ಹುಬ್ಬಳ್ಳಿ: ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್(ಜಿತೋ) ಸಂಸ್ಥಾಪನಾ ದಿನಾಚರಣೆ ನಿಮಿತ್ತ ನಗರದ ಕುಸುಗಲ್ ರಸ್ತೆಯ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ರವಿವಾರ ಆಯೋಜಿಸಿದ್ದ ಹೊನಲು ಬೆಳಕಿನ ಕರ್ನಾಟಕ ವಲಯ ಮಟ್ಟದ ವಾಲಿಬಾಲ್ ಟೂರ್ನಿಯ ಅತ್ಯಂತ ರೋಚಕ ಪಂದ್ಯದಲ್ಲಿ ಬೆಳಗಾವಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಬೆಂಗಳೂರು ತಂಡ ರನ್ನರ್ ಅಪ್ ಸ್ಥಾನ ಪಡೆಯಿತು. ಗದಗ, ಹುಬ್ಬಳ್ಳಿ ಸೇರಿದಂತೆ 8 ತಂಡಗಳು ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದವು. ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮೈಕ್ರೋಪಿನಿಶ್ ಸಂಸ್ಥಾಪಕ ತಿಲಕ ವಿಕಂಶಿ, ಜಿತೋ ಅಂತರರಾಷ್ಟ್ರೀಯ ಶಾಖೆಯ ಅಧ್ಯಕ್ಷ ಗೌತಮ ಓಸ್ತವಾಲ್, ಸೋಹನ ಜೈನ್, ಭವರಲಾಲ್ ಜೈನ್, ಪೂರನ ನಾಹತಾ ಆಗಮಿಸಿದ್ದರು.
ಜಿತೋ ಹುಬ್ಬಳ್ಳಿ ಶಾಖೆ ಉಪಾಧ್ಯಕ್ಷ ಅನಿಲ ಜೈನ್, ಪ್ರಧಾನ ಕಾರ್ಯದರ್ಶಿ ಭರತ ಪಟವಾರಿ, ಟೂರ್ನಾಮೆಂಟ್ ಸಂಚಾಲಕ ರಾಜನ ಜೈನ್, ಆಶಿಷ ನಾಹತಾ, ಬಾಹುಬಲಿ ತಾತೇಡ, ಸುರೇಶ ಜೈನ್ ಇನ್ನಿತರರಿದ್ದರು.