ಹುಬ್ಬಳ್ಳಿ: ಕ್ರೀಡೆ ಮನುಷ್ಯನನ್ನು ಬಲಿಷ್ಠ, ಆರೋಗ್ಯವಂತಾಗಿ ಮಾಡುತ್ತವೆ ಎಂಬುದು ಸದಾಕಾಲ ಸತ್ಯ. ಅದರಲ್ಲೂ ಕುಸ್ತಿಗೆ ಶರೀರ ಶಕ್ತಿ ಮುಖ್ಯ. ಅದರೊಂದಿಗೆ ಗೆಲುವಿಗೆ ಅರೇಕ್ಷಣದಲ್ಲಿ ಬುದ್ಧಿಶಕ್ತಿಯೂ ಬೇಕಾಗುತ್ತದೆ. ಆದರೆ, ಈಜು, ಸೈಕ್ಲಿಂಗ್‌ಗೆ ಸೇರಿದಂತೆ ಶಕ್ತಿ, ಯುಕ್ತಿ ಹಾಗೂ ತಾಳ್ಮೆಯೂ ಮುಖ್ಯವಾಗಿರುತ್ತದೆ. ಈಜು ಸೈಕ್ಲಿಂಗ್‌ನಲ್ಲಿ ಗೆಲುವು ಸಾಧಿಸಲು, ಸಾಧನೆಯ ಶಿಖರವೇರಲು ತಾಳ್ಮೆಯ ಜೊತೆಗೆ ಸತತ ಸಾಧನೆಯೂ ಪ್ರಮುಖವಾಗುತ್ತದೆ.
ಖಾಕಿ ಹಾಗಿದರೆ ಬರೀ ದರ್ಪ ಎಂಬ ಭಾವನೆ ಬೇಡ ನಾವೂ ಮನುಷ್ಯರು, ಸಾಧನೆಯ ಹಾದಿಯಲ್ಲಿ ಸಾಗಿದವರು ಎಂಬುದನ್ನು ಮೇಲಿಂದ ಮೇಲೆ ಏನಾದರೂ ಒಂದು ಸಾಧನೆಯ ಮೂಲಕ ಸಾರಿದವರು ಇನ್ಸ್ ಪೆಕ್ಟರ್ ಮುರುಗೇಶ ಚನ್ನಣ್ಣವರ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಅಧಿಕಾರಿಯಾಗಿರುವ ಇವರು ಈಗ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಅದುವೇ 28 ಕಿಲೋ ಮೀಟರ್ ರಾಮಸೇತು ಈಜು. ಇವರೊಂದಿಗೆ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ. ಇವರು ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿಯವರೆಗೆ ರಾಮ ಸೇತು ಮೂಲಕ 28 ಕಿ.ಮೀ ಸ್ವಿಮ್ಮಿಂಗ್ (ಈಜು) ನ್ನು ರಿಲೇ ತಂಡದೊಂದಿಗೆ 8 ಗಂಡೆ 30 ನಿಮಿಷದಲ್ಲಿ ಸಾಧಿಸಿದ್ದಾರೆ. ಈ ವಿಶೇಷ ತಂಡದಲ್ಲಿ ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಪಶ್ಚಿಮ ಬಂಗಾಲ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳು ಇದ್ದಾರೆ.
ಈ ತಂಡವು ಕಷ್ಟಕರವಾದ 28 ಕಿ.ಮೀ ಈಜನ್ನು ಹಿಂದೂಮಹಾಸಾಗರ ಮತ್ತು ಬಂಗಾಲಕೊಲ್ಲಿಯ ಸಮುದ್ರದಲ್ಲಿ ಪ್ರತಿಕೂಲ ವಾತಾವರಣ ಮತ್ತು ಭಾರೀ ಅಲೆಗಳ ನಡುವೆ ನಿರಂತರವಾಗಿ 8 ಗಂಟೆ 30 ನಿಮಿಷದಲ್ಲಿ ಪೂರ್ಣಗೊಳಿಸಿ, ಅದ್ಭುತ ಸಾಧನೆಯನ್ನು ತಂಡ ಮಾಡಿದೆ.
ಇದಕ್ಕೆ ಸ್ಫೂರ್ತಿಯಾಗಿ ಧರ್ಮಪತ್ನಿ ಶ್ವೇತಾ ಚನ್ನಣ್ಣವರ ಅವರು ಜೊತೆ ಬೋಟಿನಲ್ಲಿ ಶ್ರೀಲಂಕಾಗೆ ಹೋಗಿದ್ದರು. ಈ ಮೂಲಕ ಐರನ್‌ಮ್ಯಾನ್ ಖ್ಯಾತಿಯ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮುಂತಾದ ಸಾಧನೆಗಳ ಮೂಲಕ ಪೊಲೀಸ್ ಇಲಾಖೆಯಲ್ಲಿ ಅಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲಿ ಹೆಸರು ಮಾಡಿದ್ದಾರೆ ಮತ್ತು ಜನಪ್ರಿಯರಾಗಿದ್ದಾರೆ.
ಪೊಲೀಸ್ ಅಧಿಕಾರಿ ಮುರುಗೇಶ ಚನ್ನಣ್ಣವರ. ಇವರು ಮತ್ತೊಂದು ಮೈಲುಗಲ್ಲು ಸಾಧಿಸಲಿದ್ದಾರೆ ಇವರು ಮತ್ತು ಅಮನ್ ಶಾನಭಾಗ ಮುಂಬರುವ ಜೂನ್ ತಿಂಗಳಲ್ಲಿ ವಿಶ್ವದ ಅತಿ ಕಷ್ಟಕರ ವಾದ ಇಂಗ್ಲಿಷ ಕಾಲುವೆ (ಇಂಗ್ಲೆಂಡ ಮತ್ತು ಫ್ರಾನ್ಸ್ ಮಧ್ಯ 36 ಕಿಲೋ ಮೀಟರ್ ಕಾಲುವೆ) ಯನ್ನು ಈಜಲು ಹೊರಟಿರುವದು ನಮ್ಮ ನಾಡು ಮತ್ತು ಕರ್ನಾಟಕ ಪೊಲೀಸ್ ಇಲಾಖೆ ಹೆಮ್ಮೆ ಪಡುವ ವಿಷಯವಾಗಿದೆ. ಅಲ್ಲಿಯೂ ಅವರು ಸಾಧನೆ ಪತಾಕೆ ಹಾರಿಸಲಿ ಎಂಬುದೇ ಕನ್ನಡಿಗ ಆಶಯ.