ಹುಬ್ಬಳ್ಳಿ-ಧಾರವಾಡ ಸುದ್ದಿ
12ರಂದು ಶಾಸಕ ಅರವಿಂದ ಬೆಲ್ಲದ ಮನೆ ಮುಂದೆ ಪ್ರತಿಭಟನೆ

12ರಂದು ಶಾಸಕ ಅರವಿಂದ ಬೆಲ್ಲದ ಮನೆ ಮುಂದೆ ಪ್ರತಿಭಟನೆ

ಹುಬ್ಬಳ್ಳಿ: ಜಗದೀಶ್ ನಗರ, ರಾಮನಗರ ವಾಜಪೇಯಿ ನಗರ ನಿವಾಸಿಗಳಿಗೆ ನೂತನ ಆಶ್ರಯ ಮನೆಗಳನ್ನು ಹಾಗೂ ಮೂಲ ಸೌಕರ್ಯಗಳನ್ನು ನೀಡದೇ ಇರುವುದನ್ನು ಖಂಡಿಸಿ ಧಾರವಾಡ ಜಿಲ್ಲಾ ಆಶ್ರಯ ಮನೆ ಬಡಾವಣೆಗಳ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಏ.12ರಂದು ಶಾಸಕ ಅರವಿಂದ್ ಬೆಲ್ಲದ ಅವರ ನಿವಾಸದ ಮುಂದೆ ನೂರಾರು ಫಲಾನುಭವಿಗಳೊಂದಿಗೆ ಒಂದು ದಿನದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಗದೀಶ್ ನಗರ ಆಶ್ರಯ ಕಮಿಟಿ ಸದಸ್ಯ ವೆಂಕಟೇಶ ದೇಸಾಯಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


2015ನೇ ಸಾಲಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ತಮ್ಮ ಆಶ್ರಯ ಮನೆಗಳನ್ನು ಕಳೆದುಕೊಂಡ ಆಶ್ರಯ ಮನೆಗಳ ಫಲಾನುಭವಿಗಳಿಗೆ ಇಂದಿಗೂ ನೂತರ ಮನೆಗಳನ್ನು ಮಂಜೂರು ಮಾಡಿಲ್ಲ. ಅಲ್ಲದೇ ಹಲವು ವರ್ಷಗಳಿಂದ ಆಶ್ರಯ ಬಡಾವಣೆಗಳಲ್ಲಿನ ಬಾಕಿ ಉಳಿದಿರುವ ಮೂಲ ಫಲಾನುಭವಿಗಳಿಗೆ ಅವರ ಮನೆಗಳನ್ನು ಮನೆಗಳನ್ನು ಋಣಮುಕ್ತ ನೋಂದಣಿ ಪತ್ರ ಮಾಡಿ ಕೊಡದೆ ಇರುವ ಇರುವುದು ಮತ್ತು ಆಶ್ರಯ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ನೀಡದಿರುವುದು ಅಸಮಾಧಾನ ಮೂಡಿಸಿದೆ ಎಂದರು.
ಮೂಲ ಸೌಕರ್ಯದಿಂದ ಜನತೆ ವಂಚಿತವಾಗಿದ್ದು, ಶಾಸಕರು ಶಾಸಕತ್ವದ ಅಧಿಕಾರದಿಂದ ಆಶ್ರಯ ಮನೆಗಳ ಮೊದಲಿನ ಮೂಲ ಫಲಾನುಭವಿಗಳ ಹೆಸರನ್ನು ರದ್ದುಪಡಿಸಿ ಮೂಲ ಫಲಾನುಭವಿಗಳ ಹೆಸರಿನಲ್ಲಿಯ ಮನೆಗಳನ್ನು ಬದಲಾಯಿಸಿ ಶಾಸಕರು ತಮಗೆ ಬೇಕಾದಂತವರನ್ನು ಗುರುತಿಸಿ ಅವರಿಗೆ ಆಶ್ರಯ ಮನೆಗಳನ್ನು ಮರು ಹಂಚಿಕೆ ಮಾಡುವರು. ಆಶ್ರಯ ಮನೆಗಳ ಭೂಮಾಪಿಯಾದವರ ವದಂತಿಯಿಂದ ಮೂಲ ಆಶ್ರಯ ಮನೆಗಳ ಫಲಾನುಭವಿಗಳುವ ಭಯಬೀತರಾಗಿದ್ದಾರೆ ಎಂದು ದೂರಿದರು.
ಜಗದೀಶ್ ನಗರ ಆಶ್ರಯ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ, ರಾಮನಗರ ಆಶ್ರಯ ಬಡಾವಣೆ ನಿವಾಸಿಗಳ ಸುಧಾರಣಾ ಸಮಿತಿ ಹಾಗೂ ವಾಜಪೇಯಿ ನಗರ ಆಶ್ರಯ ಬಡಾವಣೆ ನಿವಾಸಿಗಳ ಸುಧಾರಣಾ ಸಮಿತಿ ಮುಂತಾದ ಪ್ರಮುಖ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪದಾಧಿಕಾರಿಗಳು ಮತ್ತು ನಿವಾಸಿಗಳು ಪ್ರತಿಭಟನೆಯಲ್ಲಿ ೧೫೦ ಜನರು ಪಾಲ್ಗೊಳ್ಳಲಿದ್ದು, ಶಾಸಕರಿಗೆ ಆಶ್ರಯ ಮನೆ, ನಿವಾಸಿಗಳ ನ್ಯಾಯಯುತ. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ನೀಡಲಾಗುವುದು ಎಂದರು.
ಚನ್ನಮ್ಮ ಪಡೇಸೂರ, ನಿಂಗಪ್ಪ ಬಡಿಗೇರ ಸೇರಿದಂತೆ ಇತರರು ಗೋಷ್ಠೀಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *