20ಕ್ಕೆ ಭವ್ಯ ಮೆರವಣಿಗೆ -ಅಭಿನಂದನಾ ಸಮಾರಂಭ
ಹುಬ್ಬಳ್ಳಿ: ಭೌತಿಕ ಸುಖ ಭೋಗಗಳಿಗೆ ವಿದಾಯ ಹೇಳಿ ಲೋಕ ಕಲ್ಯಾಣಕ್ಕೆ ಸಮರ್ಪಿಸಿಕೊಳ್ಳಲು ಶಿವಮೊಗ್ಗ ಮೂಲದ 14 ವರ್ಷದ ಬಾಲಕಿ ಕುಮಾರಿ ಸಿದ್ದಿ ವಿನಾಯಕಿಯಾ ದಿ. 21ರಂದು ನಗರದ ಕೇಶ್ವಾಪುರದ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀ ಜೈನ ಭಗವತಿ ದೀಕ್ಷೆ ಸ್ವೀಕರಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ನರೇಶ ಮುನಿಜಿ, ಶಾಲಿಭದ್ರ ಮುನಿಜಿ ಸಮ್ಮುಖದಲ್ಲಿ ದೀಕ್ಷಾ ಸಮಿತಿ ಅಧ್ಯಕ್ಷ ಮಹೇಂದ್ರ ಸಿಂಘಿ ಕಾರ್ಯಕ್ರಮಗಳ ವಿವರ ನೀಡಿದರು.
ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಆಶ್ರಯದಲ್ಲಿ ಮಹಾನ್ ತಪಸ್ವಿ 75ಸಾವಿರ ಕಿ.ಮಿ.ಪಾದಯಾತ್ರೆ ಕೈಗೊಂಡಿರುವ ಪೂಜ್ಯ ನರೇಶ ಮುನಿಜಿ, ಶಾಲಿಭದ್ರ ಮುನಿಜಿ, ಸತ್ಯ ಪ್ರಭಾಜಿ ಹಾಗೂ ಶಾಲಿಭದ್ರ ಮುನಿಜಿ ಯವರ ವಿವಿಧ ಸಾಧು ಸಂತರ ಸಾನ್ನಿಧ್ಯದಲ್ಲಿ ಮುಂಜಾನೆ 9ರಿಂದ 12ರ ಅವಧಿಯಲ್ಲಿ ಸತ್ಯ, ಅಹಿಂಸಾ, ಮಾನವೀಯ ಏಕತೆ, ತ್ಯಾಗ ಮತ್ತು ವಿಶ್ವ ಶಾಂತಿ ಸಾರಲು ದೀಕ್ಷೆ ಸ್ವೀಕರಿಸುವರು.
ದಿ.17ರಿಂದಲೇ ಕಾರ್ಯಕ್ರಮಗಳು ಆರಂಭಗೊಂಡಿದ್ದು, ದಿ.20ರಂದು ದೀಕ್ಷಾರ್ಥಿಯ ಬೃಹತ್ ಮೆರವಣಿಗೆ 9ಗಂಟೆಗೆ ರಾಯ್ಕರ್ ಗೆಸ್ಟ್ ಹೌಸ್ನಿಂದ ಸಂಸ್ಕಾರ ಶಾಲೆಯವರೆಗೆ ನಡೆಯಲಿದ್ದು, ಸರ್ವೊಧಯಮೂರುಸಾವಿರಮಠದ ಜಗದ್ಗುರುಗಳು ಉದ್ಘಾಟಿಸಲಿದ್ದಾರೆ. ಸಾಯಂಕಾಲ 7.30ಕ್ಕೆ ಭವ್ಯ ವೈರಾಗ್ಯ ಅಭಿನಂದನಾ ಸಮಾರಂಭ ಸಂಸ್ಕಾರ ಶಾಲೆ ಆವರಣದಲ್ಲಿ ನಡೆಯಲಿದ್ದು, ಗಣ್ಯರು, ಜನಪ್ರತಿನಿಧಿಗಳು ಸಚಿವರು ಪಾಲ್ಗೊಳ್ಳಲಿದ್ದಾರೆ.ಅಲ್ಲದೇ ಮುಂಬೈನ ವಿಕ್ಕಿ ಡಿ.ಪಾರೀಖರಿಂದ ಜೈನ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ಜರುಗಲಿದೆ.
ಅಭಿನಂದನಾ ಸಮಾರಂಭದ ಯಶಸ್ಸಿಗಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗೌರವಾಧ್ಯಕ್ಷತೆಯಲ್ಲಿ ಅಭಿನಂದನಾ ಸಮಿತಿ, ದೀಕ್ಷಾ ಕಾರ್ಯಕ್ರಮದ ಯಶಸ್ಸಿಗಾಗಿ ದೀಕ್ಷಾ ಸಮಿತಿ, ಸ್ವಾಗತ ಸಮಿತಿ, ವಾಸ್ತವ್ಯ ಶೋಬಾಯಾತ್ರೆ ಸಮಿತಿ, ಸಾರಿಗೆ ಸಮಿತಿ ಪೆಂಡಾಲ ಸಮಿತಿ ರಚಿಸಲಾಗಿದ್ದು ಸುಮಾರು ೩ಸಾವಿರಕ್ಕೂ ಹೆಚ್ಚು ಅಹಿಂಸಾ ಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ.
ಗೋಷ್ಠಿಯಲ್ಲಿ ದೀಕ್ಷೆ ಸ್ವೀಕರಿಸಲಿರುವ ಸಿದ್ದಿ ವಿನಾಯಕಿಯಾ,ಜೈನ ಶ್ರಾವಕ ಸಂಘದ ಅಧ್ಯಕ್ಷ ಪಾರಸಮಲ್ ಪಟವಾ, ಕಾರ್ಯಾಧ್ಯಕ್ಷ ಅಶೋಕ ಕೊಠಾರಿ, ಕಾರ್ಯದರ್ಶಿ ಮುಖೇಶ ಭಂಡಾರಿ, ವಿವಿಧ ಸಮಿತಿಗಳ ಪ್ರಮುಖರಾದ ಬಾಬುಲಾಲ ಪಾರಖ್,ಗೌತಮ ಚಂದ ಗುಲೇಛಾ, ಮಹೇಂದ್ರ ಚೋಪ್ರಾ, ಪ್ರಕಾಶ ಬಾಫಣಾ, ಪ್ರಕಾಶ ಕಟಾರಿಯಾ, ಅಶೋಕ ಕಾನೂಂಗಾ,ರಾಜೇಶ ಬೊಹ್ರಾ, ಮಹೇಂದ್ರ ವಿನಾಯಕಿಯಾ, ದಲಿಚಂದ ಬಾಗ್ರೇಚಾ, ಸಂದೀಪ ಬಾಗರೇಚಾ ಸೇರಿದಂತೆ ಅನೇಕರಿದ್ದರು.