrator

Related Articles

Leave a Reply

Your email address will not be published. Required fields are marked *