ಹುಬ್ಬಳ್ಳಿ-ಧಾರವಾಡ ಸುದ್ದಿ

ಸಿಬಿಐ ತನಿಖೆ ಅಗತ್ಯವಿಲ್ಲ: ಗೃಹ ಸಚಿವ

ಜೈನ ಮುನಿ ಕೊಲೆ ಪ್ರಕರಣದಲ್ಲಿ ರಾಜಕಾರಣ ಬೇಡ

ಇದು ರಾಜಕೀಯ ಹೋರಾಟ ಆಗಲಾರದು: ಗುಣಧರನಂದಿ ಸ್ವಾಮೀಜಿ

ನವಗ್ರಹ ತೀರ್ಥ ಕ್ಷೇತ್ರಕ್ಕೆ ಪರಮೇಶ್ವರ ಭೇಟಿ

ಹುಬ್ಬಳ್ಳಿ: ಚಿಕ್ಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಸ್ವಾಮೀಜಿ ಕೊಲೆ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಪೊಲೀಸರು ಕಾನೂನು ವ್ಯಾಪ್ತಿಯಲ್ಲಿ ಪ್ರಾಮಾಣಿಕ ತನಿಖೆ ಮಾಡುತ್ತಿದ್ದಾರೆ. ಆರೋಪಿಗಳ ರಕ್ಷಣೆ ಸೇರಿದಂತೆ ಇತ್ಯಾದಿಗಳು ಸುಳ್ಳು. ಈಗಾಗಲೆ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇಂತಹ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸೋಮವಾರ ಇಲ್ಲಿನ ವರೂರಿನ ಗುಣಧರ ನಂದಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.


ಪ್ರಕರಣದ ತನಿಖೆಯು ಡಿವೈಎಸ್ಪಿ ಅಧಿಕಾರಿಯ ನೇತೃತ್ವದಲ್ಲಿ ನಡೆಯುತ್ತಿದೆ. ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಇದು ಯಾರ ವೈಫಲ್ಯದಿಂದ ನಡೆದ ಘಟನೆಯಲ್ಲ. ಇದು ಇತಿಹಾಸದಲ್ಲಿ ಕಂಡರಿಯದ ಘಟನೆಯಾಗಿದೆ. ತನಿಖೆಯ ನಂತರ ಇನ್ನಷ್ಟು ವಿಚಾರಗಳು ಬರಲಿವೆ. ಇಲಾಖೆಯ ಸಚಿವನಾಗಿ ತನಿಖೆಯ ಹಂತದಲ್ಲಿರುವ ಕೆಲ ವಿಚಾರಗಳನ್ನು ಹೇಳಲು ಬರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣದ ತನಿಖೆಯಾಗಲಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರನ್ನು ಕಳುಹಿಸಲಾಗಿತ್ತು. ಸದ್ಯ ದೊರಕಿರುವ ಮಾಹಿತಿಯನ್ನು ನೀಡಿದ್ದಾರೆ. ಇಂತಹ ವಿಚಾರಗಳಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.


ಘಟನೆಯ ನಂತರ ಗುಣಧರನಂದಿ ಸ್ವಾಮೀಜಿಗಳು ಬಹಳ ನೊಂದಿದ್ದಾರೆ. ಅವರನ್ನು ಭೇಟಿ ಮಾಡುವ ಉದ್ದೇಶದಿಂದಲೇ ಬಂದಿದ್ದೇನೆ. ಅವರೊಂದಿಗೆ ಕೆಲ ವಿಚಾರ ಗಳನ್ನು ಹಂಚಿಕೊಂಡಿದ್ದೇನೆ. ಅವರು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ. ಮುಖ್ಯಮಂತ್ರಿಗಳು ಕೂಡ ಕರೆ ಮಾಡಿ ಸ್ವಾಮೀಜಿಗಳೊಂದಿಗೆ ಮಾತನಾಡಿದ್ದಾರೆ. ಜೈನ ಸ್ವಾಮೀಜಿಗಳ ಯಾತ್ರೆ ವೇಳೆ ರಕ್ಷಣೆ ಕೊಡಬೇಕು. ಜೈನ ಮಂದಿರಗಳಿಗೆ ರಕ್ಷಣೆ ನೀಡಬೇಕು. ಜೈನ ಮುನಿಗಳು ತಂಗುವ ಜಾಗ ಅಧಿಕೃತ ಆಗಬೇಕು. ಜೈನ ಮಂಡಳಿ ಮಾಡಬೇಕು ಎನ್ನುವ ನಾಲ್ಕು ಬೇಡಿಕೆಗಳನ್ನು ಸ್ವಾಮೀಜಿ ಇಟ್ಟಿದ್ದಾರೆ. ಕೆಲವು ನಮ್ಮ ಹಂತದಲ್ಲಿ ಆಗಬಹುದಾದ ಬೇಡಿಕೆಗಳಾಗಿವೆ. ಜೈನ ಮಂಡಳಿ ಸ್ಥಾಪನೆ ಕುರಿತು ಎಂದು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.
ನಾವು ಜೈನ ಮಂದಿರಕ್ಕೆ ರಕ್ಷಣೆ ಕೊಡುತ್ತೇವೆ. ರಾಜ್ಯದಲ್ಲಿ ಇಂತಹ ಘಟನೆ ಆಗಬಾರದು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಯಾರೇ ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮವಾಗಲಿದೆ. ಸ್ವಾಮೀಜಿ ಕೊಲೆ ಪ್ರಕರಣದಲ್ಲಿ ವಿನಾಕಾರಣ ಗೊಂದಲ ಮೂಡಿಸುವ ಕೆಲಸ ಆಗಬಾರದು. ಜನಪ್ರತಿನಿಧಿಗಳಾದವರು ಈ ಬಗ್ಗೆ ಜಾಗರೂಕತೆಯಿಂದ ಮಾತನಾಡಬೇಕು ಎಂದರು.
ಆರೋಪಿಗಳ ಹೆಸರನ್ನು ಹಿಂದೆ ಮುಂದೆ ಮಾಡಲಾಗಿದೆ ಎನ್ನುವ ಶಾಸಕ ಅಭಯ ಪಾಟೀಲ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ಅವರು ಹೇಳಿದಾಕ್ಷಣ ನಿಜ ಆಗುವುದಿಲ್ಲ. ಪೊಲೀಸರು ಕಾನೂನು ವ್ಯಾಪ್ತಿಯಲ್ಲಿ ತನಿಖೆ ಮಾಡುತ್ತಿದ್ದು, ತನಿಖೆಯ ನಂತರ ವಾಸ್ತವ ಬಹಿರಂಗವಾಗಲಿದೆ ಎಂದರು.

ಇದು ರಾಜಕೀಯ ಹೋರಾಟ ಆಗಲಾರದು: ಗುಣಧರನಂದಿ ಸ್ವಾಮೀಜಿ

ಹುಬ್ಬಳ್ಳಿ: ಜೈನ ಮುನಿ ಹತ್ಯೆಯ ಕೃತ್ಯ ಆಗಿರೋದು ಎಲ್ಲ ಪಕ್ಷದವರು ಖಂಡನೆ ಮಾಡುತ್ತಿದ್ದಾರೆ. ಇದಕ್ಕೆ ನೂರು ಕೋಟಿ ಧನ್ಯವಾದ, ಇಂತಹ ಕೃತ್ಯ ಆಗಬಾರದು. ಜಿ ಪರಮೇಶ್ವರ ಭೇಟಿ ಬಳಿಕ ನಾನು ಉಪವಾಸ ಹಿಂಪಡೆಯುತ್ತೇನೆ ಎಂದು
ವರೂರಿನಲ್ಲಿ ಗುಣಧರನಂದಿ ಸ್ವಾಮೀಜಿ ಹೇಳಿದರು.


ಪರಮೇಶ್ವರ್ ಭೇಟಿ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ ನಮ್ಮ ಜೊತೆ ಮಾತನಾಡಿದ್ದಾರೆ. ಹೀಗಾಗಿ ನಾನು ಉಪವಾಸ ಸತ್ಯಾಗ್ರಹ ಹಿಂದೆ ಪಡೆಯತ್ತೇನೆ. ಈ ಹೋರಾಟ,ರಾಜಕೀಯ ಹೋರಾಟ ಆಗಲಾರದು. ಮಠಕ್ಕೆ ಎಲ್ಲ ಪಕ್ಷದವರ ಸಹಕಾರ ಇದೆ. ಬಿಜೆಪಿ,ಕಾಂಗ್ರೆಸ್ ಎಲ್ಲ ಪಕ್ಷದ ಸಹಕಾರ ಇದೆ. ಇಲ್ಲಿರೋ ರಸ್ತೆಗೆ ಸಿದ್ದರಾಮಯ್ಯ ಅನುದಾನ ಕೊಟ್ಟಿದ್ದಾರೆ. ಎಲ್ಲ ಪಕ್ಷದವರೂ ನನಗೆ ಸಹಕಾರ ಕೊಟ್ಟಿದ್ದಾರೆ. ಜೈನಮುನಿ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬಾರದು. ನಾವು ಅಹಿಂಸಾವಾದಿಗಳು. ಕೊಲೆ ಮಾಡಿದವರ ಮನ ಪರಿವರ್ತನೆ ಆಗಬೇಕು. ನಾನು ಕೊಲೆ ಮಾಡಿದವರಿಗೆ ಕ್ಷಮಾದಾನ ಕೊಡ್ತೀನಿ ಎಂದರು.
ನಮ್ಮ ಬೇಡಿಕೆಗೆ ಪರಮೇಶ್ವರ ಸಮ್ಮತಿಸಿದ್ದಾರೆ. ಗೃಹ ಸಚಿವರ ಮೇಲೆ ಮೇಲೆ ೧೦೦ ಪರ್ಸೆಂಟ್ ಗ್ಯಾರಂಟಿ ಇದೆ. ಅವರು ನಮಗೆ ಬರವಣಿಗೆ ಮೂಲಕ ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ ಅನ್ನೋ ನಂಬಿಕೆ ಇದೆ. ಕ್ಯಾಬಿನೆಟ್ ಇದ್ರು ಇಲ್ಲಿ ಬಂದಿದ್ದಾರೆ,ಅವರಿಗೆ ಕೋಟಿ ವಂದನೆ. ಕರ್ನಾಟಕದಲ್ಲಿ ಐದು ವರ್ಷ ಶಾಂತಿ ಇರಲಿ. ಪಂಚಪೀಠಾಧಿಪತಿಗಳು ನಮ್ಮ ಜೊತೆ ನಿಂತರೂ, ಕೆಲ ಮುಸ್ಲಿಂ ಸಮುದಾಯದ ಜನ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಭಾವುಕರಾದರು.
ಅಮೇರಿಕಾದಲ್ಲಿ ಕೂಡ ಸತ್ಯಾಗ್ರಹ ಮಾಡಿದ್ದಾರೆ. ಹೆಬ್ಬಾಳಕರ್, ಸವದಿ,ಬೊಮ್ಮಾಯಿ ಎಲ್ಲರೂ ಕರೆ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ. ನನ್ನಿಂದ ನೋವಾಗಿದ್ರೆ ಎಲ್ಲರಿಗೂ ಕ್ಷಮೆ ಕೇಳ್ತೀನಿ ಎಂದರು

ಭೇಟಿ ಸಮಯದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜೈನ ಸಮಾಜದ ಮುಖಂಡ ಮಹೇಂದ್ರ ಸಿಂಘಿ ಜೈನ ನಿಗಮ ಸ್ಥಾಪನೆ ಮಾಡಬೇಕು ಎಂದು ವಿನಂತಿಸಿದಾಗ ಅದಕ್ಕೂ ಸಮ್ಮತಿಸುವುದಾಗಿ ಪರಮೇಶ್ವರ ಬೆಂಬಲ ನೀಡಿದರು. ಕಾಂಗ್ರೆಸ್ ಮುಖಂಡರಾದ ಉಭಯ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಮಹೇಂದ್ರ ಸಿಂಘಿ, ತವನಪ್ಪ ಅಷ್ಟಗಿ, ಮಹ್ಮದ ಯೂಸೂಫ್ ಸವಣೂರ, ಪಾರಸಮಲ್ ಜೈನ, ರಾಜಶೇಖರ ಮೆಣಸಿನಕಾಯಿ, ಸದಾನಂದ ಡಂಗನವರ, ಬಾಹುಬಲಿ ಜೈನ ಮುಂತಾದವರಿದ್ದರು.

ನವಗ್ರಹ ತೀರ್ಥ ಕ್ಷೇತ್ರಕ್ಕೆ ಪರಮೇಶ್ವರ ಭೇಟಿ

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೆಕೋಡಿಯ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥ ಜೈನ ಆಶ್ರಮಕ್ಕೆ ಇಂದು ಬೆಳಿಗ್ಗೆ ಗೃಹ ಸಚಿವರಾದ ಜಿ.ಪರಮೇಶ್ವರ ಅವರು ಭೇಟಿ ನೀಡಿದರು.
ಇದೇ ವೇಳೆ ವರೂರಿನ ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿ ಅವರು ಕೈಗೊಂಡ ಉಪವಾಸವನ್ನು ಕೈಬಿಡುವಂತೆ ಮನವೊಲಿಸಿದರು. ಅಲ್ಲದೇ ಕಾಮಕುಮಾರ ಸ್ವಾಮೀಜಿ ಅವರ ಹ್ಯತೆ ಮಾಡಿದವರಿಗೆ ಸೂಕ್ತ ತನಿಖೆ ಕೈಗೊಂಡು ಕಾನೂನು ರೀತಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಭರವಸೆ ನೀಡಿದರು.


ಜೈನ ಮುನಿಗಳಿಗೆ ಭದ್ರತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಈ ತರಹದ ಕೃತ್ಯಗಳು ನಡೆಯದಂತೆ ಕ್ರಮ ವಹಿಸಲಾಗುತ್ತದೆ ಎಂದು ಧೈರ್ಯ ಹೇಳಿದರು.
ಭೇಟಿ ಸಮಯದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜೈನ ಸಮಾಜದ ಮುಖಂಡ ಮಹೇಂದ್ರ ಸಿಂಘಿ ಜೈನ ನಿಗಮ ಸ್ಥಾಪನೆ ಮಾಡಬೇಕು ಎಂದು ವಿನಂತಿಸಿದಾಗ ಅದಕ್ಕೂ ಸಮ್ಮತಿಸುವುದಾಗಿ ಪರಮೇಶ್ವರ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ಶಾಸಕ ಪ್ರಸಾದ್ ಅಬ್ಬಯ್ಯ
ಉಭಯ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಮುಖಂಡರುಗಳಾದ ತವನಪ್ಪ ಅಷ್ಟಗಿ,ಮಹ್ಮದ ಯೂಸೂಫ್ ಸವಣೂರ, ಪಾರಸಮಲ್ ಜೈನ ,ರಾಜಶೇಖರ ಮೆಣಸಿನಕಾಯಿ, ಸದಾನಂದ ಡಂಗನವರ, ಜೈನ ಸಮಾಜದ ಮುಖಂಡರಾದ ವಿಮಲ್ ತಾಳಿಕೋಟಿ, ಗೌತಮ ಗುಲೇಚಾ, ಸುಭಾಸ ಡಂಕ್, ಬಾಹುಬಲಿ ಜೈನ ಇತರರರಿದ್ದರು.

administrator

Related Articles

Leave a Reply

Your email address will not be published. Required fields are marked *